ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುತ್ರ ಶರತ್ ಕಾಂಗ್ರೆಸ್ ಗೆ: ಅಡ್ಡಗೋಡೆಯ ಮೇಲೆ ದೀಪವಿಟ್ಟ ಬಿ.ಎನ್.ಬಚ್ಚೇಗೌಡ

|
Google Oneindia Kannada News

ಬೆಂಗಳೂರು, ಸೆ 19: ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ಸಿಗದೇ, ಪಕ್ಷದ ಅಭ್ಯರ್ಥಿಯ ವಿರುದ್ದವೇ ಕಣಕ್ಕಿಳಿದು ಗೆದ್ದ ಶರತ್ ಬಚ್ಚೇಗೌಡ, ಕಾಂಗ್ರೆಸ್ ಪಕ್ಷ ಸೇರಲಿದ್ದಾರೆಯೇ ಎನ್ನುವ ಪ್ರಶ್ನೆಗೆ ತಂದೆ, ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ ಸ್ಪಷ್ಟ ಉತ್ತರವನ್ನು ನೀಡಲಿಲ್ಲ.

ವಿಧಾನಸೌಧದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, "ಕಾಂಗ್ರೆಸ್ ಸೇರುವುದು ಅಥವಾ ಬಿಡುವುದು ಅವನಿಗೆ ಬಿಟ್ಟ ವಿಚಾರ'ಎಂದು ಬಚ್ಚೇಗೌಡ್ರು ಹೇಳಿದ್ದಾರೆ. ಜೊತೆಗೆ, ಹಲವು ತಿಂಗಳುಗಳ ನಂತರ ಸಿಎಂ ಯಡಿಯೂರಪ್ಪನವರನ್ನು ಗೌಡ್ರು ಹೊಗಳಿದ್ದಾರೆ.

ಹೊಸಕೋಟೆ: ಎಂಟಿಬಿ ನಾಗರಾಜ್ ಇಟ್ಟ ಹೆಜ್ಜೆಗೆ ಶರತ್ ಬಚ್ಚೇಗೌಡ ಬೇಸ್ತು ಹೊಸಕೋಟೆ: ಎಂಟಿಬಿ ನಾಗರಾಜ್ ಇಟ್ಟ ಹೆಜ್ಜೆಗೆ ಶರತ್ ಬಚ್ಚೇಗೌಡ ಬೇಸ್ತು

ಹೊಸಕೋಟೆ ಉಪಚುನಾವಣೆಯಲ್ಲಿ, ಆಗರ್ಭ ಶ್ರೀಮಂತ ಎಂ.ಟಿ.ಬಿನಾಗರಾಜ್ ಎನ್ನುವ ಎದುರಾಳಿ, ರಾಷ್ಟ್ರೀಯ ಪಕ್ಷದ ಚಿಹ್ನೆಯಡಿಯಲ್ಲಿ ಸ್ಪರ್ಧಿಸುತ್ತಿರುವಾಗ, ಪಕ್ಷೇತರ ಅಭ್ಯರ್ಥಿಯೊಬ್ಬರು ಪ್ರಬಲ ಪೈಪೋಟಿ ನೀಡಿ, ಅವರನ್ನು ಸೋಲಿಸಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದು ಅಪ್ಪ,ಮಗ.

ಆದರೆ, ಕಳೆದ ಉಪಚುನಾವಣೆಯಲ್ಲಿ ನಾನು ಬಿಜೆಪಿ ವಿರುದ್ದ ಕೆಲಸ ಮಾಡಿಲ್ಲ ಎಂದು ಬಚ್ಚೇಗೌಡ್ರು, ಚುನಾವಣೆ ಗೆದ್ದಿದ್ದು ಮಗನ ಪ್ರಯತ್ನದ ಫಲ ಎಂದು ಹೇಳಿದ್ದಾರೆ. ಶರತ್, ಬಿಜೆಪಿಗೆ ಸೇರಲಿದ್ದಾರೆಯೇ ಎನ್ನುವ ಪ್ರಶ್ನೆಗೆ ಬಚ್ಚೇಗೌಡ ನೀಡಿದ ಉತ್ತರ ಹೀಗಿತ್ತು:

ಕರ್ನಾಟಕದ ಜಾನುವಾರುಗಳಿಗೆ ತಗುಲಿದ ಹೊಸ ವೈರಸ್: ರೈತರು ಕಂಗಾಲು ಕರ್ನಾಟಕದ ಜಾನುವಾರುಗಳಿಗೆ ತಗುಲಿದ ಹೊಸ ವೈರಸ್: ರೈತರು ಕಂಗಾಲು

