ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇಯರ್ ಆಯ್ಕೆಗೆ ಸಂಸದರು, ಶಾಸಕರು ಮತಹಾಕಬಹುದು

|
Google Oneindia Kannada News

ಬೆಂಗಳೂರು, ನವೆಂಬರ್ 28 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಸಂಸದರು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಮತ ಹಾಕುವುದು ಕಾನೂನು ಬದ್ಧವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಶಾಸಕರು, ಸಂಸದರು ಮತ್ತು ವಿಧಾನಪರಿಷತ್‌ ಸದಸ್ಯರಿಗೆ ಮತದಾನ ಮಾಡಲು ಅವಕಾಶ ನೀಡಬಾರದು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್ ಅವರ ಪೀಠ ರದ್ದುಗೊಳಿಸಿದೆ. ಇದರಿಂದಾಗಿ ಹಲವು ದಿನಗಳ ಕಾನೂನು ಹೋರಾಟಕ್ಕೆ ತೆರೆ ಬಿದ್ದಿದೆ. [ಮೇಯರ್ ಚುನಾವಣೆಗೆ ಸಂಸದರು ಏಕೆ ಮತ ಹಾಕಬೇಕು?]

bbmp

ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಚುನಾವಣೆಯಲ್ಲಿ ಶಾಸಕರು, ಸಂಸದರು ಮತ್ತು ವಿಧಾನಪರಿಷತ್‌ ಸದಸ್ಯರಿಗೆ ಮತದಾನ ಮಾಡಲು ಅವಕಾಶ ನೀಡಬಾರದು ಎಂದು ಕೋರಿ ಬಿಬಿಎಂಪಿ ಸದಸ್ಯರಾದ ಆರ್.ಪ್ರತಿಮಾ, ದೀಪಾ ನಾಗೇಶ್‌, ಉಮಾವತಿ ಪದ್ಮರಾಜ್‌, ಕುಮಾರಿ ಪಳನಿಕಾಂತ್‌ ಅರ್ಜಿ ಸಲ್ಲಿಸಿದ್ದರು. [ಮೇಯರ್ ಮತದಾನದ ಹಕ್ಕು ಪ್ರಶ್ನಿಸಿದ ಬಿಜೆಪಿ]

ಮತದಾನದ ಹಕ್ಕು ಪ್ರಶ್ನಿಸಲಾಗಿತ್ತು : ಅರ್ಜಿದಾರರ ಪರವಾಗಿ ವಾದ ಮಂಡನೆ ಮಾಡಿದ್ದ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರು, 'ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆಯಲ್ಲಿ ಕರ್ನಾಟಕ ಮಹಾನಗರಪಾಲಿಕೆ ಕಾಯ್ದೆ 1976ರ ಅನುಸಾರ 62 ಜನಪ್ರತಿನಿಧಿಗಳಿಗೆ ಮತದಾನದ ಅವಕಾಶ ನೀಡಿರುವುದು ಸಂವಿಧಾನ ಬಾಹಿರವಾದದ್ದು'ಎಂದು ವಾದ ಮಂಡಿಸಿದ್ದರು. [ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಜಯ]

ಸರ್ಕಾರದ ಪರವಾಗಿ ವಾದ ಮಂಡನೆ ಮಾಡಿದ್ದ ಪ್ರೊ.ರವಿವರ್ಮ ಕುಮಾರ್‌ ಅವರು, '22 ವರ್ಷಗಳ ಹಿಂದೆಯೇ ಈ ಕುರಿತು ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಈತನಕ ಯಾವುದೇ ತಕರಾರಿಲ್ಲ. ಸಂವಿಧಾನಬದ್ಧವಾಗಿಯೇ ಮತದಾನದ ಹಕ್ಕು ನೀಡಲಾಗಿದೆ. ಈ ಅರ್ಜಿ ರಾಜಕೀಯ ಪ್ರೇರಿತವಾದದ್ದು' ಎಂದು ವಾದ ಮಂಡನೆ ಮಾಡಿದ್ದರು.

ಹೈಕೋರ್ಟ್ ತನ್ನ ಆದೇಶದಲ್ಲಿ ಶಾಸಕರು, ಸಂಸದರು ಮತ್ತು ವಿಧಾನಪರಿಷತ್‌ ಸದಸ್ಯರು ಕಾಯ್ದೆ ವ್ಯಾಪ್ತಿಯಲ್ಲಿ ಪಾಲಿಕೆ ಸದಸ್ಯರೆಂದೇ ಪರಿಗಣನೆಯಾಗುತ್ತಾರೆ. ಆದ್ದರಿಂದ, ಚುನಾವಣೆಯಲ್ಲಿ ಮತದಾನ ಮಾಡಬಹದು ಎಂದು ತೀರ್ಪು ನೀಡಿದೆ. 2015 ರ ಸೆಪ್ಟೆಂಬರ್‌ 11 ರಂದು ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್‌ ಸ್ಥಾನಗಳಿಗೆ ಚುನಾವಣೆ ನಡೆದಿತ್ತು.

English summary
Karnataka high court upholds voting rights of MPs, MLAs and Legislative council members in the BBMP mayor and Deputy mayor elections. BJP corporators questioned the voting rights in high court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X