ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್: ತಪಾಸಣೆ ತೀವ್ರ

|
Google Oneindia Kannada News

ಬೆಂಗಳೂರು, ಮಾರ್ಚ್ 8: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ತಪಾಸಣೆ ಅಂಶವನ್ನು ಕೂಡ ಹೆಚ್ಚಳ ಮಾಡಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಹಾಗೂ ನಂತರ ಭಾರತ-ಪಾಕಿಸ್ತಾನ ಗಡಿಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಭದ್ರತೆ ಹಾಗೂ ತಪಾಸಣೆಯಲ್ಲಿ ತೀವ್ರಗೊಳಿಸಲಾಗಿದೆ.

ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ

ನಿಲ್ದಾಣದಲ್ಲಿ ಪ್ರಯಾಣಿಕರು ತಪಾಸಣೆಗೆ ಒಳಪಡಲು ಗಂಟೆ ಗಟ್ಟಲೆ ಕಾದು ನಿಲ್ಲಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ದೇಶೀಯ ಮಾರ್ಗದಲ್ಲಿ ಹಾರಾಡುವ ವಿಮಾನಗಳು ಬೆಳಗ್ಗೆ ವೇಳೆಯೇ ಹೆಚ್ಚಾಗಿವೆ. ಹೀಗಾಗಿ, ತಡರಾತ್ರಿಯಿಂದಲೇ ಸರತಿಯಲ್ಲಿ ನಿಂತಿದ್ದಾರೆ. ಕಾರುಗಳ ಪ್ರವೇಶದ ವೇಳೆ ಡಿಕ್ಕಿಗಳು ಸೇರಿದಂತೆ ಒಳಭಾಗದಲ್ಲಿ ಪರಿಶೀಲನೆ ,ಟರ್ಮಿನಲ್ ಪ್ರವೇಶ ದ್ವಾರದಲ್ಲೂ ಕೂಡಾ ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದೆ.

High alert in KIA, passengers are suffering

ಬೆಂಗಳೂರಿನಿಂದ ಹೊಸ ಮಾರ್ಗದಲ್ಲಿ ಹಲವು ವಿಮಾನಗಳ ಸಂಚಾರ ಬೆಂಗಳೂರಿನಿಂದ ಹೊಸ ಮಾರ್ಗದಲ್ಲಿ ಹಲವು ವಿಮಾನಗಳ ಸಂಚಾರ

ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಆಫ್ ಇಂಡಿಯಾ ಹೊರಡಿಸಿರುವ ಸೂಚನೆ ಪ್ರಕಾರ ಒಟ್ಟು 20 ಅಂಶಗಳ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಮಾನ ನಿಲ್ದಾಣ, ಏರ್‌ಲೈನ್ಸ್‌ಗಳು ಮತ್ತು ಭದ್ರತಾ ಏಜೆನ್ಸಿಗಳಿಗೆ ಸೂಚಿಸಲಾಗಿದೆ. ಪರ್ಸ್‌ಗಳು, ಲೋಹದ ವಸ್ತುಗಳನ್ನು, ಮೊಬೈಲ್‌ಗಳನ್ನು ವೈಯಕ್ತಿಕ ತಪಾಸಣೆ ಜೊತೆಗೆ ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ನಡೆಸಲಾಗುತ್ತದೆ.

English summary
Because terrorist threats Kempegowda international airport authorities have increased the security check up at Airport. This becoming huge problem for the passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X