ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ 23706 ರಸ್ತೆ ಗುಂಡಿಗಳ ಪೈಕಿ ಬಾಕಿ 7,700 ಅಷ್ಟೇ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 22: ಸಿಲಿಕಾನ್ ಸಿಟಿಗೆ ಒಂದಲ್ಲಾ ಒಂದು ರೀತಿಯ ಗಂಡಾತರ ತಪ್ಪಿದ್ದೇ ಅಲ್ಲ. ಇನ್ನೂ ರಸ್ತೆಗುಂಡಿ ಗಂಡಾಂತರವಂತೂ ಸದಾ ಜೀವಂತವಾಗಿಯೇ ಇರುತ್ತದೆ. ಇದರಿಂದ ಹೈ ಕೋರ್ಟ್ ಡಿಸೆಂಬರ್ 31 ರೊಳಗೆ ಬೆಂಗಳೂರಿನಲ್ಲಿ ಗುಂಡಿ ಮುಕ್ತ ಮಾಡಬೇಕು ಅಂತ ಪಾಲಿಕೆಗೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಬಿಬಿಎಂಪಿ, BWSSB, ಬೆಸ್ಕಾಂ, ಸ್ಮಾಟ್೯ ಸಿಟಿ‌, ನಮ್ಮ ಮೆಟ್ರೋ ಸೇರಿದಂತೆ ಎಲ್ಲಾ ಕಾಮಗಾರಿಗಳು ಏಕ ಕಾಲದಲ್ಲಿ ಕಾಮಗಾರಿಗಳು ನಡೀತಿವೆ‌.‌ ಅದರ ಮಧ್ಯೆ ಮಳೆ ಅವಾಂತರಗಳು ಕೂಡಾ ಒಂದು ಇದರಿಂದ ಬಹುತೇಕ ರಸ್ತೆಗಳೆಲ್ಲವೂ ಗುಂಡಿಮಯವಾಗಿವೆ. ರಸ್ತೆ ಗುಂಡಿಗಳ ಕೆರಳಿ ಕೆಂಡಾಮಂಡಲವಾದ ಹೈ ಕೋರ್ಟ್ ಡಿಸೆಂಬರ್ 31 ರೊಳಗೆ ಬೆಂಗಳೂರಿನಲ್ಲಿ ಗುಂಡಿ‌ಮುಕ್ತವಾಗಬೇಕು ಅಂತ ಬಿಬಿಎಂಪಿ ಇಂಜಿನಿಯರ್‌ಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದೆ.

ನವೆಂಬರ್ ಅಂತ್ಯಕ್ಕೆ ಬೆಂಗಳೂರಿನಾದ್ಯಂತ ಹೊಸ ರಸ್ತೆಗಳು: ಬಿಬಿಎಂಪಿನವೆಂಬರ್ ಅಂತ್ಯಕ್ಕೆ ಬೆಂಗಳೂರಿನಾದ್ಯಂತ ಹೊಸ ರಸ್ತೆಗಳು: ಬಿಬಿಎಂಪಿ

ಪಾಲಿಕೆ ಅಧಿಕಾರಿಗಳು ತರಾ ತುರಿಯಲ್ಲಿ ಗುಂಡಿ ಮುಚ್ಚಲು ಸಿದ್ದವಾಗಿದ್ದಾರೆ. ಬಿಬಿಎಂಪಿ ವತಿಯಿಂದ ಅಭಿವೃದ್ಧಿಪಡಿಸಿದ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್‌ನ ಮೂಲಕ ಈವರೆಗೆ 23,700 ರಸ್ತೆಗುಂಡಿಗಳನ್ನು ಗುರುತಿಸಲಾಗಿದೆ. ಈ ಪೈಕಿ 7,700 ಗುಂಡಿಗಳನ್ನು ಮುಚ್ಚುವುದು ಬಾಕಿಯಿದೆ ಎಂದು ಬಿಬಿಎಂಪಿ ಪ್ರಧಾನ ಅಭಿಯಂತರರ ಬಿ.ಎಸ್. ಪ್ರಹ್ಲಾದ್ ಮಾಹಿತಿ ನೀಡಿದ್ದಾರೆ.

 ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೂಲ ಗುಂಡಿಗಳ ಸರ್ವೇ

ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೂಲ ಗುಂಡಿಗಳ ಸರ್ವೇ

ನಗರದಲ್ಲಿ ರಸ್ತೆಗುಂಡಿಗಳ ಪತ್ತೆ, ಪರಿಶೀಲನೆ, ಗುಂಡಿ ಮುಚ್ಚುವುದು ಹಾಗೂ ನಿರ್ವಹಣೆಗೆ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಅಭಿವೃದ್ಧಿ ಮಾಡಲಾಗಿದ್ದು. ಕಳೆದ ಮೂರು ತಿಂಗಳಿಂದ ಪಾಲಿಕೆ ಅಧಿಕಾರಿಗಳು ಮತ್ತು ಟ್ರಾಫಿಕ್ ಪೊಲೀಸರು ಈ ಆ್ಯಪ್ ಬಳಸುತ್ತಿದ್ದು, ಒಟ್ಟು 23,706 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ. ಈ ಪೈಕಿ 4,224 ದೂರುಗಳ ಸ್ಥಳದಲ್ಲಿ ಪರಿಶೀಲನೆ ಮಾಡಿದಾಗ ರಸ್ತೆಗುಂಡಿಗಳು ಪತ್ತೆಯಾಗಿಲ್ಲ. ಪಾಲಿಕೆ ವತಿಯಿಂದ ಈವರೆಗೆ 11,777 ಗುಂಡಿಗಳನ್ನು ಮುಚ್ಚಲಾಗಿದ್ದು, ಒಟ್ಟಾರೆ 16 ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳ ನಿರ್ವಹಣೆ ಮಾಡಿದಂತಾಗಿದೆ. ಬಾಕಿ 7,700ಕ್ಕೂ ಅಧಿಕ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎನ್ನಲಾಗಿದೆ.

 ರಾಮನ ಲೆಕ್ಕ, ಕೃಷ್ಣನ ಲೆಕ್ಕಕ್ಕಿಲ್ಲ ಹಣ

ರಾಮನ ಲೆಕ್ಕ, ಕೃಷ್ಣನ ಲೆಕ್ಕಕ್ಕಿಲ್ಲ ಹಣ

ನಗರದಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದರಿಂದ. ಮೇಲಾಧಿಕಾರಿಗಳಿಗೆ ಸಮರ್ಪಕವಾಗಿ ಗುಂಡಿ ಮುಚ್ಚುವ ಕಾರ್ಯದ ಮೇಲ್ವಿಚಾರಣೆ ಮಾಡಲು ಸಾಧ್ಯವಾಗಿರಲಿಲ್ಲ. ಈ ಅವಧಿಯಲ್ಲಿ ಫಿಕ್ಸ್ ಮೈಸ್ಟ್ರೀಟ್ ಆ್ಯಪ್‌ನಲ್ಲಿ ಗುರುತಿಸಿದ ರಸ್ತೆ ಗುಂಡಿಗಳ ಹೊರತಾಗಿಯೂ ನೂರಾರು ರಸ್ತೆಗುಂಡಿ ಮುಚ್ಚಿರುವುದಾಗಿ ಬಿಲ್ ಪಡೆಯಲು ವರದಿ ಸಲ್ಲಿಕೆ ಮಾಡಲಾಗಿದೆ. ಇನ್ನುಮುಂದೆ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್‌ನಲ್ಲಿ ಗುರುತಿಸಿ ಗುಂಡಿಗಳನ್ನು ಮುಚ್ಚುವುದಕ್ಕೆ ಮಾತ್ರ ಬಿಲ್ ಪಾವತಿಸಲಾಗುತ್ತದೆ. ರಾಮನ ಲೆಕ್ಕ, ಕೃಷ್ಣನ ಲೆಕ್ಕ ಎಂದು ಗುಂಡಿ ಮುಚ್ಚಿದ ವರದಿ ತೋರಿಸಿದರೆ ಬಿಲ್ ಪಾವತಿಸುವುದಿಲ್ಲ ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಪ್ರಧಾನ ಅಭಿಯಂತರಾದ ಬಿ.ಎಸ್. ಪ್ರಹ್ಲಾದ್ ಎಚ್ಚರಿಕೆ ರವಾನಿಸಿದ್ದಾರೆ.

