ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಟ್ಸಾಪ್‌ನಲ್ಲಿ ದೇಶವಿರೋಧಿ ಮೆಸೇಜ್: ಆರೋಪಿಗಳಿಗೆ ಜಾಮೀನು ನಿರಾಕರಣೆ

|
Google Oneindia Kannada News

ಬೆಂಗಳೂರು, ಜನವರಿ 29: ವಾಟ್ಸಾಪ್‌ ಗ್ರೂಪ್‌ನಲ್ಲಿ 'ಪಾಕಿಸ್ತಾನ ಜಿಂದಾಬಾದ್' ಎಂದು ಮೆಸೇಜ್ ಹಾಕಿದ್ದ ಮೂವರು ವ್ಯಕ್ತಿಗಳಿಗೆ ಕರ್ನಾಟಕ ಹೈಕೋರ್ಟ್‌ ಇಂದು ಜಾಮೀನು ನಿರಾಕರಿಸಿದೆ.

ಅಮೆಜಾನ್ ಮಹಾತ್ಮೆ: ತೆಂಗಿನಕಾಯಿಗಿಂತಲೂ ಚಿಪ್ಪು ದುಬಾರಿ! ಅಮೆಜಾನ್ ಮಹಾತ್ಮೆ: ತೆಂಗಿನಕಾಯಿಗಿಂತಲೂ ಚಿಪ್ಪು ದುಬಾರಿ!

ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿರುವ ಹೈಕೋರ್ಟ್‌, ಸಂದೇಶ ಕೆಲ ಸಾಲಷ್ಟೆ ಇರಬಹುದು ಆದರೆ ಅದು ಉಂಟುಮಾಡುವ ಪರಿಣಾಮ ದೊಡ್ಡದು ಹಾಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ನ್ಯಾಯಾಧೀಶ ಸುಧೀಂದ್ರರಾವ್ ಹೇಳಿದರು.

ಚುನಾವಣೆ ದಿನಾಂಕ ಕುರಿತ ಸುಳ್ಳು ಸುದ್ದಿ: ಕ್ರಮಕ್ಕೆ ಆಯೋಗ ಸೂಚನೆ ಚುನಾವಣೆ ದಿನಾಂಕ ಕುರಿತ ಸುಳ್ಳು ಸುದ್ದಿ: ಕ್ರಮಕ್ಕೆ ಆಯೋಗ ಸೂಚನೆ

ಆಗಸ್ಟ್‌ 14 ರಂದು ವಾಟ್ಸ್‌ಆಪ್‌ ಗ್ರೂಫ್‌ ಒಂದಕ್ಕೆ ಮುಸ್ತಾಫಾ, ಶಬೀರ್ ಪಾಷಾ ಮತ್ತು ಚಾಂದ್ ಪಾಷಾ ಎಂಬುವರು 'ಪಾಕಿಸ್ತಾನ ಜಿಂದಾಬಾದ್' ಎಂದು ಮೆಸೆಜ್ ಮಾಡಿದ್ದರು.

High court refuse to grant bail to accused who messaged Pakistan Zindabad in whats app

ಇದನ್ನು ಗಮನಿಸಿದ ಹನುಮನಗೌಡ ಎಂಬಾತ ಕೊಪ್ಪಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ರಾಜದ್ರೋಹದ ಅಡಿ ಕೇಸು ದಾಖಲಿಸಿಕೊಂಡು ಮೂವರನ್ನೂ ಬಂಧಿಸಿದ್ದರು.

ನೀನು ನೋಡಲು ಚೆನ್ನಾಗಿಲ್ಲ:ವಾಟ್ಸ್‌ಆಪ್‌ನಲ್ಲೇ ಹೆಂಡತಿಗೆ ತಲಾಖ್ ನೀನು ನೋಡಲು ಚೆನ್ನಾಗಿಲ್ಲ:ವಾಟ್ಸ್‌ಆಪ್‌ನಲ್ಲೇ ಹೆಂಡತಿಗೆ ತಲಾಖ್

ಸ್ಥಳೀಯ ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ತಿರಸ್ಕರಿಸಿತ್ತು. ಹಾಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು ಆದರೆ ಹೈಕೋರ್ಟ್‌ ಸಹ ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

English summary
Karnataka High court refuse to grant bail to accused who messaged 'Pakistan Zindabad' to a whats app group. case was registered on three young Muslims in Koppal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X