ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಡಾ. ತೊಗಾಡಿಯಾ ಭಾಷಣದ ಪೂರ್ಣಪಾಠ

By Kiran B Hegde
|
Google Oneindia Kannada News

ಬೆಂಗಳೂರು, ಫೆ. 9: ನಗರದಲ್ಲಿ ಭಾನುವಾರ ಯಶಸ್ವಿಯಾಗಿ ನಡೆದ ವಿರಾಟ್ ಹಿಂದೂ ಸಮಾಜೋತ್ಸವ ಕೊನೆ ಹಂತದವರೆಗೂ ಯಶಸ್ವಿಯಾಗಿ ನಡೆದು ಕೊನೆಯಲ್ಲಿ ವಿವಾದಕ್ಕೆ ಕಾರಣವಾಗಿದೆ. ಸಮಾಜೋತ್ಸವದ ಕೊನೆ ಹಂತದವರೆಗೂ ಪ್ರವೀಣ್ ತೊಗಾಡಿಯಾ ಭಾಷಣದ ವಿಡಿಯೋ ಪ್ರಸಾರ ಕುರಿತು ವಿಶ್ವ ಹಿಂದೂ ಪರಿಷತ್ ಮುಖಂಡರು ಗುಟ್ಟು ಬಿಟ್ಟುಕೊಟ್ಟಿರರಿಲ್ಲ.

ಆದರೆ, ಕಾರ್ಯಕ್ರಮದ ಕೊನೆಯಲ್ಲಿ ಪೊಲೀಸ್ ಆಯುಕ್ತರ ಸೂಚನೆಗೆ ಸೆಡ್ಡು ಹೊಡೆದು ಪ್ರವೀಣ್ ತೊಗಾಡಿಯಾ ಭಾಷಣವನ್ನು ವಿಡಿಯೋ ಪ್ರಸಾರ ಮಾಡಲಾಯಿತು. ಬೆಂಗಳೂರಿಗೆ ಬರುವುದು ಸಾಧ್ಯವಾಗದಿದ್ದರೂ ಹಿಂದೂ ಸಮಾಜೋತ್ಸವದಲ್ಲಿ ನೆರೆದಿದ್ದ ಹಿಂದೂ ಪ್ರೇಮಿಗಳಿಗೆ ಕೊನೆಗೂ ತಮ್ಮ ಸಂದೇಶವನ್ನು ಮುಟ್ಟಿಸಿಯೇ ಬಿಟ್ಟರು. [ಹಿಂದೂ ಸಮಾಜೋತ್ಸವದ ವಿಡಿಯೋ]

praveen

ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಡಾ. ಪ್ರವೀಣ್ ತೊಗಾಡಿಯಾ ಅವರ ಭಾಷಣದ ಪೂರ್ಣಪಾಠ ಇಲ್ಲಿದೆ.

"ಹಿಂದೂ ಧರ್ಮಕ್ಕೆ, ಹಿಂದೂ ರಾಷ್ಟ್ರಕ್ಕೆ ಹಾಗೂ ಹಿಂದೂ ಸಮಾಜಕ್ಕೆ ಜಯವಾಗಲಿ. ವೇದಿಕೆಯ ಮೇಲೆ ಉಪಸ್ಥಿತರಿರುವ ಪರಮಪೂಜ್ಯ ಪೇಜಾವರಶ್ರೀಗಳಾದ ವಿಶ್ವೇಶತೀರ್ಥರಿಗೆ, ಶ್ರೀವೀರೇಂದ್ರ ಹೆಗ್ಗಡೆಯವರಿಗೆ, ಶ್ರೀಶ್ರೀ ರವಿಶಂಕರರಿಗೆ, ಆದಿಚುಂಚನಗಿರಿಯ ನಿರ್ಮಲಾನಂದನಾಥರಿಗೆ, ಪೂಜ್ಯ ಶಿವರುದ್ರ ಸ್ವಾಮಿಗಳಿಗೆ, ಮಾದಾರ ಚೆನ್ನಯ್ಯ ಸ್ವಾಮಿಗಳಿಗೆ ಹಾಗೂ ಇಲ್ಲಿ ನೆರೆದಿರುವ ಸಮಸ್ತ ಜನಸ್ತೋಮಕ್ಕೆ ನನ್ನ ನಮನಗಳು.

