ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಾತಂತ್ರ್ಯ ದಿನಾಚರಣೆ; ಬೆಂಗಳೂರಲ್ಲಿ ಎಷ್ಟು ಪೊಲೀಸರ ನಿಯೋಜನೆ?

|
Google Oneindia Kannada News

ಬೆಂಗಳೂರು, ಆಗಸ್ಟ್ 14: ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಗೆ ದೇಶದ ಜನ ಸಂಭ್ರಮಿಸುತ್ತಿದ್ದಾರೆ. ಬೆಂಗಳೂರಿನಲ್ಲೂ ಈ ಬಾರಿ ಅದ್ದೂರಿ ಸ್ವಾತಂತ್ರ್ಯ ದಿನಕ್ಕೆ ಸರ್ಕಾರ ಸಜ್ಜಾಗಿದೆ. ಸ್ವಾತಂತ್ರ್ಯ ದಿನಕ್ಕೆ ಬೆಂಗಳೂರು ಪೊಲೀಸರು ಸಜ್ಜಾಗಿದ್ದಾರೆ. ಬೆಂಗಳೂರು ಪೊಲೀಸರ ಮೇಲೆ ಸ್ವಾತಂತ್ರ್ಯ ದಿನದ ಸಂಭ್ರಮದ ಜೊತೆಗೆ ಒಂದಷ್ಟು ಒತ್ತಡ ಕೂಡ ಹೆಚ್ಚಾಗಿದೆ.

ಮಾಣಿಕ್ ಷಾ ಮೈದಾನ ಹೊರತು ಪಡಿಸಿ ನಗರದ ಬೇರೆ ಕಾರ್ಯಕ್ರಮಗಳಿಗೂ ಪೊಲೀಸರು ಭದ್ರತೆ ಮಾಡಿಕೊಳ್ಳಬೇಕಿದೆ. ಸದ್ಯ ಪೊಲೀಸರು ಎಲ್ಲೆಲ್ಲಿ ಭದ್ರತೆಯನ್ನು ಯಾವ ಮಟ್ಟದಲ್ಲಿ ಮಾಡಿಕೊಂಡಿದ್ದಾರೆ ಅನ್ನೋದರ ಅಂಕಿ ಅಂಶ ಇಲ್ಲಿದೆ.

ಸ್ವಾತಂತ್ರ್ಯ, ದೇಶ ಕುರಿತು ಡಿಕೆ ಶಿವಕುಮಾರ್ Rapid ಉತ್ತರ ಸ್ವಾತಂತ್ರ್ಯ, ದೇಶ ಕುರಿತು ಡಿಕೆ ಶಿವಕುಮಾರ್ Rapid ಉತ್ತರ

ಮಾಣಿಕ್ ಷಾ ಗ್ರೌಂಡ್ ಪೊಲೀಸ್ ಭದ್ರತೆ; ಹೆಚ್ಚುವರಿ ಆಯುಕ್ತರು 1, ಡಿಸಿಪಿ ಗಳು 10, ಎಸಿಪಿಗಳು 19, ಇನ್ಸ್ಪೆಕ್ಟರ್ 50, ಪಿಎಸ್ ಐ 100, ಮಹಿಳಾ ಪಿಎಸ್ ಐ 15, ಎಎಸ್ ಐ 80, ಕಾನ್ಸ್ಟೇಬಲ್ 650, ಗಸ್ತಿನಲ್ಲಿರುವ ಪೊಲೀಸರು 150, ಕೆಎಸ್‌ಆರ್‌ಪಿ 10 ತುಕಡಿ, ಕ್ಯುಆರ್ ಟಿ 1, ಡಿ ಸ್ವ್ಯಾಟ್ 1, ಆರ್ ಎ ಎಫ್ 1,
ಮಾಣಿಕ್ ಷಾ ಗ್ರೌಂಡ್ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆಯಾಗಿದ್ದಾರೆ.

