ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರಿದ ತರಕಾರಿ ಬೆಲೆ, ಮೊಟ್ಟೆಯ ದರ ಕೊಂಚ ಇಳಿಕೆ

|
Google Oneindia Kannada News

Recommended Video

ಏರಿದ ತರಕಾರಿ ಬೆಲೆ, ಮೊಟ್ಟೆಯ ದರ ಕೊಂಚ ಇಳಿಕೆ | Oneindia kannada

ಬೆಂಗಳೂರು, ಏಪ್ರಿಲ್ 05: ಬೇಸಿಗೆಯಲ್ಲಿ ನೀರಿನ ಅಭಾವ ಒಂದೆಡೆಯಾದರೆ, ಹಲವೆಡೆ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ತರಕಾರಿಗಳ ಬೆಳೆಗಳು ಹಾಳಾಗಿವೆ. ಹಾಗಾಗಿ ಸಾಕಷ್ಟು ತರಕಾರಿಗಳ ಬೆಲೆ ಏರಿಕೆಯಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಹೀಗಾಗಿ ಬೀನ್ಸ್, ಟೊಮೇಟೋ ಮತ್ತಿತರೆ ತರಕಾರಿಗಳ ದರದಲ್ಲಿ ಏರಿಕೆಯಾಗಿದೆ. ಮಾರ್ಚ್ ನಲ್ಲಿ ಬೀನ್ಸ್ 25ರೂ ಇದ್ದಿದ್ದು, ಇದೀಗ ಕೆಜಿಗೆ 44ರೂ. ತಲುಪಿದೆ. 10ರೂ. ಇದ್ದ ಟೊಮೇಟೊ ದರ 20ರೂ.ಗೆ ಏರಿಕೆಯಾಗಿದೆ. ಸೌತೆಕಾಯಿ ದರ ಒಂದಕ್ಕೆ 10ರೂ. ತಲುಪಿದೆ. ಬೆಂಡೆಕಾಯಿ 38ರೂ.ಇದೆ. ಕೊತ್ತಂಬರಿ ಸೊಪ್ಪು ಸೇರಿದಂತೆ ಇತರೆ ಸೊಪ್ಪುಗಳ ದರವೂ ಏರಿಕೆಯಾಗಿದೆ.

ಇನ್ನೂ 20 ದಿನ ತರಕಾರಿ ಬೆಲೆ ಕಡಿಮೆ ಆಗೋಲ್ಲ!ಇನ್ನೂ 20 ದಿನ ತರಕಾರಿ ಬೆಲೆ ಕಡಿಮೆ ಆಗೋಲ್ಲ!

ಮೊಟ್ಟೆಗಳ ದರ ಇಳಿಕೆ: ಕೆಲ ತಿಂಗಳ ಹಿಂದೆ 6ರೂ.ವರೆಗೆ ಏರಿಕೆಯಾಗಿದ್ದ ಮೊಟ್ಟೆಯ ದರ ಇದೀಗ ಕಡಿಮೆಯಾಗಿದೆ. ಚಿಲ್ಲರೆ ಮೊಟ್ಟೆಯೊಂದರ ಬೆಲೆ 4.30ರಿಂದ 5 ರೂಗೆ ಇಳಿದಿದೆ. ಸರ್ಕಾರದ ವತಿಯಿಂದ ಅಂಗನವಾಡಿ ಮಕ್ಕಳಿಗೆ ವಾರಕ್ಕೆ ಎರಡು ದಿನ ಬೇಯಿಸಿದ ಮೊಟ್ಟೆ ನೀಡಲಾಗುತ್ತದೆ.

Hike in vegetable price,Egg price become low

ಶಾಲೆಗಳಿಗೆ ನೀಡುವಂತೆ ಬೇಸಿಗೆ ರಜೆಯನ್ನು ಅಂಗನವಾಡಿಗಳಿಗೆ ನೀಡುವುದಿಲ್ಲವಾದರೂ ಈ ಅವಧಿಯಲ್ಲಿ ಹೆಚ್ಚಿನ ಮಕ್ಕಳು ಅಲ್ಲಿಗೆ ಬರುವುದಿಲ್ಲ ಇವೆಲ್ಲ ಕಾರಣಗಳಿಂದ ಮೊಟ್ಟೆಯ ದರ ಕಡಿಮೆಯಗಿದೆ.

ಬೇಸಿಗೆಯಲ್ಲಿ ಕೋಳಿಗಳು ಜೋಳ ಮತ್ತಿತರೆ ಆಹಾರ ಪದಾರ್ಥಗಳನ್ನು ಸೇವಿಸುವುದು ಕಡಿಮೆ. ಈ ಋತುವಿನಲ್ಲಿ ಹೆಚ್ಚಾಗಿ ನೀರು ಕುಡಿಯುತ್ತವೆ. ರಾಜ್ಯದಲ್ಲಿ ನಿತ್ಯ 1.20 ಕೋಟಿ ಮೊಟ್ಟೆ ಉತ್ಪಾದನೆಯಾಗುತ್ತದೆ. ಬೇಸಿಗೆಯಲ್ಲಿ ಉತ್ಪಾದನಾ ಪ್ರಮಾಣದಲ್ಲಿ ಶೇ.10-15ರಷ್ಟು ಇಳಿಕೆಯಾಗುತ್ತಿದೆ ಎಂದು ಎನ್‌ಇಸಿಸಿ ಬೆಂಗಳೂರು ವಲಯದ ಅಧ್ಯಕ್ಷ ಬಿ.ಆರ್. ಸಾಯಿನಾಥ್ ಮಾಹಿತಿ ನೀಡಿದ್ದಾರೆ.

English summary
There is a price hike in vegetables, but egg price was decreased. Beacuse of uneven rain there is a loss of vegetable crops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X