ಸಹೋದರ- ಸಹೋದರಿಯರೇ, ಇಂದು ನಾವಿಲ್ಲಿ ಸೇರಿರುವುದು ವಿಶ್ವ ಹಿಂದೂ ಪರಿಷತ್ತಿಗೆ 50 ವರ್ಷಗಳು ತುಂಬಿರುವುದನ್ನುಸ್ಮರಿಸಿಕೊಳ್ಳಲು. ಆದರೆ ಬರೀ ಆ ಸಂಭ್ರಮಾಚರಣೆಗೆ ನಮ್ಮನ್ನು ಮೀಸಲುಗೊಳಿಸಲು ನಾವಿಲ್ಲಿ ಸೇರಿಲ್ಲ. ಜೊತೆಗೆ ಮೂರು ಮುಖ್ಯಸಂಕಲ್ಪಗಳನ್ನು ಮಾಡಲು, ಅವುಗಳನ್ನುಅರ್ಥಮಾಡಿಕೊಂಡು ಅಳವಡಿಸಿಕೊಳ್ಳಲು ಸೇರಿದ್ದೇವೆ. [ಕುತೂಹಲ ಘಟ್ಟಕ್ಕೆ ತೊಗಾಡಿಯಾ ಭಾಷಣ ವಿವಾದ]

ಅದಕ್ಕೆ ಮೊದಲು ನಿಮ್ಮನ್ನು ಇತಿಹಾಸದ ಗತವೈಭವಕ್ಕೆ ಒಯ್ಯಬೇಕೆಂದಿದ್ದೇನೆ.

ಒಂದೂವರೆ- ಎರಡು ಸಾವಿರ ವರ್ಷಗಳ ಹಿಂದೆ ಪರಿಸ್ಥಿತಿ ಹೇಗಿತ್ತು ಗೊತ್ತೇ? ಅಭಿವೃದ್ಧಿ, ಸಂಪತ್ತು, ಪ್ರಗತಿ, ಜ್ಞಾನ, ವೈಭವ, ಶಕ್ತಿಗಳೆಲ್ಲ ಮೇಳೈಸಿದ್ದಿದ್ದೇ ನಮ್ಮ ಹಿಂದೂರಾಷ್ಟ್ರದಲ್ಲಿ. ಆದರೆ ಇಂದುಯಾರನ್ನೇ ಕೇಳಿ ನೋಡಿ, ಯಾವ ರಾಷ್ಟ್ರ ಮುಂಚೂಣಿಯಲ್ಲಿದೆಎಂದು -ಎಲ್ಲರ ಉತ್ತರವೂ ಒಂದೇ. ಅಮೆರಿಕಾ! ಹೌದು. ಹಿಂದೂ ನಿಧಾನವಾಗಿ ಕರಗಿ ಕೇವಲ ಒಂದು 'ಬಿಂದು' ವಿನಷ್ಟಾಗಿದ್ದಾನೆ. ಸ್ವಾತಂತ್ರ್ಯಾನಂತರವಂತೂ ಹಿಂದೂಗಳ ಶೇಕಡ ಪ್ರಮಾಣ ಕಡಿಮೆಯಾಗುತ್ತಲೇ ಬಂದು ಈಗ 80ಕ್ಕೆ ನಿಂತಿದೆ.

