ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿಎಸ್ ಟಿ ಜಾರಿಯಾದ ನಂತರದ ಎಂಟಿ ಆರ್ ನ ಕಾಫಿ ಬಿಲ್ ನೋಡಿದ್ರಾ!

|
Google Oneindia Kannada News

ಬೆಂಗಳೂರು, ಜುಲೈ 1: ಜಿಎಸ್ ಟಿ ಜಾರಿ ಆದ ಮೇಲೆ ಹೋಟೆಲಿನಲ್ಲಿ ತಿಂಡಿ-ಊಟ, ಕಾಫಿ-ಟೀ ದರಗಳು ಏನಾಗುತ್ತವೆ ಎಂಬ ಬಗ್ಗೆ ತೀವ್ರ ಕುತೂಹಲವಿತ್ತು. ನಿರೀಕ್ಷೆಗೆ ತಕ್ಕಂತೆ ಬೆಳ್ ಬೆಳಗ್ಗೆ ಕಾಫಿ-ಟೀ ಕುಡಿದವರು ತಮ್ಮ ಬಿಲ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸ್ ಆಪ್ ಗಳಲ್ಲಿ ಹರಿಯ ಬಿಡುತ್ತಿದ್ದಾರೆ.

ಶನಿವಾರ ಬೆಳ್ಳಂ ಬೆಳಗ್ಗೆ ಹಾಗೆ ಸಿಕ್ಕಿದ್ದು ಬೆಂಗಳೂರಿನ ಲಾಲ್ ಬಾಗ್ ರಸ್ತೆಯಲ್ಲಿರುವ ಮಾವಳ್ಳಿ ಟಿಫನ್ ರೂಮ್ಸ್ ನ ಕಾಫಿ ಬಿಲ್. ಒಂದು ಕಾಫಿಗೆ ಮೂವತ್ತೆಂಟು ದುಪಾಯಿ ಆಗಿದೆ. ಮೂಲ ಬೆಲೆ ಮೂವತ್ತೆರಡು ರುಪಾಯಿ ಹತ್ತು ಪೈಸೆ ಆಗಿದ್ದರೆ. ಅದಕ್ಕೆ ರಾಜ್ಯದ ಜಿಎಸ್ ಟಿ ಒಂಬತ್ತು ಪರ್ಸೆಂಟ್ ಹಾಗೂ ಕೇಂದ್ರದ ಜಿಎಸ್ ಟಿ ಒಂಬತ್ತು ಪರ್ಸೆಂಟ್ ಸೇರಿ ಒಟ್ಟು ಮೂವತ್ತೆಂಟು ರುಪಾಯಿ ಆಗಿದೆ.

Here is the MTR coffee bill after GST implementation

ಈ ಬಗ್ಗೆ ವಿಚಾರಿಸಲು ಫೋನ್ ಮಾಡಿದಾಗ ಎಂಟಿಆರ್ ಫುಡ್ಸ್ ವಿಭಾಗದ ಮಹಿಳೆಯೊಬ್ಬರು ಕರೆ ಸ್ವೀಕರಿಸಿದರು. ಮೊದಲಿಗೆ ಬಿಲ್ ನ ಸಾಚಾತನ ಖಚಿತ ಪಡಿಸಿಕೊಳ್ಳಬೇಕಿತ್ತು. ಅದರ ಬಗ್ಗೆ ಕೇಳಿದಾಗ, ಈ ಹಿಂದೆ ಎಂಟಿಆರ್ ಹೋಟೆಲ್ ನಲ್ಲಿ ಮೂವತ್ತಾರು ರುಪಾಯಿ ಇದ್ದ ಕಾಫೀ ಈಗ ಎರಡು ರುಪಾಯಿ ಹೆಚ್ಚಾಗಿದೆ. ಆದರೂ ಇನ್ನೂ ಬೆಲೆಯ ಬಗ್ಗೆ ಗೊಂದಲ ಇದೆ. ಇನ್ನೂ ಹೆಚ್ಚು ವಿವರಗಳನ್ನು ನೀಡುವುದಕ್ಕೆ ನಮಗೇ ಮಾಹಿತಿ ಇಲ್ಲ ಎಂದರು.

English summary
After GST implementation how hotel bills look like, here is an sample of Bengaluru MTR hotel coffee bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X