ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಬಸ್ ಪಲ್ಟಿ ಹಿಂದಿದೆ ಹಲವು ಕಾರಣಗಳು

|
Google Oneindia Kannada News

ಬೆಂಗಳೂರು, ಮಾರ್ಚ್ 29: ರಾಜಾಜಿನಗರದ 1ನೇ ಬ್ಲಾಕ್ ಬಳಿ ಬುಧವಾರ ನೋಡನೋಡುತ್ತಿದ್ದಂತೆಯೇ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಿಎಂಟಿಸಿ ಬಸ್ ಪಲ್ಟಿ ಹೊಡೆದಿದೆ. ಬಸ್‌ನಲ್ಲಿದ್ದ 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕೇವಲ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಷ್ಟಕ್ಕೆ ಬಸ್ ಪಲ್ಟಿಯಾಯಿತೇ ಎನ್ನುವ ಅನುಮಾನ ಎಲ್ಲರನ್ನೂ ಕಾಡಿದೆ. ಇದರ ಹಿಂದೆ ಹಲವು ಕಾರಣಗಳಿವೆ.

ಬಸ್‌ಗೆ ಆಟೋ ಅಡ್ಡಬಂತು

ಬಸ್‌ಗೆ ಆಟೋ ಅಡ್ಡಬಂತು

ಅಪಘಾತದಿಂದ ಬಸ್ ಚಾಲಕ ನಿಂಗೇಗೌಡ ಅವರಿಗೆ ಗಾಯಗಳಾಗಿವೆ, ಒಂದು ಕಾಲು ಕೂಡ ಮುರಿದಿದೆ. ಬಸ್ ಸಾಮಾನ್ಯ ವೇಗದಲ್ಲಿಯೇ ಇತ್ತು ಆದರೆ ಫ್ಲೈಓವರ್ ಹತ್ತುವಾಗ ಸಂದರ್ಭದಲ್ಲಿ ಆಟೋ ಒಂದು ಅಡ್ಡಾದಿಡ್ಡಿಯಾಗಿ ಚಲಿಸಿತು. ಇದರ ಪರಿಣಾಮ ಫ್ಲೈಓವರ್ ಹತ್ತುವ ವಿಚಾರದಲ್ಲಿ ಗೊಂದಲ ಉಂಟಾಯಿತು ಎಂದು ಹೇಳಿದ್ದಾರೆ.

ಬಸ್ ಪಾಸ್ ಇರುವ ವಿದ್ಯಾರ್ಥಿಗಳಿಂದ ತಪ್ಪಿಸಿಕೊಳ್ಳಲು ಯತ್ನ

ಬಸ್ ಪಾಸ್ ಇರುವ ವಿದ್ಯಾರ್ಥಿಗಳಿಂದ ತಪ್ಪಿಸಿಕೊಳ್ಳಲು ಯತ್ನ

ಬೇರೆ ಮಾರ್ಗದಲ್ಲಿ ಹೋದರೆ ಕಾಲೇಜು ವಿದ್ಯಾರ್ಥಿಗಳು ಹತ್ತುತ್ತಾರೆ ಅದರಿಂದ ತಮಗೆ ನಷ್ಟ ಎಂದು ಚಾಲಕ ಬಿಎಂಟಿಸಿ ಮಾರ್ಗವನ್ನೇ ಬದಲಿಸಿದ್ದ. ಅದೂ ಒಂದು ಈ ಅಪಘಾತಕ್ಕೆ ಒಂದು ಕಾರಣ ಎನ್ನಬಹುದು.

ಬ್ರೇಕಿಂಗ್ :ಫ್ಲೈಓವರ್‌ ಹತ್ತುವಾಗ ಬಿಎಂಟಿಸಿ ಬಸ್ ಪಲ್ಟಿ, 8 ಮಂದಿ ಸ್ಥಿತಿ ಗಂಭೀರಬ್ರೇಕಿಂಗ್ :ಫ್ಲೈಓವರ್‌ ಹತ್ತುವಾಗ ಬಿಎಂಟಿಸಿ ಬಸ್ ಪಲ್ಟಿ, 8 ಮಂದಿ ಸ್ಥಿತಿ ಗಂಭೀರ

ಬ್ಲಾಕ್ ಸ್ಪಾಟ್‌ನಲ್ಲಿ ಬೀಳುವ ವಾಹನಗಳು

ಬ್ಲಾಕ್ ಸ್ಪಾಟ್‌ನಲ್ಲಿ ಬೀಳುವ ವಾಹನಗಳು

ಈ ಸ್ಥಳದಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತವೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಸ್ಥಳದಲ್ಲಿ ಎರಡು ದಿನಗಳ ಹಿಂದೆ ಆಟೋವೊಂದು ರಸ್ತೆ ವಿಭಜಕದ ಮೇಲೆ ಹತ್ತಿ ಪಲ್ಟಿ ಹೊಡೆದು ಬಿದ್ದಿದೆ. ಆಟೋದಲ್ಲಿದ್ದ ಮಹಿಳೆಗೆ ಗಾಯವಾಗಿತ್ತು. ಮಕ್ಕಳು ಸ್ವಲ್ಪದರಲ್ಲೇ ಬಚಾವ್ ಆಗಿದ್ದರು. ಹೀಗೆ ವಾರಕ್ಕೊಂದರಂತೆ ಅಪಘಾತಗಳು ಸಂಭವಿಸುತ್ತಿದೆ ಎಂದು ಹೇಳಿದ್ದಾರೆ.

ಸೂಚನಾ ಫಲಕವಿಲ್ಲದೆ ಗೊಂದಲ

ಸೂಚನಾ ಫಲಕವಿಲ್ಲದೆ ಗೊಂದಲ

ಅಪಘಾತ ಸಂಭವಿಸಿದ ರಾಜಾಜಿನಗರ 1ನೇ ಬ್ಲಾಕ್ ಫ್ಲೈಓವರ್ ಆರಂಭದಲ್ಲಿ ಪ್ರದೇಶ, ಮಾರ್ಗ ಸೂಚಿಸುವ ಫಲಕ ಹಾಕಿಲ್ಲ. ಫ್ಲೈಓವರ್ ವಿಭಜಕದ ಬಳಿ ಸಂಚಾರ ಪೊಲೀಸರು ಎರಡು ಕೆಂಪು ಕೋನ್‌ಗಳನ್ನು ಮಾತ್ರ ಅಳವಡಿಸಿದ್ದಾರೆ.ಉಳಿದಂತೆ ಯಾವುದೇ ಸುರಕ್ಷತಾ ಎಚ್ಚರಿಕೆ ಸೂಚನೆಗಳು ಅಲ್ಲಿಲ್ಲ.

ಬಿಎಂಟಿಸಿ ಚಾಲಕ ವಿದ್ಯಾರ್ಥಿಗಳಿಂದ ತಪ್ಪಿಸಿಕೊಳ್ಳಬಹುದು ಆದರೆ ಕರ್ಮದಿಂದಲ್ಲ ಬಿಎಂಟಿಸಿ ಚಾಲಕ ವಿದ್ಯಾರ್ಥಿಗಳಿಂದ ತಪ್ಪಿಸಿಕೊಳ್ಳಬಹುದು ಆದರೆ ಕರ್ಮದಿಂದಲ್ಲ

English summary
There are many reasons are unfolding behind the BMTC bus overturn. There was one serious allegation that driver changed the route to miss the college students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X