ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಗರೇಟ್‌ ಬೆಲೆ ಹೆಚ್ಚಳ: ಧೂಮಪಾನಿಗಳು ಏನಂತಾರೆ?

By Ashwath
|
Google Oneindia Kannada News

ಬೆಂಗಳೂರು, ಜೂ.24: ರೈಲ್ವೆ ಬೆಲೆಯನ್ನು ಏರಿಕೆ ಮಾಡಿರುವ ಕೇಂದ್ರ ಸರ್ಕಾರ ಸಿಗರೇಟ್‌ ಬೆಲೆಯಲ್ಲಿ ಭಾರಿ ಏರಿಕೆ ಮಾಡುವ ಸಾಧ್ಯತೆಯಿದೆ. ಕೆಲವೊಂದು ಮೂಲಗಳ ಪ್ರಕಾರ ಪ್ರತಿ ಸಿಗರೇಟ್‌‌ಗೆ 3.5 ರುಪಾಯಿಯಷ್ಟು ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ.

ಜುಲೈ 10ರಂದು ಹಣಕಾಸು ಸಚಿವ ಅರುಣ್‌ ಜೇಟ್ಲಿಯವರು ಬಜೆಟ್‌ ಮಂಡಿಸಲಿದ್ದು ಸಿಗರೇಟ್ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಸಾಧ್ಯತೆಯಿದೆ. ಕೇಂದ್ರ ಆರೋಗ್ಯ ಸಚಿವ ಮೂಲತಃ ವೈದ್ಯರಾಗಿರುವ ಹರ್ಷ‌ವರ್ಧ‌ನ್‌ ಅವರು ಈ ಸಲಹೆಯನ್ನು ಸರ್ಕಾರಕ್ಕೆ ನೀಡಿರುವ ಹಿನ್ನಲೆಯಲ್ಲಿ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.[ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!]

ಸಿಗರೇಟ್‌‌ ಮೇಲೆ ಹೆಚ್ಚಿನ ತೆರಿಗೆ ವಿಧಿಸಬಹುದು ಎಂದು ಹೇಳಲಾಗುತ್ತಿರುವ ಹಿನ್ನಲೆಯಲ್ಲಿ ಒನ್‌ ಇಂಡಿಯಾ ಕನ್ನಡ ಕೆಲವು ಸಿಗರೇಟ್‌ ಪ್ರಿಯರನ್ನು ಮಾತನಾಡಿಸಿದ್ದು ಅವರ ಹೇಳಿಕೆಗಳನ್ನು ಇಲ್ಲಿ ನೀಡಲಾಗಿದೆ.[ಬೆಂಗಳೂರಿನ ಧೂಮಪಾನಿಗಳೆ ನಿಮಗಿದು ನೆನಪಿರಲಿ]

 ಕಡಿಮೆಯಾಗಿಲ್ಲ ಸಂಖ್ಯೆ ಹೆಚ್ಚಾಗಿದೆ

ಕಡಿಮೆಯಾಗಿಲ್ಲ ಸಂಖ್ಯೆ ಹೆಚ್ಚಾಗಿದೆ

"ನಾನು ಕಳೆದ ಮೂವತ್ತು ವರ್ಷ‌ಗಳಿಂದ ಸಿಗರೇಟ್‌ ವ್ಯಾಪಾರ ಮಾಡುತ್ತಿದ್ದೇನೆ. ಪ್ರತಿವರ್ಷ‌ ಸರ್ಕಾರ ಸಿಗರೇಟ್‌ ಬೆಲೆ ಹೆಚ್ಚಳ ಮಾಡುತ್ತಿದೆ. ಗ್ರಾಹಕರ ಸಂಖ್ಯೆ ಕಡಿಮೆಯಾಗಿಲ್ಲ. ಎರಡು ವರ್ಷ‌ಗಳ ಹಿಂದೆ ಪ್ರತಿದಿನ ಸಾಧಾರಣ 40 ಪ್ಯಾಕ್‌ ಮಾರಾಟವಾಗುತ್ತಿದ್ದರೆ, ಈಗ 70 ಪ್ಯಾಕ್‌ ಮಾರಾಟವಾಗುತ್ತಿದೆ"
- ಪೂನ್‌ಚಂದ್‌, ಸಿಗರೇಟ್‌ ವ್ಯಾಪಾರಸ್ಥರು.