ಇದು ಇನ್ನೆಲ್ಲಿ 40ರ ಹೊಸ್ತಿಲಿಗೆ ಬಂದುಬಿಡುವುದೋ ಎಂಬ ಆತಂಕವಾಗುತ್ತಿದೆ ನನಗೆ. ಒಂದು ಕಾಲದಲ್ಲಿ ಆಗರ್ಭ ಶ್ರೀಮಂತವಾಗಿದ್ದ ದೇಶದಲ್ಲಿ ಇಂದು ಹಸಿವಿನಿಂದ ಬಳಲುತ್ತಿರುವವರಿಗೆ ಲೆಕ್ಕವೇಇಲ್ಲ. 40 ಕೋಟಿ ಹಿಂದೂಗಳು ತಿಂಗಳಿಗೆ ಸಂಪಾದಿಸುತ್ತಿರುವುದು ಒಂದೇ ಒಂದು ಸಾವಿರ ರೂಪಾಯಿ! ಐದು ಕೋಟಿ ಹಿಂದೂಗಳು ನಿರುದ್ಯೋಗಿಗಳು! ಕಳೆದ ಹತ್ತು ವರ್ಷಗಳಲ್ಲಿ ನಾಲ್ಕು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಷ್ಟೊಂದು ಸಮೃದ್ಧವಾಗಿದ್ದ ದೇಶ ಈ ಸ್ಥಿತಿಗೇಕೆಬಂತು?

ಏಕೆ ಉಳಿಯಲಿಲ್ಲ ಆ ವೈಭವ? ಏಕೆಂದರೆ ನಾವು ಉಳಿಸಿಕೊಳ್ಳಲಿಲ್ಲ! ನಮಗೆ ರಕ್ಷಣೆಯೇ ಇರಲಿಲ್ಲ. ಅದಿಲ್ಲದೆ ಹೇಗೆ ಉಳಿಯಬೇಕು ಹಿಂದೂಗಳ ಸಮೃದ್ಧಿ? ಕಾಶ್ಮೀರದ ಹಿಂದೂಗಳದ್ದೂ ಅದೇ ಹಣೆಬರಹವೇ ಅಲ್ಲವೇ? ಯುಗಯುಗಗಳಿಂದ ನಮಗೆ ರಕ್ಷಣೆಯಿತ್ತು. ನಮ್ಮಮನೆ-ಮಠ, ಸಂಪತ್ತು, ಧರ್ಮ ಹಾಗೂ ನಮ್ಮ ಹೆಣ್ಣುಮಕ್ಕಳು ಮೊದಲೆಲ್ಲ ಸುರಕ್ಷಿತವಾಗೇ ಇದ್ದರು. ಆದರೆ ಎರಡು ಸಾವಿರ ವರ್ಷಗಳಿಂದೀಚೆಗೆ ಎಲ್ಲಿದೆ ನಮಗೆ, ನಮ್ಮ ಧರ್ಮಕ್ಕೆ ರಕ್ಷಣೆ?ಇಂದು ವಿಶ್ವದಲ್ಲಿ ಹಿಂದೂ ಎಲ್ಲಿ ಸುರಕ್ಷಿತನಾಗಿದ್ದಾನೆ? ಎಲ್ಲೂ ಇಲ್ಲ. ಕಡೇ ಪಕ್ಷ ನಮ್ಮ ದೇಶದಲ್ಲಿ? ಉಹೂಂ. ಇಲ್ಲೂ ಸುರಕ್ಷಿತನಲ್ಲ. ಕಾಶ್ಮೀರದಿಂದ ಬಂಗಾಳದವರೆಗೂ ಎಲ್ಲೆಲ್ಲೂ ಹಿಂದೂ ಅತಂತ್ರನೇ. ಆದ್ದರಿಂದಲೇ ಈ ಮೂರು ಸಂಕಲ್ಪಗಳು.
ಹಿಂದೂವಿನರಕ್ಷಣೆ :100 ಕೋಟಿ ಹಿಂದೂಗಳ ಸಂಪತ್ತು, ಹೊಲ, ಮನೆ-ಮಠ, ಧರ್ಮ ಹಾಗೂ ಹೆಣ್ಣುಮಕ್ಕಳನ್ನು ರಕ್ಷಿಸಿಕೊಳ್ಳಬೇಕಿದೆ. ಸಮೃದ್ಧಿ ರಕ್ಷಣೆಯಿದ್ದರೆ ಸಮೃದ್ಧಿತಾನೇತಾನಾಗಿ ಆಗುತ್ತದೆ. ಆತ್ಮಸಮ್ಮಾನ: ಸಮೃದ್ಧಿಯಿದ್ದರೆ ನಮ್ಮಆತ್ಮ ಸಮ್ಮಾನವೂ ಉಳಿಯುತ್ತದೆ. [ತೊಗಾಡಿಯಾ ಬೆಂಗಳೂರಿಗೆ ಬರುವಂತಿಲ್ಲ]

