• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಬ್ಬಾ ! ಬೆಂಗಳೂರಲ್ಲಿ ಎಂಥಾ ರೋಚಕ ಪಂದ್ಯ

By Mahesh
|

ಬೆಂಗಳೂರು,ಮೇ 12: ರಾಜಸ್ಥಾನ ರಾಯಲ್ಸ್ ತಂಡ ಭಾನುವಾರ ರಾತ್ರಿ ನಡೆದ ಐಪಿಎಲ್ ನ 35ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 5 ವಿಕೆಟ್ ಗಳ ರೋಚಕ ಜಯ ಗಳಿಸಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 191 ರನ್ ‌ಗಳ ಸವಾಲನ್ನು ಪಡೆದಿದ್ದ ರಾಜಸ್ಥಾನ ರಾಯಲ್ಸ್ ತಂಡ ಇನ್ನೂ 7 ಎಸೆತಗಳು ಬಾಕಿ ಇರುವಾಗಲೇ ಅಮೋಘ ಜಯ ದಾಖಲಿಸಿತು.

ಫಾಕ್ನರ್ ಮತ್ತು ಸ್ಮಿತ್ ಆರನೆ ವಿಕೆಟ್ ‌ಗೆ ಮುರಿಯದ ಜೊತೆಯಾಟದಲ್ಲಿ 5.2 ಓವರ್ ‌ಗಳಲ್ಲಿ 85 ರನ್ ‌ಗಳ ಕೊಡುಗೆ ನೀಡಿದ್ದು, ಆರ್ ಸಿಬಿಗೆ ಮುಳುವಾದರೆ, ರಾಜಸ್ಥಾನಕ್ಕೆ ಜಯ ತಂದುಕೊಟ್ಟಿತು. ರನ್ ನಿಯಂತ್ರಿಸಲು ವಿಫಲರಾದ ವರುಣ್ ಅರೋನ್, ದಿಂಡಾ ಬೌಲಿಂಗ್ ಗೆ ಆರ್ ಸಿಬಿ ಫ್ಯಾನ್ಸ್ ಹಿಡಿಶಾಪ ಹಾಕಿದರು.

ಸ್ಕೋರ್ ಕಾರ್ಡ್ ನೋಡಿ

ಅಂತಿಮ ಎರಡು ಓವರ್ ‌ಗಳಲ್ಲಿ ರಾಜಸ್ಥಾನ ರಾಯಲ್ಸ್ ‌ನ ಗೆಲುವಿಗೆ 21 ರನ್ ‌ಗಳ ಆವಶ್ಯಕತೆ ಇತ್ತು. ವರುಣ್ ಅರೋನ್ 19ನೆ ಓವರ್ ‌ನ ಮೊದಲ ಎಸೆತದಲ್ಲಿ ಫಾಕ್ನರ್ 1 ರನ್ ಗಳಿಸಿ ಸ್ಮಿತ್ ‌ಗೆ ಬ್ಯಾಟಿಂಗ್ ‌ಗೆ ಅವಕಾಶ ನೀಡಿದರು. ಸ್ಮಿತ್ ನಾಲ್ಕು ಎಸೆತಗಳಲ್ಲಿ 20 ರನ್(2+6+2+4+6) ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಫಾಕ್ನರ್ ‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ದೊರೆಯಿತು.

ಇದಕ್ಕೂ ಮೊದಲು ಯುವರಾಜ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ‌ ಬೆಂಗಳೂರು ತಂಡ 5 ವಿಕೆಟ್ ನಷ್ಟದಲ್ಲಿ 190 ರನ್ ಕಲೆ ಹಾಕಿತ್ತು. ಯುವರಾಜ್ ಮತ್ತೆ ಲಯ ಕಂಡುಕೊಂಡ ಖುಷಿಯಲ್ಲಿರುವಾಗಲೇ ಸ್ಮಿತ್ ಹಾಗೂ ಫಾಕ್ನರ್ ಜೋಡಿ ಸೋಲಿನ ಕಹಿ ಉಣಿಸಿಬಿಟ್ಟರು.

