ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಎಲ್ಲಾ ಕೆರೆಗಳ ಸುತ್ತ ಸಿಸಿ ಕ್ಯಾಮರಾ ಅಳವಡಿಸುವಂತೆ ಸೂಚನೆ

|
Google Oneindia Kannada News

ಬೆಂಗಳೂರು, ಜೂನ್ 19: ಎಲ್ಲಾ ಕೆರೆಗಳ ಬಳಿಯೂ ಸಿಸಿ ಕ್ಯಾಮರಾ ಅಳವಡಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.

ನಗರದಲ್ಲಿ ಕಣ್ಮರೆಯಾಗುತ್ತಿರುವ ಕೆರೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್ ಕೆರೆಗಳನ್ನು ಸಂರಕ್ಷಣೆ ಮಾಡಲು ಕೆಲವು ನಿರ್ದೇಶನಗಳನ್ನು ಬಿಬಿಎಂಪಿಗೆ ನೀಡಿದೆ. ನಗರದ ಎಲ್ಲಾ ಕೆರೆಗಳ ಸುತ್ತ ಸಿಸಿ ಕ್ಯಾಮರಾ ಅಳವಡಿಸಬೇಕು. ತ್ಯಾಜ್ಯ ಸುರಿಯದಂತೆ ನಿಗಾ ಇಡಬೇಕು, ನೀರುಗಾಲುವೆ ಅತಿಕ್ರಮಣವಾಗದಂತೆ ತಡೆಯಬೇಕು ಎಂದು ಆದೇಶಿಸಿದೆ.

ಕಲುಷಿತ ಕಗ್ಗದಾಸಪುರ ಕೆರೆ, ಲೋಕಾಯುಕ್ತ ನಿರ್ದೇಶನದ ಮೇರೆಗೆ ಪರಿಶೀಲನೆ ಕಲುಷಿತ ಕಗ್ಗದಾಸಪುರ ಕೆರೆ, ಲೋಕಾಯುಕ್ತ ನಿರ್ದೇಶನದ ಮೇರೆಗೆ ಪರಿಶೀಲನೆ

ಕೆರೆಗಳ ಸಂರಕ್ಷಣೆ ಹಾಗೂ ಒತ್ತುವರಿ ತೆರವು ಕೋರಿ ಸಿಟಿಜನ್ಸ್ ಆ್ಯಕ್ಷನ್ ಗ್ರೂಪ್, ಜೆಪಿ ನಗರ ನಾಲ್ಕನೇ ಹಂತದ ಡಾಲರ್ಸ್ ಲೇ ಔಟ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ಸಿಜೆ ಎಎಸ್ ಓಕ್ ಹಾಗೂ ನ್ಯಾ. ಎಚ್‌ಡಿ ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆಯನ್ನು ಆ.5ಕ್ಕೆ ಮುಂದೂಡಿದೆ.

High Court directed to install CCTV around Bengaluru lakes

ನಗರದಲ್ಲಿ2500 ಕಡೆ ರಾಜಕಾಲುವೆ ಒತ್ತುವರಿ ಮಾಡಲಾಗಿದೆ. ಇದುವರೆಗೆ ಕೇವಲ 600 ಕಡೆ ತೆರವುಗೊಳಿಸಲಾಗಿದೆ. ಉಳಿದ ಒತ್ತುವರಿಗಳ ತೆರವಿಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಸರ್ವೇ ಇಲಾಖೆಯು ಪ್ರತಿ ತಿಂಗಳೂ 250 ಒತ್ತುವರಿಗಳ ಸರ್ವೆ ನಡೆಸಿ ಬಿಬಿಎಂಪಿಗೆ ವರದಿ ಸಲ್ಲಿಸಬೇಕು ಎಂದು ಹೇಳಿದೆ.

English summary
Karnataka High Court directed the bbmp to install CCTV camera around bengaluru lakes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X