ಹಾಗಾದರೆ, ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?

1. ನಮ್ಮ ಸಂಖ್ಯೆ ಕಡಿಮೆಯಾಗಕೂಡದು, ಬದಲಿಗೆ ವೃದ್ಧಿಯಾಗಬೇಕು.
2. ಅಗತ್ಯವಿರುವ ಸಾಂವಿಧಾನಿಕ ತಿದ್ದುಪಡಿಗಳು ಅನುಷ್ಠಾನಗೊಳ್ಳಬೇಕು.
3. ಎಲ್ಲ ಹಿಂದೂಗಳೂ ಹೆಸರಿಗೆ ಮಾತ್ರವಲ್ಲ, ಆಚರಣೆಯಿಂದಲೂ ಹಿಂದೂಗಳಾಗಬೇಕು!
4. ಪ್ರತಿ ಹಿಂದೂವೂ ಜಾಗೃತನಾಗಬೇಕು. ತನ್ನ ಧರ್ಮದ ಹಾಗೂ ತನ್ನ ಏಳ್ಗೆಗಾಗಿ ಕಟಿಬದ್ಧನಾಗಬೇಕು.
5. ಹಿಂದೂಗಳೆಲ್ಲ ಸಕ್ರಿಯರಾಗಬೇಕು.
6. ಬಹಳ ಮುಖ್ಯವಾಗಿ ನಮ್ಮಲ್ಲಿರುವ ಜಾತಿಭೇದ ತೊಲಗಬೇಕು. ಅಸ್ಪೃಶ್ಯತೆಯನ್ನು ಬದಿಗೊತ್ತಿ, ಯಾವ ಜಾತಿಗೆ ಸೇರಿದ್ದರೂ ಸರಿ, ಮೊದಲು ನಾವೆಲ್ಲ ಹಿಂದೂಗಳು ಎಂಬುದನ್ನು ಮನಗಂಡು ಒಗ್ಗಟ್ಟಾಗಿರಬೇಕು.

• ನಮಗೆ ಮತಾಂತರಬೇಡ, ನಮ್ಮ ಧರ್ಮಕ್ಕೆ ಮರಳುವುದು ಬೇಕು.
• ಲವ್ ಜಿಹಾದ್ ಬೇಡ, ಸಮಾನ ನಾಗರಿಕೆ ಸಂಹಿತೆ ಬೇಕು,
• ಬಾಂಗ್ಲಾದೇಶದಿಂದ ವಲಸೆ ಬರುತ್ತಿರುವ ಮುಸಲ್ಮಾನರು ಬೇಡ, ಹಿಂದೂ ಮನೆಗಳಲ್ಲಿ ಹೆಚ್ಚುಹೆಚ್ಚು ಮಕ್ಕಳಾಗುವುದು ಬೇಕು.

