ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೂಫ್ ಟಾಪ್ ಬಾರ್ ಗಳಿಗೆ ನೋಟಿಸ್: ತಡೆಯಾಜ್ಞೆಗೆ ಹೈಕೋರ್ಟ್ ನಕಾರ

|
Google Oneindia Kannada News

ಬೆಂಗಳೂರು, ಜನವರಿ 10 : ಬೆಂಗಳೂರಿನ ಅಸುರಕ್ಷಿತ 57 ರೂಫ್ ಟಾಪ್ ಬಾರ್ ಹಾಗೂ ರೆಸ್ಟೋರೆಂಟ್ ಗೆ ಬಿಬಿಎಂಪಿ ನೀಡಿದ್ದ ಶೋಕಾಸ್ ನೋಟಿಸ್ ಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಇಂದಿರಾನಗರದ ಕ್ಯಾಮರಿನ್ ಫುಡ್ ರೆಸ್ಟೋರೆಂಟ್ ಸಲ್ಲಿಸಿದ್ದ ತಡೆಯಾಜ್ಞೆ ಕೋರಿದ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಹೈಕೋರ್ಟ್ ರೂಫ್ ಟಾಪ್ ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ಬಿಬಿಎಂಪಿ ಜಾರಿ ಮಾಡಿರುವ ನೋಟಿಸ್ ಗೆ ತಡೆಯಾಜ್ಞೆ ನೀಡುವುದಿಲ್ಲ ಎಂದು ಅರ್ಜಿ ಇತ್ಯರ್ಥಗೊಳಿಸಿತು.

ಸಂಕ್ರಾಂತಿ ವಿಶೇಷ ಪುಠ

ಬಿಬಿಎಂಪಿ ನೀಡಿರುವ ನೋಟಿಸ್ ಗೆ ತಕರಾರುಗಳಿದ್ದರೆ ನೇರವಾಗಿ ಬಿಬಿಎಂಪಿಗೆ ಆಕ್ಷೇಪಣೆಗಳನ್ನು ಸಲ್ಲಿಸಿ ಈ ಬಗ್ಗೆ ಸ್ಪಷ್ಟನೆ ಪಡೆದುಕೊಳ್ಳಿ ಎಂದು ಕ್ಯಾಮರಿನ್ ಫುಡ್ಸ್ ಪರ ವಕೀಲರಿಗೆ ಕೋರ್ಟ್ ಸೂಚನೆ ನೀಡಿತು. ಸುರಕ್ಷತೆ ದೃಷ್ಟಿಯಿಂದ ಬಿಬಿಎಂಪಿ ತೆಗೆದುಕೊಳ್ಳುವ ಕ್ರಮಗಳಿಗೆ ಅನುಸಾರ ರೂಫ್ ಟಾಪ್ ರೆಸ್ಟೋರೆಂಟ್ ಗಳು ನಡೆದುಕೊಳ್ಳಬೇಕಾಗುತ್ತದೆ ಎಂದು ಮೌಖಿಕವಾಗಿ ಅಭಿಪ್ರಾಯ ಪಟ್ಟಿತು.

High Court to stay notice on roof top bars

ಮುಂಬೈನಲ್ಲಿ ಇತ್ತೀಚೆಗೆ ಸಂಭವಿಸಿದ್ದ ಕಮಲಾ ಪಬ್ ದುರಂತದ ನಂತರ ಬೆಂಗಳೂರಿನಲ್ಲಿ ಅಗ್ನಿ ಸುರಕ್ಷತಾ ಇಲಾಖೆ ಹಾಗೂ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ನಗರಾದ್ಯಂತ ರೂಫ್ ಟಾಪ್ ಬಾರ್ ಮತ್ತು ರೆಸ್ಓರೆಂಟ್ ಗಳ ಮೇಲೆ ಧಾಳಿ ನಡೆಸಿ ಸುರಕ್ಷತಾ ಕ್ರಮ ಕೈಗೊಳ್ಳದಿರುವ ರೆಸ್ಟೋರೆಂಟ್ ಗಳ ಮೇಲೆ ನೋಟಿಸ್ ಜಾರಿ ಮಾಡಿದ್ದರು. ಈ ವೇಳೆ 70 ರೂಫ್ ಟಾಪ್ ಬಾರ್ ಗಳಿಗೆ ಬೀಗ ಹಾಕಿದ್ದಲ್ಲದೆ 57 ಕ್ಕೂ ಹೆಚ್ಚು ಬಾರ್ ಗಳಿಗೆ ನೋಟಿಸ್ ಜಾರಿ ಮಾಡಿದ್ದರು, ಇದನ್ನು ಪ್ರಶ್ನಿಸಿ ಇಂದಿರಾನಗರದ ಕ್ಯಾಮರಿನ್ ಫುಡ್ ಬಾರ್ ಅಂಡ್ ರೆಸ್ಟೋರೆಂಟ್ ತಡೆಯಾಜ್ಞ ಕೋರಿಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

English summary
High Court of karnataka has refused to give stay on show cause notice to roof top bar and restaurants in Bengaluru issued by BBMP officials on safety majors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X