ಫಾಕ್ನರ್ ಮತ್ತು ಸ್ಮಿತ್ ಮುರಿಯದ ಜೊತೆಯಾಟ

ಫಾಕ್ನರ್ ಮತ್ತು ಸ್ಮಿತ್ ಮುರಿಯದ ಜೊತೆಯಾಟ

ಫಾಕ್ನರ್ ಮತ್ತು ಸ್ಮಿತ್ ಆರನೆ ವಿಕೆಟ್ ‌ಗೆ ಮುರಿಯದ ಜೊತೆಯಾಟದಲ್ಲಿ 5.2 ಓವರ್ ‌ಗಳಲ್ಲಿ 85 ರನ್ ‌ಗಳ ಕೊಡುಗೆ ನೀಡಿದ್ದು, ಆರ್ ಸಿಬಿಗೆ ಮುಳುವಾದರೆ, ರಾಜಸ್ಥಾನಕ್ಕೆ ಜಯ ತಂದುಕೊಟ್ಟಿತು.

ರಾಜಸ್ಥಾನದ ಬ್ಯಾಟಿಂಗ್ ವಿವರ

ರಾಜಸ್ಥಾನದ ಬ್ಯಾಟಿಂಗ್ ವಿವರ

ಕರ್ನಾಟಕ ಕರಣ್ ನಾಯರ್ 56 ರನ್(39ಎ, 8ಬೌ), ಅಜಿಂಕ್ಯ ರಹಾನೆ 24(22ಎ, 3ಬೌ),ಸಂಜು ಸ್ಯಾಮ್ಸನ್ 13 ರನ್( 8ಎ, 1ಬೌ, 1ಸಿ) , ಸ್ಟೀವನ್ ಸ್ಮಿತ್ ಔಟಾಗದೆ 48 ರನ್(21ಎ, 4ಬೌ, 4ಸಿ) ಮತ್ತು ಫಾಕ್ನರ್ ಔಟಾಗದೆ 41 ರನ್(17ಎ, 3ಬೌ, 3ಸಿ) ಗಳಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು.

ಅಂತಿಮ ಎರಡು ಓವರ್ ‌ಗಳಲ್ಲಿ ರಾಯಲ್ಸ್ ಆಟ

ಅಂತಿಮ ಎರಡು ಓವರ್ ‌ಗಳಲ್ಲಿ ರಾಯಲ್ಸ್ ಆಟ

ಅಂತಿಮ ಎರಡು ಓವರ್ ‌ಗಳಲ್ಲಿ ರಾಜಸ್ಥಾನ ರಾಯಲ್ಸ್ ‌ನ ಗೆಲುವಿಗೆ 21 ರನ್ ‌ಗಳ ಆವಶ್ಯಕತೆ ಇತ್ತು. ವರುಣ್ ಅರೋನ್ 19ನೆ ಓವರ್ ‌ನ ಮೊದಲ ಎಸೆತದಲ್ಲಿ ಫಾಕ್ನರ್ 1 ರನ್ ಗಳಿಸಿ ಸ್ಮಿತ್ ‌ಗೆ ಬ್ಯಾಟಿಂಗ್ ‌ಗೆ ಅವಕಾಶ ನೀಡಿದರು. ಸ್ಮಿತ್ ನಾಲ್ಕು ಎಸೆತಗಳಲ್ಲಿ 20 ರನ್(2+6+2+4+6) ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಫಾಕ್ನರ್ ‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ದೊರೆಯಿತು.

ಯುವರಾಜ್ ಸಿಂಗ್ ಸ್ಫೋಟಕ ಬ್ಯಾಟಿಂಗ್

ಯುವರಾಜ್ ಸಿಂಗ್ ಸ್ಫೋಟಕ ಬ್ಯಾಟಿಂಗ್

ಇದಕ್ಕೂ ಮೊದಲು ಯುವರಾಜ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ‌ ಬೆಂಗಳೂರು ತಂಡ 5 ವಿಕೆಟ್ ನಷ್ಟದಲ್ಲಿ 190 ರನ್ ಕಲೆ ಹಾಕಿತ್ತು. ಯುವರಾಜ್ ಮತ್ತೆ ಲಯ ಕಂಡುಕೊಂಡ ಖುಷಿಯಲ್ಲಿರುವಾಗಲೇ ಸ್ಮಿತ್ ಹಾಗೂ ಫಾಕ್ನರ್ ಜೋಡಿ ಸೋಲಿನ ಕಹಿ ಉಣಿಸಿಬಿಟ್ಟರು.

ಯುವರಾಜ್ ಸಿಂಗ್ 83 ರನ್ (38 ಎಸೆತ, 7 ಬೌಂಡರಿ, 7 ಸಿಕ್ಸರ್) ಮತ್ತು ಎಬಿ ಡಿವಿಲಿಯರ್ಸ್ ‌ 58 ರನ್ (32 ಎಸೆತ, 1 ಬೌಂಡರಿ, 5 ಸಿಕ್ಸರ್) ಗಳಿಸಿ ಔಟಾದರು.