ನೆನಪಿಡಿ, ನಮಗೆ ಯಾರೂ ಸಹನೆಯನ್ನು ಹೊಸದಾಗಿ ಕಲಿಸುವ ಅಗತ್ಯವಿಲ್ಲ. ನಮ್ಮಲ್ಲಿ ಅದಿಲ್ಲದಿದ್ದರೆ ಇಂದು ಈ ದೇಶದಲ್ಲಿ ಪರಕೀಯರು ಬಂದು ವಾಸಿಸಲು ಆಗುತ್ತಲೇ ಇರಲಿಲ್ಲ. ಪ್ರಪಂಚದಲ್ಲೆಲ್ಲಾದರೂ ನಾವು ಮತಾಂತರ ಮಾಡಿದ ಉದಾಹರಣೆಗಳಿದ್ದರೆ ತೋರಿಸಿ ನೋಡೋಣ! ಹಾಗಿದ್ದ ಮೇಲೆ ನಾವೇಕೆ ಮತಾಂತರವಾಗಬೇಕು? ದೇಶದೊಳಗೆ ಬಂದು ಸೇರಿಕೊಂಡಿರುವ 3 ಕೋಟಿ ಬಾಂಗ್ಲಾದೇಶಿಗರನ್ನು ವಾಪಸ್ಕಳಿಸಬಾರದೇಕೆ? [ಪ್ರವೀಣ್ ತೊಗಾಡಿಯಾ ವಿಡಿಯೋ ಭಾಷಣ]

ಸಹೋದರರೇ, ಪಕ್ಕದ ಪಾಕಿಸ್ತಾನದಲ್ಲಿ ಪ್ರಧಾನ ಮಂತ್ರಿಯಾಗುವವನು ಬರೀ ತನ್ನ ದೇಶದ ಮುಸ್ಲಿಮರಿಗೋಸ್ಕರ ಆಡಳಿತ ನಡೆಸುತ್ತಾನೆ. ಆದರೆ ನಮ್ಮ ದೇಶದಲ್ಲಿ ಪ್ರಧಾನಿಯಾಗುವವರು ಹಿಂದೂಗಳನ್ನು ಮರೆಯುತ್ತಾರೇಕೆ? ಎಲ್ಲಸೌಲಭ್ಯ, ಭಾಗ್ಯಗಳೂ ಮುಸ್ಲಿಮರಪಾಲಾಗುವುದೇಕೆ? ಏನುಮಾಡಿದ್ದಾರೆನಮ್ಮಹಿಂದುಗಳು? ಹೀಗೇ ಮುಂದುವರೆದರೆ ನಾವು ಪೂರ್ಣ ನಿರ್ನಾಮವಾಗಿ ಬಿಡುತ್ತೇವೆ. ಹಾಗಾಗಲು ಬಿಡಕೂಡದು. ನಮ್ಮ ಆಚರಣೆಯಿಂದ ನಾವು ಹಿಂದೂಗಳಾಗಿ ಉಳಿದು ನಮ್ಮ ಧರ್ಮವನ್ನೂ ಉಳಿಸಿಕೊಳ್ಳಬೇಕು. ನಮ್ಮ ಧರ್ಮವನ್ನುಆಚರಿಸುವುದು ಹೇಗೆ? ವಿಧಾನಗಳಿವೆಇಲ್ಲಿವೆ.

