ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇಗ್, ಡಿಕೆಶಿ ವಿರುದ್ಧ ಮತ್ತಷ್ಟು ದಾಖಲೆ ನೀಡಿದ ಹಿರೇಮಠ್

|
Google Oneindia Kannada News

SR Hiremath
ಬೆಂಗಳೂರು, ಜ.18 : ಸಿಎಂ ಸಿದ್ದರಾಮಯ್ಯ ಸಂಪುಟದ ಸಚಿವರಾದ ಡಿಕೆ ಶಿವಕುಮಾರ್ ಮತ್ತು ರೋಷನ್ ಬೇಗ್ ಅಕ್ರಮಗಳ ಕುರಿತು ಮತ್ತೊಂದು ಕಂತಿನ ದಾಖಲೆ ಬಿಡುಗಡೆ ಮಾಡಿರುವ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಇಬ್ಬರು ಸಚಿವರ ವಿರುದ್ಧ ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಎಸ್.ಆರ್.ಹಿರೇಮಠ್, ಸಚಿವ ರೋಷನ್ ಬೇಗ್ ಮತ್ತು ಡಿಕೆ ಶಿವಕುಮಾರ್ ಅವರ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದರು. ಇಬ್ಬರು ಸಚಿವರ ಅಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. [ಡಿಕೆಶಿ ವಿರುದ್ಧದ ಚಾರ್ಚ್ ಶೀಟ್]

ರೋಷನ್ ಬೇಗ್ : ಸಚಿವ ರೋಷನ್ ಬೇಗ್ ಡಿ.ಜಿ.ಹಳ್ಳಿಯಲ್ಲಿ 50 ಲಕ್ಷ ರೂ. ನೀಡಿ ಪ್ಲಾಂಟ್ ಹೌಸ್ ವೊಂದನ್ನು ದಯಾನಂದ ಪೈ ಅವರಿಂದ ಮಾಡಿಸಿ ಐದು ಲಕ್ಷ ರೂ. ಮುಂಗಡ ಹಣ ಪಡೆದಿದ್ದಾರೆ. ಆದರೆ, ಉಳಿದ 45 ಲಕ್ಷ ರೂ.ಗಳಿಗೆ ಜಿಪಿ, ಅಗ್ರಿಮೆಂಟ್ ಆಗಿಲ್ಲ. ಇದನ್ನು ನಕಲಿ ದಾಖಲೆ ಮೂಲಕ ತಮ್ಮ ಪತ್ನಿ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರಿನಲ್ಲಿ ಹಲವಾರು ನಿವೇಶನಗಳನ್ನು ಹೊಂದಿರುವ ರೋಷನ್ ಬೇಗ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ತಮಗೆ ಬೆಂಗಳೂರಿನಲ್ಲಿ ನಿವೇಶನವಿಲ್ಲ ಎಂದು ನಕಲಿ ದಾಖಲೆ ನೀಡಿ ಸೈಟ್ ನೀಡಿ ಎಂದು ಮನವಿ ಮಾಡಿದ್ದಾರೆ ಎಂದು ದೂರಿದರು. ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂಲಲಾ ತೆಲಗಿ ಜೊತೆ ಬೇಗ್ ಸಂಪರ್ಕ ಹೊಂದಿದ್ದರು ಎಂದು ಹಿರೇಮಠ್ ಗಂಭೀರ ಆರೋಪ ಮಾಡಿದರು.

ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರು ಸಹೋದರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್ ಜೊತೆಗೆ ಸೇರಿ ಹಲವಾರು ಭೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ, ಹಜ್ ಖಾತೆ ಸಚಿವ ರೋಷನ್ ಬೇಗ್ ಅಕ್ರಮ ಆಸ್ತಿಗಳಿಕೆ ಪಕ್ರರಣ ಸೇರಿದಂತೆ ಹಲವಾರು ಆರೋಪಗಳನ್ನು ಎದುರಿಸುತ್ತಿದ್ದಾರೆ ಆದ್ದರಿಂದ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಹಿರೇಮಠ್ ಒತ್ತಾಯಿಸಿದರು.

ಉಭಯ ಸಚಿವರ ಮೇಲಿರುವ ಆರೋಪಗಳ ಕುರಿತು ಸರ್ಕಾರ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ತನಿಖೆ ಮುಗಿದು ವರದಿ ಬರುವ ತನಕ ಇಬ್ಬರು ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಹಿರೇಮಠ್ ಆಗ್ರಹಿಸಿದರು.[ಹಿರೇಮಠ್ ಅವರಿಗೆ ಒನ್ ಇಂಡಿಯಾ ಪ್ರಶಸ್ತಿ]

English summary
Samaja Parivaratana Samudaya (SPS) chief SR Hiremath wants investigation on minister DK Shivakumar and R. Roshan Baig. On Saturday, Jan 18 he addressed media in Bangalore and released documents against both ministers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X