ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜ್ಞಾನಕ್ಕೆ ಸವಾಲು ಎಸೆಯುವ 'ಕಾವಡಿ' ಮಹೋತ್ಸವ ರಹಸ್ಯ ನಿಗೂಢ!

|
Google Oneindia Kannada News

ಬೆಂಗಳೂರು, ಆ. 12: ದೇಹದ ಬೆನ್ನಿಗೆ ಎರಡು ಕಡೆ ಕಂಬಿಗಳಿಂದ ಚುಚ್ಚಿ ದಾರದಿಂದ ಚಕ್ರಕ್ಕೆ ಕಟ್ಟಲಾಗಿದೆ. ಗಡಿಯಾರದಂತೆ ತಿರುವ ಎತ್ತಿನ ಗಾಡಿ ಚಕ್ರದಲ್ಲಿ ತಿರುಗುವ ದೇಹಗಳು. ಕಿಂಚಿತ್ತು ನೋವು ಇಲ್ಲದೇ ಭಕ್ತಿಯಲ್ಲಿ ಮುಳಗಿದ್ದ ಭಕ್ತರು. ಇದು ಒಂದಡೆಯಾದ್ರೆ, ಮತ್ತೊಂದೆಡೆ ದೇಹಕ್ಕೆ ಶೂಲಗಳಿಂದ ಚುಚ್ಚಿಸಿಕೊಂಡು ವಾಹನದಲ್ಲಿ ಸಾಗಿದ ದೃಶ್ಯ ಕಂಡುಬಂತು.

ಚಿಕ್ಕಪೇಟೆಯ ಕೋದಂಡರಾಮಸ್ವಾಮಿ ದೇಗಲದ ಬಳಿ ಶುಕ್ರವಾರ ನಡೆದ ಸುಬ್ರಮಣ್ಯಸ್ವಾಮಿ ಕಾವಡಿಯ ವಿಶೇಷತೆಯಿದು. ಪವಾಡೋವೋ, ವಿಪರ್ಯಾಸವೋ ಈವರೆಗೂ ಹೇಳುವರೂ ಯಾರೂ ಇಲ್ಲ. ಆದರೆ ನೂರಾರು ಮಂದಿ ಸುಬ್ರಮಣ್ಯಸ್ವಾಮಿ ಭಕ್ತರು ದೇಹಕ್ಕೆ ಕಾವಡಿ ಕೋರಿಕೆ ತೀರಿಸುವ ಸಲುವಾಗಿ ದೇಹ ದಂಡನೆ ಮಾಡಿದ ಪರಿ ಜನರನ್ನು ಮೂಕ ವಿಸ್ಮಿತರನ್ನಾಗಿ ಮಾಡಿಸಿತು.

ಬೆನ್ನಿನಲ್ಲಿ ಮೂಳೆ ಚುಚ್ಚಿಸಿಕೊಂಡು ಎತ್ತಿನ ಗಾಡಿಯಲ್ಲಿ ತಿರುಗಿದ ಭಕ್ತರು:

ಸುಬ್ರಮಣ್ಯಸ್ವಾಮಿ ನೂರಾರು ಭಕ್ತರು ಕಾವಡಿ ಎತ್ತಿದ್ದರು. ಮೂವರು ಇಬ್ಬರ ಭಕ್ತರ ಬೆನ್ನಿನ ಭಾಗಕ್ಕೆ ಕಂಬಿ ಚುಚ್ಚಿ ಕಾಲನ್ನು ಚಕ್ರಕ್ಕೆ ಕಟ್ಟಲಾಗಿತ್ತು. ತಿರುಗುವ ಚಕ್ರದಲ್ಲಿ ಭಕ್ತರು ನೇತಾಡುತ್ತಿದ್ದರು. ಕೈ, ಕಾಲು ನೆರವು ಇಲ್ಲದೇ ದೇಹಕ್ಕೆ ಚುಚ್ಚಿದ ಶೂಲದಲ್ಲಿ ತೇಲಾಡುತ್ತಿದ್ದರು. ಅವರಿಗೆ ನೋವಿನ ಅರಿವು ಇರಲಿಲ್ಲ. ಸಾಮಾನ್ಯರಂತೆ ವರ್ತಿಸುತ್ತಿದ್ದರು. ನೋಡುಗರಿಗೆ ಭೀತಿ ಹುಟ್ಟಿಸಿದರೂ ಅದರ ಪರಿವೇ ಇಲ್ಲದೇ ಕಾವಡಿ ಭಕ್ತರು ಮುಳುಗಿದ್ದರು.

Bengaluru: Hindu devotees took part in lord Subramanya swamy Kavadi In Chickpet

ದವಡೆಯಲ್ಲಿ ತ್ರಿಶೂಲಗಳು:

ಇನ್ನೂ 20 ಕ್ಕೂ ಹೆಚ್ಚು ಭಕ್ತರ ದವಡೆಗೆ ತ್ರಿಶೂಲ ಚುಚ್ಚಲಾಗಿತ್ತು. ಹನಿ ರಕ್ತ ಬಂದ ಕುರುಹು ಕಾಣಿಸಲಿಲ್ಲ. ದವಡೆಯಲ್ಲಿ ಒಂದಿಂಚು ವೃತ್ತದ ತ್ರಿಶೂಲ ಕೈ ನೆರವಿಲ್ಲದೇ ಬಾಯಿಯಲ್ಲಿಯೇ ಹಿಡಿದಿಟ್ಟುಕೊಂಡಿದ್ದರು. ರಕ್ತ ಬರದಂತೆ ವಿಭೂತಿ ಹಚ್ಚಲಾಗಿತ್ತು. ಪವಾಡವೋ, ದೇವರ ಭಕ್ತಿಯೋ ಗೊತ್ತಿಲ್ಲ. ಭಕ್ತರ ದೇಹ ದಂಡನೆ ಪರಿ ನೋಡುಗರನ್ನು ಮಾತ್ರ ಬೆಚ್ಚಿ ಬೀಳಿಸುವಂತಿತ್ತು. ಗಾಯದ ಅರಿವೇ ಇಲ್ಲದೇ ಭಕ್ತರು ಮಾತ್ರ ತಮ್ಮದೇ ಲೋಕದಲ್ಲಿ ತಲ್ಲೀನರಾಗಿದ್ದರು.