• ಬೆಳಿಗ್ಗೆ ಎದ್ದು ಭೂತಾಯಿಗೆ ನಮಿಸಬೇಕು, ಕುಲದೇವತೆಗೆ ನಮಿಸಬೇಕು, ತಂದೆ-ತಾಯಿಯರಿಗೆ ನಮಿಸಬೇಕು
• ತುಳಸಿ ಗಿಡಕ್ಕೆ ನೀರುಣಿಸಬೇಕು
• ಪಕ್ಷಿಗಳಿಗೆ ಕಾಳು-ನೀರುಗಳನ್ನು ಹಾಕಬೇಕು
• ದಿನವೂ ಭಗವಂತನಿಗೆ ಪೂಜೆ, ದಿನವೂದೇವರ ಮುಂದೆಒಂದರಿಂದ ಹತ್ತುರೂಪಾಯಿಗಳನ್ನಿಡುವುದು, ಬಳಿಕ ಅದನ್ನು ಧರ್ಮಕಾರ್ಯಕ್ಕೆ ವಿನಿಯೋಗಿಸಬೇಕು.
• ಊಟಕ್ಕೆ ಕೂರುವ ಮುಂಚೆ ಹಸಿದಿರುವ ಹಿಂದೂಗಳಿಗೋಸ್ಕರ ಒಂದು ಹಿಡಿ ಧಾನ್ಯವನ್ನು ತೆಗೆದಿಡುವುದು.
• ಊಟ ಮಾಡುವಾಗ ಮೊದಲತುತ್ತುಹಸುವಿಗೆ ಹಾಕುವುದು
• ದಿನವೂ ದೇಗುಲಕ್ಕೆ ಭೇಟಿ ಹಾಗೂ ಸೂರ್ಯಾಸ್ತವಾಗುವಾಗ ಮನೆಯಲ್ಲಿ ದೀಪ ಹಚ್ಚುವುದು.
• ಇಷ್ಟೆಲ್ಲದರ ಜೊತೆ ಅಸ್ಪೃಶ್ಯತೆಯಂಥ ಪೀಡೆಯನ್ನು ಪಕ್ಕಕ್ಕಿಟ್ಟು ಎಲ್ಲ ಜಾತಿಯವರನ್ನೂ ಒಂದೇ ಎಂದು ಕಾಣುವುದು.

ಓರ್ವ ಜಾಗೃತ ಹಿಂದೂವಾಗಿ ಈ ಎಲ್ಲ ಆಚರಣೆಗಳನ್ನು ಮಾಡಿದ್ದೇ ಆದರೆ ನಮ್ಮ ರಕ್ಷಣೆ ಹಾಗೂ ಸಮೃದ್ಧಿ ಖಚಿತವಲ್ಲವೇ? ಜಾಗೃತನಾಗಿರಬೇಕೆಂದರೆ, ಸಕ್ರಿಯನಾಗಿರಬೇಕೆಂದರೆ ನಾನು-ನನ್ನಸಂಸಾರಎಂದುಸುಮ್ಮನಿದ್ದುಬಿಡುವುದಲ್ಲ. ಬಡ, ದೀನ, ರೋಗ ಪೀಡಿತ ಅಥವಾ ನಿರುದ್ಯೋಗಿಯಾದ ಎಲ್ಲ ಹಿಂದೂಗಳ ಬಗ್ಗೆಯೂ ಕಾಳಜಿ, ಪ್ರೀತಿ ಹೊಂದಿರುವುದು. ಅವರಿಗೆ ಕೈಲಾದ ಸಹಾಯ ಮಾಡುವುದು. ಹಿಂದೂವಿಗೆ ಎಲ್ಲಿಯಾದರೂ ಅಪಮಾನವಾಗುತ್ತಿದೆಯೆಂದರೆ, ಜಟಾಯುವಿನಂತೆ ಒಬ್ಬನೇ ಹೋರಾಡಬೇಕಾಗಿ ಬಂದರೂ ಸೈ, ಅವನ ನೆರವಿಗೆ ನಿಲ್ಲುವುದು. ಒಬ್ಬನ ಅಪಮಾನಕ್ಕೆ ಯಾವಾಗ ನೂರು ಕೋಟಿ ಹಿಂದೂಗಳು ಸ್ಪಂದಿಸುತ್ತಾರೋ ಆಗಲೇ ಹಿಂದೂಧರ್ಮ ಸುರಕ್ಷಿತವಾಗಿರುವುದು ಅಲ್ಲವೇ?

