ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಹೈಸ್ಕೂಲ್ ಉಳಿಸಲು ಹಳೆ ವಿದ್ಯಾರ್ಥಿಗಳ ಮನವಿ

|
Google Oneindia Kannada News

ಬೆಂಗಳೂರು, ಮೇ 27: ವಿದ್ಯಾರ್ಥಿಗಳ ಕೊರತೆಯಿಂದಾಗಿ ಸರ್ಕಾರಿ ಶಾಲೆಗಳು ಸೇರಿದಂತೆ ಬೆಂಗಳೂರಿನ ಹಲವು ಶಾಲೆಗಳು ಮುಚ್ಚುವ ಭೀತಿ ಎದುರಿಸುತ್ತಿವೆ.

ಒಂದು ಕಾಲದಲ್ಲಿ ಬಡ ಮಕ್ಕಳ ಶಾಲೆ ಎಂದೇ ಹೆಸರು ವಾಸಿಯಾಗಿದ್ದ ಸದ್ಯ ಆರ್. ವಿ ರಸ್ತೆಯಲ್ಲಿರುವ ಬೆಂಗಳೂರು ಹೈಸ್ಕೂಲ್(ಬಿಎಚ್‌ಎಸ್) ಇದೀಗ ಮುಚ್ಚುವ ಭೀತಿ ಎದುರಿಸುತ್ತಿದೆ. ವಿದ್ಯಾರ್ಥಿಗಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ವಿದ್ಯಾರ್ಥಿಗಳಿಲ್ಲದೆ ಮುಚ್ಚಿದ ರಾಜಧಾನಿಯ ಅತ್ಯಂತ ಹಳೆಯ ಕನ್ನಡ ಶಾಲೆವಿದ್ಯಾರ್ಥಿಗಳಿಲ್ಲದೆ ಮುಚ್ಚಿದ ರಾಜಧಾನಿಯ ಅತ್ಯಂತ ಹಳೆಯ ಕನ್ನಡ ಶಾಲೆ

ಜಯನಗರದಲ್ಲಿರುವ ಈ ಶಾಲೆಯನ್ನು 1942ರಲ್ಲಿ ಪ್ರಾರಂಭಿಸಲಾಗಿತ್ತು, ಬಡ ಮಕ್ಕಳಿಗೆಂದೇ ಶುರು ಮಾಡಿದ್ದ ಶಾಲೆ ಇದಾಗಿತ್ತು. ಆದರೆ ಕೆಲವು ವರ್ಷಗಳಿಂದ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿದ್ದು, ಮಕ್ಕಳ ಪೋಷಕರು ಅಂತಾರಾಷ್ಟ್ರೀಯ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಒಲವು ಹೊಂದಿದ್ದಾರೆ.

Bengaluru High School Faces Closure Over Low Admissions

ಸರ್ಕಾರಿ ಅನುದಾನಿತ ಶಾಲೆಯು ಹಳೆಯ ವಿದ್ಯಾರ್ಥಿಗಳಿಗೆ ದಾಖಲಾತಿಯನ್ನು ಹೆಚ್ಚಿಸುವಂತೆ ಮನವಿ ಮಾಡಿದೆ. ಬಿಎಚ್‌ಎಸ್ ಮುಖ್ಯೋಪಾಧ್ಯಾಯ ಡಿಎಸ್ ಬಸವಾನಂದ್ ಪ್ರಕಾಶ್ ಅವರು ಐದು ನಿಮಿಷಗಳ ವಿಡಿಯೋ ಮಾಡಿದ್ದು, ಹಳೆಯ ವಿದ್ಯಾರ್ಥಿಗಳಿಗೆ ಶಾಲೆಯನ್ನು ಆಕರ್ಷಿಸುವಂತೆ ಮಾಡಲು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ನಮಗೆ ಬಿಎಚ್‌ಎಸ್‌ನಿಂದ ಎಲ್ಲವೂ ಸಿಕ್ಕಿದೆ, ದಾಖಲಾತಿ ಕಡಿಮೆ ಆಗಲು ಸಾಕಷ್ಟು ಕಾರಣಗಳಿವೆ, 8,9,10ನೇ ತರಗತಿಗೆ ದಾಖಲಾತಿ ಹೆಚ್ಚಳ ಮಾಡಲು ಮುಂದಾಗಬೇಕು ನೀವೆಲ್ಲರೂ ರಾಯಭಾರಿಗಳಾಗಬೇಕು ಎಂದಿದ್ದಾರೆ.

