ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ರಿಚರ್ಡ್ ಸ್ಯಾಂಕಿ ಜನ್ಮದಿನ, ವಿಶ್ವ ಜಲ ದಿನದ ಅಂಗವಾಗಿ ಪಾರಂಪರಿಕ ಸೈಕಲ್ ಸವಾರಿ

|
Google Oneindia Kannada News

ಬೆಂಗಳೂರು, ಮಾರ್ಚ್ 22: ಬೆಂಗಳೂರು ಮೂಲದ ಎನ್.ಜಿ.ಒ "ನಮ್ಮ ನಿಮ್ಮ ಸೈಕಲ್ ಫೌಂಡೇಶನ್' (ಎನ್ಎನ್ಸಿಎಫ್) ಸಮುದಾಯವನ್ನು ಒಳಗೊಂಡ ಸಂಚಾರಿ ವ್ಯವಸ್ಥೆಯನ್ನು ಸೃಷ್ಠಿ ಮಾಡುವ ಯತ್ನ ಮಾಡುತ್ತಿದೆ.

ರಿಚರ್ಡ್ ಸ್ಯಾಂಕಿಯವರ ಜನ್ಮದಿನ ಮತ್ತು ವಿಶ್ವ ಜಲ ದಿನದ ಅಂಗವಾಗಿ ಬೆಂಗಳೂರಿಗೆ ರಿಚರ್ಡ್ ಸ್ಯಾಂಕಿಯವರ ಕೊಡುಗೆಯ ಬಗ್ಗೆ ಜಾಗೃತಿ ಮೂಡಿಸಲು ನಮ್ಮ ನಿಮ್ಮ ಸೈಕಲ್ ಫೌಂಡೇಶನ್ ತೋಟಗಾರಿಕೆ ಇಲಾಖೆ ಸಹಭಾಗಿತ್ವದೊಂದಿಗೆ ಪಾರಂಪರಿಕ ಸವಾರಿಯನ್ನು ಆಯೋಜಿಸಿತ್ತು.

ಬೆಂಗಳೂರು: ಎಚ್‌ಎಎಲ್‌ ಜಂಕ್ಷನ್‌ನಲ್ಲಿ ಮರಗಳನ್ನು ಉಳಿಸಲು ಮಾನವ ಸರಪಳಿಬೆಂಗಳೂರು: ಎಚ್‌ಎಎಲ್‌ ಜಂಕ್ಷನ್‌ನಲ್ಲಿ ಮರಗಳನ್ನು ಉಳಿಸಲು ಮಾನವ ಸರಪಳಿ

ಹೈಕೋರ್ಟ್, ಮೇಯೋ ಹಾಲ್, ಆಂಡ್ರ್ಯೂ ಚರ್ಚ್ ಮತ್ತು ಸರ್ಕಾರಿ ಆರ್ಟ್ ಮ್ಯೂಸಿಯಂ ಸೇರಿದಂತೆ ನಿರ್ಮಿಸಲಾದ ರಿಚರ್ಡ್ ಸ್ಯಾಂಕಿ ಸ್ಮಾರಕಗಳಿಗೆ ಭೇಟಿ ನೀಡಲು ಸೈಕ್ಲಿಸ್ಟ್ ಗಳು ಕಬ್ಬನ್ ಪಾರ್ಕ್ ಸುತ್ತಲೂ ಸವಾರಿ ಮಾಡಿದರು. ರಿಚರ್ಡ್ ಸ್ಯಾಂಕಿ 1861ರಿಂದ ಮೈಸೂರಿನ ಮುಖ್ಯ ಎಂಜಿನಿಯರ್ ಆಗಿ 13 ವರ್ಷಗಳ ಕಾಲ ಕರ್ನಾಟಕದಲ್ಲಿ ಕೆಲಸ ಮಾಡಿದರು. ಈ ಕಾರ್ಯಕ್ರಮಕ್ಕೆ ಸಚಿವ ಆರ್.ಶಂಕರ್, ಐಎಎಸ್ ಅಧಿಕಾರಿ ಫೌಜಿಯಾ ತರಣುಮ್, ಡಿಸ್ಕವರಿ ವಿಲೇಜ್‌ನ ರಾಮಕೃಷ್ಣ ಗಣೇಶ್ ಭಾಗವಹಿಸಿದ್ದರು.

Bengaluru: Heritage Cycle Riding as part of Richard Sankey Birthday And World Water Day

ತೋಟಗಾರಿಕೆ ಸಚಿವ ಆರ್.ಶಂಕರ್ ಅವರು ಮಾತನಾಡಿ, "ಕಬ್ಬನ್ ಹೆರಿಟೇಜ್ ಸವಾರಿಯ ಭಾಗವಾಗಿ, ಭಾರತೀಯ ಮತ್ತು ಬ್ರಿಟಿಷ್ ಇತಿಹಾಸವನ್ನು ಅನ್ವೇಷಿಸಲಾಗುವುದು. ಪಾರಂಪರಿಕ ಸವಾರಿಯ ಮೂಲಕ ಕಳೆದ 150 ವರ್ಷಗಳಲ್ಲಿ ಬೆಂಗಳೂರು ಯಾವ ರೀತಿ ಪರಿವರ್ತನೆ ಮತ್ತು ರೂಪಾಂತರವನ್ನು ನಾವು ಅರ್ಥಮಾಡಿಕೊಂಡಿದ್ದೇವೆ " ಎಂದರು.

"ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾವು ಸಂತೋಷಪಡುತ್ತೇವೆ, ಏಕೆಂದರೆ ಇದು ನಮ್ಮ ಸ್ಮಾರಕಗಳನ್ನು ರಕ್ಷಿಸಲು ಮತ್ತು ಕಬ್ಬನ್ ಪಾರ್ಕ್ ಒಳಗಿನ ಐತಿಹಾಸಿಕ ಕ್ಷಣಗಳ ಬಗ್ಗೆ ಅರಿವು ಮೂಡಿಸುವ ಸಂಚಲನವಾಗಿ, ಪಾರಂಪರಿಕ ಪ್ರವಾಸೋದ್ಯಮದಲ್ಲಿ ಹೆಜ್ಜೆ ಹಾಕುವ ಅವಕಾಶವಾಗಿದೆ' ಎಂದು ತೋಟಗಾರಿಕೆ ನಿರ್ದೇಶಕ ಫೌಜಿಯಾ ಹೇಳಿದರು.

Bengaluru: Heritage Cycle Riding as part of Richard Sankey Birthday And World Water Day

ಪ್ಲಾಗ್ ರನ್ ಮತ್ತು ಸಲಹೆಗಾರ ಡಿಸ್ಕವರಿ ವಿಲೇಜ್ ರಾಮಕೃಷ್ಣ ಗಣೇಶ್, "ನಮ್ಮ ಸಂರಕ್ಷಣಾ ಪ್ರಯತ್ನಗಳಲ್ಲಿ ಇಂತಹ ಯತ್ನಗಳು ಇತಿಹಾಸವನ್ನು ಜನಪ್ರಿಯಗೊಳಿಸುವುದೆಂದು ನಾವು ಧೃಡವಾಗಿ ನಂಬಿದ್ದೇವೆ. ಈ ಕಾರ್ಯಕ್ರಮವು ಯುವ ಪೀಳಿಗೆಗೆ ಬೆಂಗಳೂರಿನ ಅದ್ಭುತ ಪರಂಪರೆ ಮತ್ತು ಸಂಸ್ಕೃತಿಯನ್ನು ಕಂಡುಕೊಳ್ಳಲು ಸಹಾಯ ಮಾಡುವ ಎಲ್ಲಾ ಅಂಶಗಳನ್ನು ಹೊಂದಿದೆ, ಕಸ ಮುಕ್ತ ಮತ್ತು ಪ್ಲಾಸ್ಟಿಕ್ ಮುಕ್ತ ಕಬ್ಬನ್ ಪಾರ್ಕ್ ಬಗ್ಗೆ ಅರಿವು ಕೂಡ ಮಾಡುತ್ತಿದ್ದೇವೆ" ಎಂದು ತಿಳಿಸಿದರು.

Recommended Video

ಮಹಾರಾಷ್ಟ್ರಕ್ಕೆ ತೆರಳುವ ಮತ್ತು ಬೆಳಗಾವಿಗೆ ಬರುವ 120 ಬಸ್‌ಗಳ ಸಂಚಾರ ತಾತ್ಕಾಲಿಕ ಸ್ಥಗಿತ | Oneindia Kannada

ಎನ್.ಎನ್.ಸಿ.ಎಫ್ ನಿರ್ದೇಶಕ ಮುರಳಿ ಎಚ್.ಆರ್ ಮಾತನಾಡಿ, "ಸ್ಯಾಂಕಿಯವರ ಕೆಲಸ ಬೆಂಗಳೂರು ನಗರವನ್ನು ಕಟ್ಟುವಲ್ಲಿ ಒಂದು ವಿಶಿಷ್ಟ ಗುರಿ ಮತ್ತು ಸ್ಫೂರ್ತಿಯನ್ನು ಹೊಂದಿದೆ. ನಗರದ ಮೇಯೊ ಹಾಲ್, ಆಂಡ್ರ್ಯೂ ಚರ್ಚ್, ಹೈಕೋರ್ಟ್ ನಂಥ ಮಹಾನ್ ಸ್ಮಾರಕಗಳನ್ನು ನಿರ್ಮಿಸುವಲ್ಲಿ ಸ್ಯಾಂಕಿಯ ಕೊಡುಗೆ ಅಪಾರ. ಅವರು ಸ್ಥಾಪಿಸಿದ ಕಬ್ಬನ್ ಪಾರ್ಕ್ ನಲ್ಲಿ ಸವಾರಿಯನ್ನು ಆಯೋಜಿಸುವುದೆ ಒಂದು ಭಾಗ್ಯ" ಎಂದು ಹೇಳಿದರು.

English summary
Namma Nimma Cycle Foundation has organized a Heritage Riding in partnership with the Horticulture Department to raise awareness of Richard Sankey's contribution to Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X