ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿವಿಧ ಶುಲ್ಕ ಹೆಚ್ಚಳ; ಬೆಂಗಳೂರಿನಿಂದ ವಿಮಾನ ಪ್ರಯಾಣ ದುಬಾರಿ

|
Google Oneindia Kannada News

ಬೆಂಗಳೂರು, ಮೇ 30 : ಬೆಂಗಳೂರು ನಗರದಿಂದ ವಿಮಾನ ಹಾರಟ ಕೊಂಚ ದುಬಾರಿಯಾಗಲಿದೆ. ಜೂನ್ 1ರಿಂದಲೇ ಜಾರಿಗೆ ಬರುವಂತೆ ಟಿಕೆಟ್‌ಗಳ ಬೆಲೆಯಲ್ಲಿ ಹೆಚ್ಚಳವಾಗಲಿದೆ. ಯುಡಿಎಫ್ ಶುಲ್ಕ ಹೆಚ್ಚಳವಾಗಿರುವುದು ಇದಕ್ಕೆ ಕಾರಣ

ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ಎಇಆರ್‌ಎ) ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಳಕೆದಾರರ ಶುಲ್ಕ (ಯುಡಿಎಫ್)ಮತ್ತು ವಿಮಾನ ಲ್ಯಾಂಡಿಂಗ್ ಶುಲ್ಕ ಹೆಚ್ಚಿಸಲು ಅನುಮತಿ ನೀಡಿದೆ.

ವಂದೇ ಭಾರತ್ ಮಿಷನ್; ಬೆಂಗಳೂರಿಗೆ ಬಂತು 24 ವಿಮಾನ ವಂದೇ ಭಾರತ್ ಮಿಷನ್; ಬೆಂಗಳೂರಿಗೆ ಬಂತು 24 ವಿಮಾನ

ಜೂನ್ 1ರಿಂದಲೇ ಜಾರಿಗೆ ಬರುವಂತೆ ಎರಡೂ ಶುಲ್ಕಗಳು ಹೆಚ್ಚಾಗಲಿವೆ. ವಿಮಾನಯಾನ ಸಂಸ್ಥೆಗಳು ಈ ಶುಲ್ಕ ಏರಿಕೆಯನ್ನು ಪ್ರಯಾಣಿಕರ ಮೇಲೆ ಹಾಕಲಿವೆ. ಆದ್ದರಿಂದ, ವಿಮಾನಗಳ ಟಿಕೆಟ್ ದರವೂ ಸಹ ಹೆಚ್ಚಾಗಲಿದೆ.

ಮಾಸ್ಕೋಗೆ ಹೊರಟಿದ್ದ ವಿಮಾನ ವಾಪಸ್; ತನಿಖೆಗೆ ಆದೇಶ ಮಾಸ್ಕೋಗೆ ಹೊರಟಿದ್ದ ವಿಮಾನ ವಾಪಸ್; ತನಿಖೆಗೆ ಆದೇಶ

 Hike In User Development Fee At KIA Bengaluru

ಇದುವರೆಗೂ ಅಂತರಾಷ್ಟ್ರೀಯ ಪ್ರಯಾಣಿಕರು 716 ರೂ. ಬಳಕೆದಾರರ ಶುಲ್ಕ ಪಾವತಿ ಮಾಡುತ್ತಿದ್ದರು. ಪ್ರಸ್ತುತ ಇದನ್ನು 839 ರೂ.ಗೆ ಏರಿಕೆ ಮಾಡಲಾಗಿದೆ. ದೇಶಿಯ ವಿಮಾನದಲ್ಲಿ ಆಗಮಿಸುವವರು 179 ರೂ. ಶುಲ್ಕ ಪಾವತಿಸಬೇಕಿತ್ತು, ಇದು 184 ರೂ.ಗೆ ಏರಿಕೆಯಾಗಿದೆ.

ವಂದೇ ಭಾರತ್ ಮಿಷನ್; ಬೆಂಗಳೂರಿಗೆ ಬಂದ 17 ಮತ್ತು 18ನೇ ವಿಮಾನ ವಂದೇ ಭಾರತ್ ಮಿಷನ್; ಬೆಂಗಳೂರಿಗೆ ಬಂದ 17 ಮತ್ತು 18ನೇ ವಿಮಾನ

ವಿಮಾನ ನಿಲ್ದಾಣಗಳ ನಿರ್ವಾಹಕರಿಗೆ ಆದಾಯ ಕಡಿತವಾಗಿದ್ದ ಕಾರಣ ನಿಲ್ದಾಣಗಳ ವಿವಿಧ ಶುಲ್ಕ ಹೆಚ್ಚಳ ಮಾಡಲು ಕೇಂದ್ರ ವಿಮಾನಯಾನ ಸಚಿವಾಲಯ ಒಪ್ಪಿಗೆ ನೀಡಿತ್ತು. ಎಇಆರ್‌ಎ ಇದರ ಆಧಾರದ ಮೇಲೆ ಶುಲ್ಕ ಏರಿಕೆ ಮಾಡಿದೆ.

ಬಳಕೆದಾರರ ಶುಲ್ಕ, ಲ್ಯಾಂಡಿಂಗ್ ಶುಲ್ಕ ಹೆಚ್ಚಳವಾಗುವ ಪರಿಣಾಮ ಟಿಕೆಟ್ ದರದಲ್ಲಿ ವ್ಯತ್ಯಾಸವಾಗಲಿದೆ. ದೇಶಿಯ, ಅಂತರಾಷ್ಟ್ರೀಯ ಪ್ರಯಾಣದ ದರದಲ್ಲಿ ಹೆಚ್ಚಳವಾಗಲಿದೆ. ಪ್ರಸ್ತುತ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ದೇಶಿಯ ವಿಮಾನಗಳು ಮಾತ್ರ ಸಂಚಾರ ನಡೆಸುತ್ತಿವೆ.

English summary
User Development Fee (UDF) at Kempegowda International Airport, Bengaluru hiked. New price will come to effect from June 1, 2020. Flight ticket price may hike by this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X