ಬೆಂಗಳೂರಿನಲ್ಲಿ ಏಪ್ರಿಲ್ನಿಂದ ವಿದ್ಯುತ್ ದರ ಮತ್ತಷ್ಟು ಏರಿಕೆ
ಬೆಂಗಳೂರು,ಜನವರಿ 13:ಬೆಂಗಳೂರಿನಲ್ಲಿ ಏಪ್ರಿಲ್ನಿಂದ ಮತ್ತೆ ವಿದ್ಯುತ್ ದರ ಏರಿಕೆಗೆ ಅವಕಾಶ ನೀಡಲಾಗಿದೆ.
ಬೆಸ್ಕಾಂ 1.39 ರೂ ಏರಿಕೆಗೆ ಏರಿಸಲು ಮುಂದಾಗಿದೆ.ರಾಜ್ಯದ ಜನತೆಗೆ ಇದೀಗ ವಿದ್ಯುತ್ ಕಂಪೆನಿಗಳು ಬೆಲೆ ಏರಿಕೆ ಶಾಕ್ ನೀಡಲಿವೆ. ವಿದ್ಯುತ್ ದರ ಏರಿಕೆಗೆ ಅವಕಾಶ ಕಲ್ಪಿಸಿ ರಾಜ್ಯ ವಿದ್ಯುತ್ ಆಯೋಗ - ಕೆಇಆರ್ ಸಿ ಆದೇಶ ಹೊರಡಿಸಿದೆ.
ವಿದ್ಯುತ್ ಕಂಪನಿಗಳ ನಷ್ಟ ಸರಿದೂಗಿಸಲು ಗ್ರಾಹಕರ ಮೇಲೆ ಬೆಲೆ ಏರಿಕೆ (ಬರೆ ಎಳೆಯಲಾಗುತ್ತಿದೆ. ವಿದ್ಯುತ್ ಕಂಪನಿಗಳ ನಷ್ಟದ ಪ್ರಮಾಣ ತಪ್ಪಿಸಲು ಕೆ ಇ ಆರ್ ಸಿ ಈ ಆದೇಶ ಹೊರಡಿಸಿದೆ.
ಜನವರಿ 1 ರಿಂದ ಮಾರ್ಚ್ 31ರವರೆಗೆ ಸೀಮಿತವಾಗಿ ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ 4 ರಿಂದ 8 ಪೈಸೆವರೆಗೆ ಹೆಚ್ಚಳ ಮಾಡಲು ಅವಕಾಶ ಕಲ್ಪಿಸಿ ರಾಜ್ಯ ವಿದ್ಯುತ್ ಆಯೋಗ ಆದೇಶ ನೀಡಿದೆ.
ಹಾಗಾಗಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟುವುದು ಖಚಿತವಾಗಿದೆ. ನವೆಂಬರ್ ನಿಂದ ಇದುವರೆಗೆ ಕೇವಲ ಎರಡು ತಿಂಗಳ ಅವಧಿಯಲ್ಲಿ ಎರಡು ಸಲ ವಿದ್ಯುತ್ ಬೆಲೆ ಏರಿಕೆ ಮಾಡಲಾಗಿತ್ತು.
ಹೊಸ ವರ್ಷ ಕಾಲಿಡುತ್ತಿರುವ ಬೆನ್ನಲ್ಲೇ ಬೆಲೆ ಏರಿಕೆ ಪರ್ವ ಕೂಡಾ ಶುರುವಾಗಿದೆ.
ವಿದ್ಯುತ್ ಬಿಲ್ ಎಷ್ಟು ಏರಿಕೆಯಾಗುತ್ತೆ..?
ಕೊರೊನಾ (Coronavirus) ಮಹಾಮಾರಿಯ ನಡುವೆಯೂ ನ.1ರಿಂದ ಜಾರಿಗೆ ಬರುವಂತೆ ಪ್ರತಿ ಯೂನಿಟ್ ಮೇಲೆ ಸರಾಸರಿ 40 ಪೈಸೆ ಹೆಚ್ಚಳಕ್ಕೆ ಅನುಮತಿ ನೀಡಿ ಕೆಇಆರ್ ಸಿ ಆದೇಶ ಹೊರಡಿಸಿತ್ತು.. ಇಂಧನ ವೆಚ್ಚ, ಹೊಂದಾಣಿಕೆ ಶುಲ್ಕ ಹೆಚ್ಚಳ ಸರಿತೂಗಿಸಲು ಈಗ ಮತ್ತೆ ದರ ಏರಿಕೆಗೆ ಅವಕಾಶ ನೀಡಿ ಆದೇಶ ನೀಡಲಾಗಿದೆ.
ಎಸ್ಕಾಂಗಳ ನಷ್ಟದ ಹೊರೆ ತಪ್ಪಿಸಲು ಬೆಲೆ ಏರಿಕೆಗೆ ಆದೇಶ ನೀಡಲಾಗಿದೆ ಎಂದು ಕೆಇಆರ್ ಸಿ ತನ್ನ ಆದೇಶವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವನ್ನೂ ಮಾಡಿದೆ. ಜನವರಿ 1 ಕ್ಕೆ ಪೂರ್ವಾನ್ವಯವಾಗಿ ಮಾರ್ಚ್ 31ರಅವಧಿಯ ತನಕ ವಿದ್ಯುತ್ ಬಿಲ್ ಜಾಸ್ತಿ ಆಗಲಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಮೇಲೆ 8 ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದೆ. ಮೆಸ್ಕಾಂ( MESCOM), ಸೆಸ್ಕ್ ಮತ್ತು ಚೆಸ್ಕಾಂ (CHESCOM)ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಮೇಲೆ 5 ಪೈಸೆ ಏರಿಕೆಯಾಗಬಹುದು. ಹೆಸ್ಕಾಂ (HESCOM) ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಮೇಲೆ 4 ಪೈಸೆ ಏರಿಸಲು ಕೆಇಆರ್ ಸಿ ಅವಕಾಶ ಕಲ್ಪಿಸಿಕೊಟ್ಟಿದೆ. ಮಾರ್ಚ್ 31ರ ತನಕ ಮಾತ್ರ ಪರಿಷ್ಕೃತ ದರ ಸಂಗ್ರಹಿಸಬಹುದಾಗಿದೆ.