 ನೋ ಪ್ರಾಬ್ಲಂ

ನೋ ಪ್ರಾಬ್ಲಂ

"ನೋಡಿ ಸರ್ಕಾರ ಪ್ರತಿ ವರ್ಷ ಪೆಟ್ರೋಲ್‌ ಬೆಲೆ ಹೆಚ್ಚಳ ಮಾಡುತ್ತಿದೆ. ಹಾಗೆಂದು ನಗರದಲ್ಲಿ ಗಾಡಿಗಳ ಸಂಖ್ಯೆ ಕಡಿಮೆಯಾಗಿದೆಯಾ? ಸೋ, ಬೆಲೆ ಏರಿಕೆ ಜಾಸ್ತಿ ಮಾಡಿದರೂ ನನಗೆ ಏನು ಆಗಲ್ಲ. ಪ್ರತಿದಿನ 12 ಸಿಗರೇಟ್‌ ಸೇದುತ್ತೇನೆ"
- ಮಹೇಶ್‌ ಬೆಂಗಳೂರು, ಯಸ್‌ ಬ್ಯಾಂಕ್‌ ಉದ್ಯೋಗಿ

 ಪತ್ನಿ ಕಿರಿಕಿರಿ

ಪತ್ನಿ ಕಿರಿಕಿರಿ

"ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಪತ್ನಿ ಮಾತನ್ನು ಕೇಳಿ ಸಿಗರೇಟ್‌ ಸೇದುವುದನ್ನು ಬಿಟ್ಟಿದ್ದಾರಂತೆ. ಹಾಗೆ ನನ್ನ ಹೆಂಡತಿಯೂ ಪ್ರತಿದಿನ ಸಿಗರೇಟ್‌ ಬಿಡುವಂತೆ ಕಿರಿಕಿರಿ ಮಾಡುತ್ತಿದ್ದಾಳೆ. ಈಗ ಮೂರು ರೂಪಾಯಿ ಜಾಸ್ತಿ ಆದರೆ ಮತ್ತೆ ಮನೆಯಲ್ಲಿ ಕೇಳುವುದೇ ಬೇಡ. ಸಿಗರೇಟ್‌ನ್ನು ಸೇದುವುದನ್ನು ಹಂತ ಹಂತವಾಗಿ ಕಡಿಮೆ ಮಾಡುತ್ತಿದ್ದೇನೆ. ಹಿಂದೆ ನಾನು ಪ್ರತಿದಿನ 10 ಸಿಗರೇಟ್‌ ಸೇದುತ್ತಿದ್ದೆ. ಈಗ ಆರಕ್ಕೆ ತಲುಪಿದೆ. ಮೂರು ರೂಪಾಯಿ ಜಾಸ್ತಿಯಾದರೆ ಪ್ರತಿದಿನ ಮೂರು ಸಿಗರೇಟ್‌ ಸೇದುತ್ತೇನೆ
-ನಾಗರಾಜ್‌ ಬೆಂಗಳೂರು, ಉದ್ಯಮಿ

 ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸುತ್ತಿದ್ದರಲ್ಲ

ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸುತ್ತಿದ್ದರಲ್ಲ

ನಾನು ಮೋದಿಯವರ ಅಭಿಮಾನಿ. ಸಿಗರೇಟ್ ರೇಟ್‌ ಜಾಸ್ತಿ ಮಾಡಿದ್ದರೂ ಆದಾಯ ತೆರಿಗೆ ಮಿತಿಯನ್ನು 2 ಲಕ್ಷ ರೂ.ಗಳಿಂದ 5 ಲಕ್ಷಕ್ಕೆ ಏರಿಸುತ್ತಾರಂತೆ. ಹೀಗಾಗಿ ಸಿಗರೇಟ್‌ ಬೆಲೆ ಹೆಚ್ಚಳ ಮಾಡಿದ್ದರೂ ಆದಾಯ ಮಿತಿಯನ್ನು ಹೆಚ್ಚಿಸಿದ್ದರಿಂದ ನನಗೆ ಏನು ಸಮಸ್ಯೆ ಇಲ್ಲ. ಕೆಲವು ಮಂದಿ ಸಿಗರೇಟ್‌ ಸೇದುವುದನ್ನು ಕಡಿಮೆ ಮಾಡಬಹುದೇನೋ?
ಭಾಸ್ಕರನ್‌‌ ಬೆಂಗಳೂರು, ಎಚ್‌ಡಿಎಫ್‌ಸಿ ಬ್ಯಾಂಕ್‌ ಉದ್ಯೋಗಿ