ಬೌಂಡರಿ, ಸಿಕ್ಸ್ ಗಳ ಸುರಿಮಳೆ

ಬೌಂಡರಿ, ಸಿಕ್ಸ್ ಗಳ ಸುರಿಮಳೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು 15 ಬೌಂಡರಿ, 12 ಸಿಕ್ಸರ್

ರಾಜಸ್ಥಾನ್ ರಾಯಲ್ಸ್ 19 ಬೌಂಡರಿ, 8 ಸಿಕ್ಸ್

ಆರ್ ಸಿಬಿ ಕೊನೆ 5 ಓವರ್ ಗಳಲ್ಲಿ 84 ರನ್ ಚೆಚ್ಚಿತ್ತು. ರಾಯಲ್ ಚಾಲೆಂಜರ್ಸ್ ‌ ಬೆಂಗಳೂರು 20 ಓವರ್ ‌ಗಳಲ್ಲಿ ಐದು ವಿಕೆಟ್ ‌ಗೆ 190. ರಾಜಸ್ಥಾನ ರಾಯಲ್ಸ್ ‌ನ ರಿಚರ್ಡ್ಸನ್ 43ಕ್ಕೆ 2, ಫಾಕ್ನರ್, ತೆವಾಟಿಯಾ ಮತ್ತು ತಾಂಬೆ ತಲಾ 1 ವಿಕೆಟ್ ಹಂಚಿಕೊಂಡರು

ಯುವರಾಜ್- ಎಬಿಡಿ ಜೊತೆಯಾಟ

ಯುವರಾಜ್- ಎಬಿಡಿ ಜೊತೆಯಾಟ

ಯುವರಾಜ್ ಹಾಗೂ ಎಬಿ ಡಿವೆಲೆಯರ್ಸ್ ಜೋಡಿ 10.5 ಓವರ್ ಗಳಲ್ಲಿ 132 ರನ್ ಚೆಚ್ಚಿ 4ನೇ ವಿಕೆಟ್ ಗೆ ಹೊಸ ದಾಖಲೆ ಜೊತೆಯಾಟ ಬರೆದರು.

ಕ್ಲಿಕ್ ಆಗದ ಆರ್ ಸಿಬಿ ಬೌಲಿಂಗ್

ಕ್ಲಿಕ್ ಆಗದ ಆರ್ ಸಿಬಿ ಬೌಲಿಂಗ್

ಅಶೋಕ್ ಡಿಂಡಾ ಯಾವುದೇ ವಿಕೆಟ್ ಪಡೆಯದೆ 3 ಓವರ್ ಗಳಲ್ಲಿ 37 ರನ್ ಚೆಚ್ಚಿಸಿಕೊಂಡರೆ, ವರುಣ್ ಅರೋನ್ 2.5 ಓವರ್ ಗಳಲ್ಲಿ 41 ರನ್ ನೀಡಿ ವಿಕೆಟ್ ಕೀಳಲು ವಿಫಲರಾದರು.

ಗೇಲ್ ಕೂಡಾ ವಿಫಲ, ಆರ್ ಸಿಬಿ ಕಷ್ಟ ಕಷ್ಟ

ಗೇಲ್ ಕೂಡಾ ವಿಫಲ, ಆರ್ ಸಿಬಿ ಕಷ್ಟ ಕಷ್ಟ

ಗೇಲ್ ಕೂಡಾ ಸತತವಾಗಿ ವಿಫಲವಾಗುತ್ತಿದ್ದು, ಆರ್ ಸಿಬಿಗೆ ಮುಂದಿನ ಹಾದಿ ಕಠಿಣವಾಗಿದೆ. 7 ಪಂದ್ಯಗಳಿಂದ 6 ಅಂಕ ಮಾತ್ರ ಕೊಹ್ಲಿ ಪಡೆ ಪಡೆದಿದೆ. ರಾಯಲ್ಸ್ ತಂಡ 9 ಪಂದ್ಯಗಳಿಂದ 6 ಗೆಲುವು ಸಾಧಿಸಿ ಉತ್ತಮ ಸ್ಥಿತಿಯಲ್ಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Highlights: IPL 7 Match 35:The good news is, Yuvraj Singh has returned to form. But the bad news is, Royal Challengers Bangalore still lost to Rajasthan Royals despite the left-hander's brilliance. Steve Smith and James Faulkner snatched victory from the jaws of defeat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more