ಸ್ವಾಮಿಯ ಭಕ್ತಿ:

ಪ್ರತಿ ವರ್ಷ ಸುಬ್ರಮಣ್ಯ ಸ್ವಾಮಿಯ ಕಾವಡಿ ಹರಕೆ ಹೊತ್ತವರು ಈ ರೀತಿಯಾಗಿ ಕೋರಿಕೆ ತೀರುಸುತ್ತಾರೆ. ದೇವರು ಮೈಮೇಲೆ ಬರುವಾಗ ಅದರ ನೋವಿನ ಪರಿವೇ ಇರುವುದಿಲ್ಲ. ರಕ್ತವೂ ಬರುವುದಿಲ್ಲ. ಒಮ್ಮೆ ತಿರುಚಿಯಲ್ಲಿರುವ ಸುಬ್ರಮಣ್ಯಸ್ವಾಮಿಗೆ ಹರಕೆ ತೀರಿಸಿ ವಾಪಸು ಬಂದ ಬಳಿಕ ಚುಚ್ಚಿರುವ ಗಾಯದ ಕುರುಹು ಸಹ ಇರಲ್ಲ ಎಂದು ಕಾವಡಿಯ ಬಗ್ಗೆ ವಿವರಿಸುತ್ತಾರೆ ಚಿಕ್ಕಪೇಟೆಯ ನಿವಾಸಿ ಮಣಿ. ಎಲ್ಲವೂ ದೇವರ ಮಹಿಮೆ ಎಂದು ಸ್ಮರಿಸುತ್ತಾರೆ. ಕಾವಡಿಯ ಭಾಗವಾಗಿ ದೇಹ ದಂಡನೆ ಮಾಡಿಕೊಂಡಿದ್ದ ಭಕ್ತರನ್ನು ನೋಡಲು ದಂಡು ದಂಡು ಜನ ಬಂದು ವೀಕ್ಷಿಸುತ್ತಿದ್ದರು.

Bengaluru: Hindu devotees took part in lord Subramanya swamy Kavadi In Chickpet

ದೇಹ ದಂಡನೆ ಮಾಡಿ ಹರಕೆ ತೀರಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಇದೆ. ಹೀಗಾಗಿ ಇಲ್ಲಿ ಮಾತ್ರವಲ್ಲ, ತಮಿಳುನಾಡು, ಕರ್ನಾಟಕ, ಎಲ್ಲಾ ಕಡೆ ಭಕ್ತರು ಈ ರೀತಿ ದೇಹ ದಂಡನೆ ಮಾಡಿಕೊಂಡು ಹರಕೆ ತೀರಿಸುತ್ತಾರೆ. ಇನ್ನೂ ಕೆವಲರು ದೃಷ್ಟಟಗಳನ್ನು ಬಿಟ್ಟೇ ಬಿಡುತ್ತಾರೆ. ಕೆಲವರು ಪ್ರತಿ ವರ್ಷ ಇದೇ ರೀತಿಯ ಹರಕೆ ವೇಲ್ ಮುಗುಗ ಸ್ವಾಮಿಗೆ ತೀರುಸುತ್ತಾರೆ ಎಂದು ಕಾವಡಿ ಹೊತ್ತ ಯುವತಿಯ ತಾಯಿ ನಾಗಮಣಿಯಮ್ಮ ಕಾವಡಿಯ ಬಗ್ಗೆ ವಿವರಿಸುತ್ತಾರೆ.

ವೈಜ್ಞಾನಿಕ ಕಾರಣ ಇದೆಯೋ, ಪವಾಡವೋ ಗೊತ್ತಿಲ್ಲ. ಆದ್ರೆ ದೇಹಕ್ಕೆ ಆ ಪರಿ ಶೂಲ ಚುಚ್ಚಿದರೂ ರಕ್ತ ಬರದೇ ಇರುವುದು. ಕಾವಡಿ ಕೋರಿಕೆ ಮುಗಿಸಿದ ಬಳಿಕ ಆ ಗಾಯದ ಕುರುಹು ಇಲ್ಲದಂತೆ ವಾಸಿಯಾಗುವುದು ಮಾತ್ರ ಇನ್ನೂ ವಿಸ್ಮಯವಾಗಿಯೇ ಉಳಿದುಕೊಂಡಿದೆ. ಸುಬ್ರಮಣ್ಯಸ್ವಾಮಿಯ ಭಕ್ತರ ಕಾವಡಿ ಸರ್ವೆ ಸಾಮಾನ್ಯವಾಗಿದ್ದು, ದೇಹ ದಂಡನೆ ಪರಿ ಮಾತ್ರ ಬೆರಗು ಮೂಡಿಸುತ್ತದೆ.

English summary
Bengaluru: Hindu devotees took part in lord Subramanya swamy Kavadi In Chickpet. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X