ಯುವಕರ ಬೆಂಬಲ ಇರುವ ಶರತ್ ಬಚ್ಚೇಗೌಡ

ಯುವಕರ ಬೆಂಬಲ ಇರುವ ಶರತ್ ಬಚ್ಚೇಗೌಡ

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ನಿಯೋಜಿತರಾದ ಮೇಲೆ, ಯುವಕರ ಬೆಂಬಲ ಇರುವ ಶರತ್ ಬಚ್ಚೇಗೌಡರನ್ನು ಪಕ್ಷಕ್ಕೆ ಕರೆತಂದು ಕ್ಷೇತ್ರದಲ್ಲಿ ಪಕ್ಷ ಕಟ್ಟುವ ತಂತ್ರವನ್ನು ರೂಪಿಸಿದ್ದರು. ಶರತ್, ಡಿಕೆಶಿ, ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳಿಗೆ, ಶರತ್ ಜೊತೆಗೆ ಚುನಾವಣೆಯಲ್ಲಿ ಕೆಲಸ ಮಾಡಿದ ಯುವಕರು ಹೇಳಿದ್ದರು. ಆದರೆ, ಆ ವಿಚಾರ ನಂತರ ತಣ್ಣಗಾಗಿತ್ತು.

ನಾನು ಬಿಜೆಪಿಯ ಸಂಸದ

ನಾನು ಬಿಜೆಪಿಯ ಸಂಸದ

"ಕಾಂಗ್ರೆಸ್ ಸೇರ್ಪಡೆ ಆಗವುದು ಅವನಿಗೆ ಬಿಟ್ಟ ವಿಚಾರ. ಆ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಬಿಜೆಪಿಯ ಸಂಸದ, ಶರತ್ ಸ್ವಾಭಿಮಾನಿಯಾಗಿ ಚುನಾವಣೆಗೆ ನಿಂತು ಗೆದ್ದಿದ್ದಾನೆ. ಅವನ ಮುಂದಿನ ಭವಿಷ್ಯವನ್ನು ಅವನೇ ರೂಪಿಸಿಕೊಳ್ಳುತ್ತಾನೆ" ಎಂದು ಬಚ್ಬೇಗೌಡ ಹೇಳಿದ್ದಾರೆ.

ಶರತ್, ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಈಗ ಏನನ್ನೂ ಹೇಳಲು ಸಾಧ್ಯವಿಲ್ಲ

ಶರತ್, ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಈಗ ಏನನ್ನೂ ಹೇಳಲು ಸಾಧ್ಯವಿಲ್ಲ

"ನಾನು ಬಿಜೆಪಿಯಲ್ಲಿದ್ದು ಆ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ಆತನ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಈಗ ಏನನ್ನೂ ಹೇಳಲು ಸಾಧ್ಯವಿಲ್ಲ" ಎಂದು ಬಿ.ಎನ್.ಬಚ್ಚೇಗೌಡ ಹೇಳುವ ಮೂಲಕ, ಮಗ ಕಾಂಗ್ರೆಸ್ ಸೇರಲಿದ್ದಾನೆ ಎನ್ನುವ ವಿಚಾರದ ಬಗ್ಗೆ ಸ್ಪಷ್ಟ ಉತ್ತರವನ್ನು ಬಚ್ಚೇಗೌಡ್ರು ನೀಡಲಿಲ್ಲ.

Recommended Video

ಉಪ ಮುಖ್ಯಮಂತ್ರಿ C.S Ashwathnarayan ಅವರಿಗೂ Covid Positive | Oneindia Kannada
ಯಡಿಯೂರಪ್ಪನವರು ಅನುಭವಿ ರಾಜಕಾರಣಿ

ಯಡಿಯೂರಪ್ಪನವರು ಅನುಭವಿ ರಾಜಕಾರಣಿ

"ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗಲಿದ್ದಾರೆ ಎನ್ನುವುದು ಬರೀ ಊಹಾಪೋಹ. ಯಡಿಯೂರಪ್ಪನವರು ಅನುಭವಿ ರಾಜಕಾರಣಿ. ಉತ್ತಮವಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ, ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಸರಕಾರವಿದೆ. ಹಾಗಾಗಿ, ವರಿಷ್ಠರು ಎಚ್ಚರಿಕೆಯ ತೀರ್ಮಾನವನ್ನು ಇಡಲಿದ್ದಾರೆ"ಎಂದು ಬಚ್ಚೇಗೌಡ್ರು ಈ ಸಂದರ್ಭದಲ್ಲಿ ಹೇಳಿದ್ದಾರೆ.

English summary
His Political Future He Will Decide: BN Bache Gowda On His Son Sharath Joining Congress,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X