 ಇಲಾಖೆಯ ಸಮನ್ವಯದೊಂದಿಗೆ ಗುಂಡಿ ಮುಚ್ಚಬೇಕು

ಇಲಾಖೆಯ ಸಮನ್ವಯದೊಂದಿಗೆ ಗುಂಡಿ ಮುಚ್ಚಬೇಕು

ಬಿಬಿಎಂಪಿ ವ್ಯಾಪ್ತಿಯಲ್ಲಿ BWSSB, ಬೆಸ್ಕಾಂ, ಸ್ಮಾಟ್೯ ಸಿಟಿ‌, ನಮ್ಮ ಮೆಟ್ರೋ ಸೇರಿದಂತೆ ಎಲ್ಲಾ ಕಾಮಗಾರಿಗಳು ಏಕ ಕಾಲದಲ್ಲಿ ಕಾಮಗಾರಿಗಳು ನಡೀತಿವೆ‌.‌ ಅದರ ಮಧ್ಯೆ ಮಳೆ ಅವಾಂತರಗಳು ಕೂಡಾ ಒಂದು ಇದರಿಂದ ಬಹುತೇಕ ರಸ್ತೆಗಳೆಲ್ಲವೂ ಗುಂಡಿಮಯವಾಗಿವೆ. ಇಲಾಖೆಗಳ ಸಮನ್ವಯದೊಂದಿಗೆ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಮಾಡಬೇಕಿದೆ. ರಸ್ತೆ ಗುಂಡಿಗಳ ಕೆರಳಿ ಕೆಂಡಾಮಂಡಲವಾದ ಹೈ ಕೋರ್ಟ್ ಡಿಸೆಂಬರ್ 31 ರೊಳಗೆ ಬೆಂಗಳೂರಿನಲ್ಲಿ ಗುಂಡಿ‌ಮುಕ್ತವಾಗಬೇಕು ಅಂತ ಬಿಬಿಎಂಪಿ ಇಂಜಿನಿಯರ್‌ಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದೆ.

 ನೂತನ ವರ್ಷಾರಂಭದೊಳಗೆ ಗುಂಡಿ ಮುಕ್ತ!

ನೂತನ ವರ್ಷಾರಂಭದೊಳಗೆ ಗುಂಡಿ ಮುಕ್ತ!

ರಸ್ತೆ ಗುಂಡಿ ಮುಚ್ಚೋ ವಿಚಾರದಲ್ಲಿ ಕೊನೆಗೂ ಎಚ್ಚೆತ್ತುಕೊಂಡ ಪಾಲಿಕೆ. ಇಷ್ಟು ದಿನ ರಾಮನ ಲೆಕ್ಕ ಕೃಷ್ಣನ ಲೆಕ್ಕದ್ದಲ್ಲಿದ್ದ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಫಿಕ್ಸ್ ಮೈ ಸ್ಟ್ರೀಟ್ ಆಪ್ ಕಂಟಕವಾಗಿದೆ. ರಸ್ತೆ ಗುಂಡಿ ಮುಚ್ಚೋ ಹೆಸರಲ್ಲಿ ಇಷ್ಟುದಿನ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡಿತ್ತಿದ್ದವರಿಗೂ ಇದು ಒಳ್ಳೆಯ ಪಾಟವಾಗಿದೆ‌ ಅದೇನೇ ಆಗಲ್ಲಿ. 2023ನೇ ವರ್ಷದಲ್ಲಾದರು ಗುಂಡಿ ಮುಕ್ತವಾಗಲಿ ಅನ್ನೋದು ವಾಹನ ಸವಾರರ ಆಗ್ರಹ ವಾಗಿದೆ.

English summary
Bengaluru is not without its own perils. High Court has warned the BBMP that it should clear potholes in Bengaluru by December 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X