 ನನಗೆ ಸಮಸ್ಯೆ ಇಲ್ಲ

ನನಗೆ ಸಮಸ್ಯೆ ಇಲ್ಲ

"ನಾನು ಪ್ರತಿದಿನ ಸೇದಲ್ಲ.ಸ್ನೇಹಿತರೊಂದಿಗೆ ಕಾಫಿ ಕುಡಿಯಲು ಬಂದಾಗ ಅವರಿಂದಲೇ ಸಿಗರೇಟ್‌ ಪಡೆದು ಸೇದುತ್ತೇನೆ. ಹಾಗಾಗಿ ಬೆಲೆ ಏರಿಕೆ,ಇಳಿಕೆ ಮಾಡಿದರೆ ನನಗೆ ಏನು ಸಮಸ್ಯೆ ಇಲ್ಲ"
ನವೀನ್‌ ಬೆಂಗಳೂರು, ಯಸ್‌ ಬ್ಯಾಂಕ್‌ ಉದ್ಯೋಗಿ

ಪ್ರಯತ್ನ ಮಾಡುತ್ತೇನೆ

ಪ್ರಯತ್ನ ಮಾಡುತ್ತೇನೆ

ಪ್ರತಿದಿನ ಸಿಗರೇಟ್‌ಗಾಗಿ ನೂರು ರೂಪಾಯಿ ಖರ್ಚು ಮಾಡುತ್ತೇನೆ. ಮೂರು ರೂಪಾಯಿ ಹೆಚ್ಚಳ ಮಾಡಿದ್ರೆ 130 ರೂಪಾಯಿ ಆಗುತ್ತೆ. 30 ರೂಪಾಯಿ ಮಾಡಿದ್ರೆ ಒಂದು ಉತ್ತಮ ಊಟ ಮಾಡಬಹುದು. ಸಿಗರೇಟ್‌ ಸೇದುವುದನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೇನೆ
- ವಿನಯ್‌ ಬೆಂಗಳೂರು, ಚಾರ್ಟೆಡ್‌ ಅಕೌಂಟೆಂಟ್‌

ಮೂರು ರೂಪಾಯಿ ಹೈಕ್‌ ಆಗುತ್ತಾ?

ಮೂರು ರೂಪಾಯಿ ಹೈಕ್‌ ಆಗುತ್ತಾ?

"ಒಂದು ಸಿಗರೇಟ್‌ಗೆ ಮೂರು ರೂಪಾಯಿ ಜಾಸ್ತಿ ಮಾಡ್ತಾರಾ? ಮನೆಯಲ್ಲಿ ಮೊದಲೇ ಕಷ್ಟದಲ್ಲಿ ಹಣ ಕೊಡ್ತಾರೆ. ಸಿಗರೇಟ್‌ ಸೇದುವುದು ಮನೆಯವರಿಗೆ ಗೊತ್ತಿಲ್ಲ. ಅಷ್ಟೆಲ್ಲ ರೇಟ್‌ ಜಾಸ್ತಿ ಮಾಡಿದ್ರೆ ಸಿಗರೇಟ್‌ ಸೇದುವುದನ್ನು ಕಡಿಮೆ ಮಾಡುತ್ತೇನೆ"
ವಿನ್ಯಾಸ್‌ ಎಂಜಿನಿಯರಿಂಗ್‌ ವಿದ್ಯಾರ್ಥಿ‌, ದಯಾನಂದ ಸಾಗರ್‌ ಕಾಲೇಜ್‌ ಬೆಂಗಳೂರು

 ಮೂರು ರೂಪಾಯಿ ಕಡಿಮೆ ಆಯಿತು

ಮೂರು ರೂಪಾಯಿ ಕಡಿಮೆ ಆಯಿತು

"ನಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮ ಹೆಜ್ಜೆ. ಮೂರು ರೂಪಾಯಿ ಕಡಿಮೆ ಆಯಿತು. ಇನ್ನು ಹೆಚ್ಚಿನ ಬೆಲೆ ವಿಧಿಸಬೇಕು. ನಾನು ಪ್ರತಿದಿನ ಸೇದುವುದಿಲ್ಲ. ಸ್ನೇಹಿತರು ಸಿಕ್ಕಾಗ ಪಾರ್ಟಿ‌ಯಲ್ಲಿ ಸೇದುತ್ತೇನೆ"
ವಿನಾಯಕ್‌ ಬೆಂಗಳೂರು, ಸಾಫ್ಟ್‌ವೇರ್‌ ಎಂಜಿನಿಯರ್‌

English summary
This Budget is likely to make tobacco products even more costlier with health ministry proposing hike in tax on cigarettes by Rs 3.5 per stick. Unlike the previous years, the taxes are likely to be applicable to all lengths of cigarettes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X