ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಂದುಗಳ ಸರಣಿ ಹತ್ಯೆ ಕೇಂದ್ರ ತಂಡದಿಂದ ತನಿಖೆಗೆ ಆಗ್ರಹ

|
Google Oneindia Kannada News

ಬೆಂಗಳೂರು, ಮಾರ್ಚ್ 6: ಕಳೆದ ಕೆಲವು ವರ್ಷಗಳಲ್ಲಿ ಸಂಪೂರ್ಣ ದೇಶದಲ್ಲಿ ಬೇರೆ ಬೇರೆ ಹಿಂದುತ್ವವಾದಿ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಡುವುದು, ಅವರನ್ನು ಬೇಕೆಂದೇ ಗುರಿ ಮಾಡಿ ಸಂಚು ರೂಪಿಸಿ ಕೊಲ್ಲುವ ಘಟನೆಗಳು ಅತ್ಯಧಿಕ ಪ್ರಮಾಣದಲ್ಲಿ ನಡೆಯುತ್ತಿದೆ.

ಈ ಅಪರಾಧಿಗಳ ಮೇಲೆ ಕಠಿಣ ಕಾರ್ಯಾಚರಣೆ ಮಾಡಲು 'ಕೇಂದ್ರೀಯ ತನಿಖಾ ತಂಡ'ದ ಮೂಲಕ ಆಳವಾದ ತನಿಖೆ ಮಾಡಬೇಕು ಎಂದು ಆಗ್ರಹಿಸಿ ಹಿಂದೂ ಜಾಗೃತಿ ಸಮಿತಿ ಸದಸ್ಯರು ಅಪರ ಜಿಲ್ಲಾಧಿಕಾರಿಗಳಾದ ಅನಿತಾ ಲಕ್ಷೀ ಬೆಂಗಳೂರು ನಗರ ಜಿಲ್ಲೆ ಇವರನ್ನು ಭೇಟಿ ಮಾಡಿ, ಕೇಂದ್ರೀಯ ಗೃಹಮಂತ್ರಿ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಲು ಸೂಚಿಸಿದರು.

ಕೆಲವು ಸಮಯದ ಹಿಂದೆ ದೆಹಲಿಯಲ್ಲಿ ಶ್ರೀರಾಮ ಜನ್ಮಭೂಮಿಯ ದೇವಸ್ಥಾನಕ್ಕಾಗಿ ನಿಧಿಸಂಗ್ರಹ ಮಾಡುವ ರಿಂಕೂ ಶರ್ಮಾ ಎಂಬ ಹೆಸರಿನ ಹಿಂದೂ ಯುವಕನನ್ನು ಮತಾಂಧ ಯುವಕರು ಚಾಕುವಿನಿಂದ ಇರಿದು ಹತ್ಯೆ ಮಾಡಿದರು. ದೇಶದ ರಾಜಧಾನಿಯಲ್ಲಿ ಇಂತಹ ಘಟನೆಗಳು ಹಾಡುಹಗಲೇ ಘಟಿಸುತ್ತಿರುವಾಗ, ಇತರೆಡೆಗೆ ಯಾವ ಸ್ಥಿತಿ ಇರಬಹುದು, ಎಂಬ ವಿಚಾರವನ್ನೂ ಮಾಡಲು ಸಾಧ್ಯವಿಲ್ಲ.

Hindu Jagruti Samiti demand central investigation agency enquiry on RSS, Hindu leader killings

ದೆಹಲಿಯ ಘಟನೆಯು ಮಾಸುವ ಮುನ್ನವೇ ಕೇರಳದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಂದೂ ಕೃಷ್ಣಾ ಇವರನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಹತ್ಯೆ ಮಾಡಿದರು. ಕರ್ನಾಟಕ ರಾಜ್ಯದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾದ ಶರತ್ ಮಡಿವಾಳ, ರುದ್ರೇಶ, ಕುಟ್ಟಪ್ಪ, ಪ್ರವೀಣ ಪೂಜಾರಿ ಮತ್ತು ರಾಜು ಇವರ ಹತ್ಯೆಯಾಯಿತು. ಇವರಲ್ಲಿ ಕೆಲವು ಕೊಲೆಗಡುಕರನ್ನು ಹಿಡಿಯಲಾಗಿದೆ ಮತ್ತು ಕೆಲವರು ಇನ್ನೂ ತಲೆಮರೆಸಿಕೊಂಡಿದ್ದಾರೆ.