Bengaluru High School Faces Closure Over Low Admissions

ಪೋಷಕರು ಮಕ್ಕಳನ್ನು ಸ್ಟೇಟ್ ಬೋರ್ಡ್ ಶಾಲೆಗಳಿಗೆ ಕಳುಹಿಸಲು ಇಷ್ಟ ಪಡುತ್ತಿಲ್ಲ ಅಂತಾರಾಷ್ಟ್ರೀಯ ಶಾಲೆಗಳ ಶೇ.5ರಷ್ಟು ಶುಲ್ಕವೂ ನಮ್ಮ ಶಾಲೆಗಳಿಗೆ ಕೊಡಬೇಕಿಲ್ಲ, ಬಿಎಚ್‌ಎಸ್ ಮಾತ್ರವಲ್ಲ ಸ್ವಾತಂತ್ರ್ಯ ನಂತರ ಶುರು ಮಾಡಿದ್ದ ಸಾಕಷ್ಟು ಶಾಲೆಗಳ ಪರಿಸ್ಥಿತಿ ಹೀಗೆಯೇ ಇದೆ.

ಕಳೆದ ವರ್ಷ 8ನೇ ತರಗತಿಗೆ 14 ಮಂದಿ ಮಕ್ಕಳು ನೋಂದಣಿ ಮಾಡಿಕೊಂಡಿದ್ದರು, 9,10ನೇ ತರಗತಿಯಲ್ಲಿ 70 ಮಕ್ಕಳಿದ್ದಾರೆ. ಮಕ್ಕಳಿಗೆ ಆನ್‌ಲೈನ್ ಶಿಕ್ಷಣದ ಸೌಲಭ್ಯವನ್ನು ಕೂಡ ಕಲ್ಪಿಸಿದ್ದೇವೆ ಆದರೂ ಪೋಷಕರು ನಮ್ಮ ಶಾಲೆಗಳತ್ತ ಮುಖ ಮಾಡುತ್ತಿಲ್ಲ, ಕೊರೊನಾ ಸೋಂಕಿನಿಂದಾಗಿ ಶೇ.30ರಷ್ಟು ಪೋಷಕರು ಬೆಂಗಳೂರು ಬಿಟ್ಟು ಹೋಗಿದ್ದು, ಈ ಬಾರಿ ವಿದ್ಯಾರ್ಥಿಗಳ ದಾಖಲಾತಿ ಇನ್ನಷ್ಟು ಕಡಿಮೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಉಪೇಂದ್ರ, ಶ್ರೀನಗರ ಕಿಟ್ಟಿ, ಕಿರಣ್ ಶ್ರೀನಿವಾಸ್, ಬ್ರಿಜೇಶ್ ಪಟೇಲ್ ಓದಿರುವ ಶಾಲೆ ಇದಾಗಿದೆ, ಶೇ.50ರಷ್ಟು ಶುಲ್ಕವನ್ನು ಕೂಡ ಇಳಿಕೆ ಮಾಡಲಾಗಿದೆ. ವರ್ಷಕ್ಕೆ 5 ಸಾವಿರ ರೂ ಶುಲ್ಕ ವಿಧಿಸಲಾಗಿದೆ. ಆಡಿಯೋ ವಿಷುವಲ್ ರೂಮ್, ಇಂಡೋರ್ ಆಡಿಟೋರಿಯಂ, ಲ್ಯಾಬೊರೇಟರಿಗಳು, ಉತ್ತಮ ಶಿಕ್ಷಕರ ವರ್ಗ, ತರಗತಿಗಳು ಕೂಡ ಅದ್ಭುತವಾಗಿದೆ.

Recommended Video

ಕೊರೊನದಿಂದ ಚೇತರಿಸಿಕೊಂಡರು ಉಳಿಯಲಿಲ್ಲ ಜೀವ | Oneindia Kannada

English summary
Bengaluru High School Faces Closure Over Low Admissions, Bangalore High School (BHS), located in Jayanagar and affiliated to the state board, was founded in 1942 with the aim of serving poor children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X