ಸಮೃದ್ಧಿ ಪಡೆಯಲೂ ಹಲವು ದಾರಿಗಳಿವೆ. ಮೊದಲನೆಯದು ಯಾವ ಹಿಂದೂವೂ ಹಸಿದುಕೊಂಡಿರಬಾರದು. ಯಾವ ಹಿಂದೂವೂ ಅನಕ್ಷರಸ್ಥನಾಗಿರಬಾರದು. ಯಾವ ಮನೆಯಲ್ಲೂ ವೈದ್ಯರಿಲ್ಲದೆ ಇರಬಾರದು. ಯಾರೂ ನಿರುದ್ಯೋಗಿಯಾಗಿರಬಾರದು. ಜಗತ್ತಿನ ವ್ಯಾಪಾರ ವಹಿವಾಟಿನಲ್ಲಿ ತಮ್ಮದಾಗಿದ್ದ ಶೇ. 35ನ್ನು ಮತ್ತೆ ಗಳಿಸಿಕೊಳ್ಳಬೇಕೆಂದರೆ ನಾವು ವ್ಯಾಪಾರಕ್ಕೆ ಹೆಚ್ಚು ಒತ್ತು ನೀಡಬೇಕು. ನಮ್ಮಧರ್ಮದ ಶ್ರೇಷ್ಠತೆಯನ್ನುಎತ್ತಿಹಿಡಿಯಬೇಕು.

ಹಿಂದೂ ಪರಿವಾರ, ವ್ಯಾಪಾರ, ಆರೋಗ್ಯ, ವಿದ್ಯೆ, ಹೀಗೆಎಲ್ಲದರಲ್ಲೂ ಮುಂಚೂಣಿಯಲ್ಲಿರಬೇಕು. ವಿಶ್ವ ಹಿಂದೂ ಪರಿಷತ್ತಿನ ಈ ಸ್ವರ್ಣ ಜಯಂತಿಯ ಸಂದರ್ಭದಲ್ಲಿ ನಾವೆಲ್ಲ ಕಳೆದುಹೋಗಿರುವ ಹಿಂದೂಗಳ ಗೌರವ, ಸುರಕ್ಷೆ, ಸಮೃದ್ಧಿಗಳನ್ನು ಮತ್ತೆ ಗಳಿಸೋಣ.

ಒಬ್ಬ ಹಿಂದೂ ಇದನ್ನು ಅರ್ಥಮಾಡಿಕೊಂಡು ನೂರು ಜನರಿಗೆ ಅರ್ಥಮಾಡಿಸಿದರೆ ಸಾಕು, ನೂರು ಕೋಟಿ ಹಿಂದೂಗಳು ಅರ್ಥಮಾಡಿಕೊಂಡು ಆಚರಣೆಗಿಳಿದರೆ ಯಾವುದು ಅಸಾಧ್ಯ? ನನ್ನ ಸಹೋದರ-ಸಹೋದರಿಯರೇ, ನನಗೆನಿಮ್ಮಲ್ಲಿ ಅಚಲ ನಂಬಿಕೆಯಿದೆ. ನಾವೆಲ್ಲರೂ ಒಗ್ಗಟ್ಟಾಗಿರುತ್ತೇವೆ, ಜಾಗೃತರಾಗಿರುತ್ತೇವೆ ಹಾಗೂ ಸಕ್ರಿಯರಾಗಿರುತ್ತೇವೆ. ನಮ್ಮನ್ನು ಯಾರಾದರೂ ಹಿಮ್ಮೆಟ್ಟಿಸಲು, ತುಳಿಯಲು ಬಂದರೆ ಅವರನ್ನೇ ಹಿಮ್ಮೆಟ್ಟಿಸುತ್ತೇವೆ. ನಾನು ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ದಿನಗಳನ್ನು ಮರಳಿ ಪಡೆಯುತ್ತೇವೆ."

ಜೈ ಶ್ರೀರಾಮ್
ಹರಹರ ಮಹಾದೇವ್

English summary
Organizers of Virat Hindu Samajotsava finally telecasted the recorded speech of Praveen Togadiya. Here is the Full details of the speech. Thousands of policemen surprised by this development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X