'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)'ನ ಮೈಸೂರನ ಅಬಿದ್ ಪಾಶಾ ಮತ್ತು ಅವರ ಗುಂಪು ಅರ್. ಎಸ್. ಎಸ್. ಮತ್ತು ಭಾಜಪದ 8 ಹಿಂದುತ್ವನಿಷ್ಠ ಕಾರ್ಯಕರ್ತರನ್ನು ಕ್ರೂರವಾಗಿ ಹತ್ಯೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕೇರಳದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವಾಹಕರಾದ ರಾಜೇಶ ಇವರನ್ನು ಸಾಮ್ಯವಾದಿ ಕಾರ್ಯಕರ್ತರು ಕೈಗಳನ್ನು ಕತ್ತರಿಸಿ, ಅವರ ಶರೀರದ ಮೇಲೆ 15 ಬಾರಿ ಚೂರಿಯಿಂದ ಇರಿದು ಹತ್ಯೆ ಮಾಡಿದರು. ಇದೇ ರೀತಿ ಬಂಗಾಲದ ಪರಗನಾ ಜಿಲ್ಲೆಯ ಟೀಟಾಗಢ ನಗರಪಾಲಿಕೆಯ ಭಾಜಪದ ಪಾರ್ಷದ ಮನೀಷ ಶುಕ್ಲಾ, ಭೋಪಾಲ ಭಾಜಪದ ನಗರಪಾಲಿಕೆಯ ಅಧ್ಯಕ್ಷರಾದ ಪ್ರಹ್ಲಾದ್ ಬಂದವಾರ, ಮಂದಸೌರನ ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರಾದ ಯುವರಾಜ ಸಿಂಹ ಚೌಹಾನ, ರತಲಾಮದ ಭಾಜಪ ಕಾರ್ಯಕರ್ತ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪದಾಧಿಕಾರಿಗಳಾದ ಹಿಂಮತ ಪಾಟೀಲ, ಬಡವಾನಿಯ ಭಾಜಪದ ಮುಖಂಡರಾದ ಮನೋಜ ಠಾಕರೆ ಮುಂತಾದವರ ಸರಣಿ ಹತ್ಯೆಗಳಾಗಿವೆ.

ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದೆ. ಈ ರೀತಿ ಹಿಂದೂ ಮುಖಂಡರ ಹತ್ಯೆಯಾಗುವ ಪ್ರಮಾಣವು ವಿಶೇಷವಾಗಿ ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಬಂಗಾಲದ ರಾಜ್ಯಗಳಲ್ಲಿ ಅತ್ಯಧಿಕವಾಗಿದೆ.

ಈ ಹತ್ಯೆಯ ಜ್ವಾಲೆಯು ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿಯೂ ತಲುಪಿದೆ ಮತ್ತು ಕೇವಲ ಹಿಂದುತ್ವದ ಕಾರ್ಯವನ್ನು ಮಾಡುವ ಕಾರ್ಯಕರ್ತರನ್ನು ಬೇಕೆಂದೇ ಗುರಿ ಪಡಿಸಲಾಗುತ್ತಿದೆ. ಇದರಿಂದ ಇವು ಕೇವಲ ಹತ್ಯೆಗಳಲ್ಲದೇ ಹತ್ಯೆಗಳ ಷಡ್ಯಂತ್ರವಾಗಿದೆ ಎಂದು ಸಿದ್ಧವಾಗುತ್ತದೆ.

ಇಲ್ಲಿಯವರೆಗೆ ಈ ಹತ್ಯೆಗಳ ಅಪರಾಧಿಗಳ್ಯಾರು ಎಂದು ವಿವಿಧ ತನಿಖಾ ತಂಡಗಳಿಂದ ಸ್ಷಷ್ಟವಾಗಿದ್ದರೂ ಸಂಬಂಧಿತ ರಾಜ್ಯ ಸರಕಾರಗಳಿಂದ ಈ ಪ್ರಕರಣಗಳಲ್ಲಿ ದೃಢ ಕಾರ್ಯಾಚರಣೆಯಾಗುತ್ತಿರುವುದು ಗಮನಕ್ಕೆ ಬಂದಿಲ್ಲ. ಈ ಹತ್ಯೆಗಳನ್ನು ತಡೆಗಟ್ಟಲು ಆಯಾರಾಜ್ಯಗಳ ಪೊಲೀಸ್ ತನಿಖೆಯಲ್ಲಿ ನಿರ್ಲಕ್ಷ್ಯ ಮಾಡುವುದು ಕಂಡು ಬರುತ್ತಿದೆ.

ಪೊಲೀಸರು ಮತ್ತು ಅಲ್ಲಿನ ರಾಜ್ಯ ಸರಕಾರವು ಈ ಹತ್ಯೆಗಳ ತನಿಖೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿವೆ. ಸಂಪೂರ್ಣ ದೇಶದಲ್ಲಿ ನಡೆಯುತ್ತಿರುವ ಹಿಂದೂ ಮುಖಂಡರ ಈ ರೀತಿಯ ಹತ್ಯೆಯು ಒಂದು ವ್ಯಾಪಕ ನಿಯೋಜಿತ ಷಡ್ಯಂತ್ರದ ಭಾಗವಾಗಿದೆ, ಎಂದು ಸ್ಪಷ್ಟವಾಗಿ ಕಂಡು ಬರುತ್ತಿದೆ.

ಈ ಹತ್ಯೆಗಳನ್ನು ಮಾಡುವ ಮತಾಂಧರು, ಅವರ ಮೂಲಕ ಹತ್ಯೆಗಳನ್ನು ಮಾಡಿಸುವ ಸೂತ್ರಧಾರರು ಮತ್ತು ಈ ಪ್ರಕರಣಗಳನ್ನು ಹತ್ತಿಕ್ಕಲು ಪ್ರಯತ್ನಿಸುವವರನ್ನು ಹುಡುಕಿ ಅವರ ಮೇಲೆ ಕಠಿಣ ಕಾರ್ಯಾಚರಣೆಯಾಗಲು ಈ ಪ್ರಕರಣಗಳ ಕುರಿತು ರಾಷ್ಟ್ರೀಯ ತನಿಖಾ ದಳದ ಮೂಲಕ ಆಳವಾದ ವಿಚಾರಣೆ ಮಾಡುವುದು ಅತ್ಯಾವಶ್ಯಕವಾಗಿದೆ.

English summary
Hindu Jagruti Samiti demanded central investigation agency enquiry on RSS, Hindu leader killings submitted a request letter to Additional DC Bengaluru Anita lakshmi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X