High police security across Bengaluru Ahead Of August 15th Independence day

ಇನ್ನೂ ಇದರ ಜೊತೆಗೆ ಈ ಬಾರಿ ಬೆಂಗಳೂರು ಪೊಲೀಸರು ಚಾಮರಾಜಪೇಟೆ ಈದ್ಗಾ ಮೈದಾನದ ಭದ್ರತೆ ಕೂಡ ಹೆಚ್ಚುವರಿಯಾಗಿದ್ದು, ಮಾಣಿಕ್ ಷಾ ಮೈದಾನಕ್ಕಿಂತ ಹೆಚ್ಚಿನ ನಿಗಾವನ್ನು ಈದ್ಗಾ ಮೈದಾನದ ಸುತ್ತ ಪೊಲೀಸರು ವಹಿಸಿದ್ದಾರೆ.

ಈದ್ಗಾ ಮೈದಾನದಲ್ಲೂ ಭದ್ರತೆಗೆ; ಹೆಚ್ಚುವರಿ ಆಯುಕ್ತರು 1, ಡಿಸಿಪಿ ಗಳು 3, ಎಸಿಪಿಗಳು 6, ಇನ್ಸ್ಪೆಕ್ಟರ್ 15, ಪಿಎಸ್ ಐ 45, ಮಹಿಳಾ ಪಿಎಸ್ ಐ 05, ಎಎಸ್ ಐ 30, ಕಾನ್ಸ್ಟೇಬಲ್ 300, ಗಸ್ತಿನಲ್ಲಿರುವ ಪೊಲೀಸರು 20, ಕೆ ಎಸ್ ಆರ್ ಪಿ 05 ತುಕಡಿ, ಸಿಎಆರ್ 2ತುಕಡಿ, ಆರ್ ಎ ಎಫ್ ತುಕಡಿ 1.

ಕಾಂಗ್ರಸ್ ಅಜಾದಿ ಯಾತ್ರೆಗೆ ಭದ್ರತೆ; ಡಿಸಿಪಿ ಗಳು 4, ಎಸಿಪಿಗಳು 15, ಇನ್ಸ್ಪೆಕ್ಟರ್ 20, ಪಿಎಸ್ ಐ 24, ಮಹಿಳಾ ಪಿಎಸ್ ಐ 03,
ಎಎಸ್ ಐ 15, ಕಾನ್ಸ್ಟೇಬಲ್ 500, ಕೆಎಸ್‌ಆರ್‌ಪಿ 05 ತುಕಡಿ, ಸಿಎಆರ್ 6 ತುಕಡಿ, ಕಾಂಗ್ರೆಸ್ ಅಜಾದಿ ಯಾತ್ರೆ ಹಮ್ಮಿಕೊಂಡಿದ್ದು 6 ಕಿ.ಮೀ ಯಾತ್ರೆಗೂ ಪೊಲೀಸರು ಭದ್ರತೆ ಮಾಡಿಕೊಂಡಿದ್ದಾರೆ.

High police security across Bengaluru Ahead Of August 15th Independence day

ಇದರ ಜೊತೆಗೆ ಬಿಜೆಪಿ ಕಾರ್ಯಕ್ರಮಕ್ಕೆ 300 ಪೊಲೀಸರಿಂದ ಭದ್ರತೆ ಮಾಡಿಕೊಂಡಿದ್ದಾರೆ. ಆಗಸ್ಟ್ 15ರಂದು ಲಾಲ್ ಬಾಗ್ ಫಲಪುಷ್ಪ ಪ್ರದರ್ಶಮದ ಕೊನೆದಿನವಾಗಿದ್ದು ಲಾಲ್‌ಬಾಗ್ ಸಾಕಷ್ಟು ಜನ ಬರುವ ನಿರೀಕ್ಷೆಯಿದ್ದು ಅಲ್ಲೂ ಪೊಲೀಸರು ಭದ್ರತೆ ಮಾಡಿಕೊಂಡಿದ್ದಾರೆ. ಇನ್ನು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲು ಸೂಚನೆಯನ್ನು ನೀಡಲಾಗಿದೆ.

English summary
Bengaluru police is all set for Independence Day 2022. Along with the Independence Day celebrations, some pressure has also increased on Bengaluru Police. Apart from the Manik Shah Maidan, the police also have to provide security for other events in the city. Here is the statistics of the level of security the police have made everywhere, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X