ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಕೋವಿಡ್ ಭೀತಿ; ಸಹಾಯವಾಣಿ ಸಂಖ್ಯೆಗಳು

|
Google Oneindia Kannada News

ಬೆಂಗಳೂರು, ಜುಲೈ 14 : ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕು ಹರಡುವಿಕೆ ತಡೆಯಲು ಕರ್ನಾಟಕ ಸರ್ಕಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿಯಿಂದ ಒಂದು ವಾರದ ಲಾಕ್ ಡೌನ್ ಜಾರಿಗೊಳಿಸಲಿದೆ.

ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಬೆಡ್ ವ್ಯವಸ್ಥೆ ಸಿಗುತ್ತಿಲ್ಲ ಎಂಬ ಆರೋಪಗಳಿವೆ. ಮತ್ತೊಂದು ಕಡೆ ಇತರ ವೈದ್ಯಕೀಯ ತುರ್ತುಗಳು ಇದ್ದಾಗ ಯಾರಿಗೆ ಕರೆ ಮಾಡಬೇಕು ಎಂಬ ಗೊಂದಲಗಳು ಇವೆ. ಬಿಬಿಎಂಪಿ ಜನರಿಗೆ ನೆರವಾಗಲು ಸಹಾಯವಾಣಿಗಳನ್ನು ಸ್ಥಾಪನೆ ಮಾಡಿದೆ.

ಬೆಂಗಳೂರು ಲಾಕ್ ಡೌನ್; ಮಾರ್ಗಸೂಚಿ ಪ್ರಕಟ ಬೆಂಗಳೂರು ಲಾಕ್ ಡೌನ್; ಮಾರ್ಗಸೂಚಿ ಪ್ರಕಟ

ಕೋವಿಡ್ -19 ಅಥವ ಇತರೆ ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಜನರು ಸಹಾಯವನ್ನು ಪಡೆಯಬಹುದಾಗಿದೆ. ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಸಹಾಯವಾಣಿ ಸಂಖ್ಯೆಗಳನ್ನು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ಲಾಕ್ ಡೌನ್; ಅಂಗಡಿಗಳಿಗೆ ಮಾರ್ಗಸೂಚಿಗಳು ಬೆಂಗಳೂರು ಲಾಕ್ ಡೌನ್; ಅಂಗಡಿಗಳಿಗೆ ಮಾರ್ಗಸೂಚಿಗಳು

Helpline For COVID 19 Or Other Health Emergencies In Bengaluru

ಸಹಾಯವಾಣಿ ಸಂಖ್ಯೆಗಳು

* ಆಪ್ತಮಿತ್ರ (14410) : ಕೇವಲ ಕೋವಿಡ್ - 19 ಸಹಾಯವಾಣಿ, ಟೆಲಿಮೆಡಿಸಿನ್ ಮತ್ತು ಆಸ್ಪತ್ರೆಗೆ ಉಲ್ಲೇಖಿಸುವುದು.

* ಅಂಬ್ಯುಲೆನ್ಸ್ (108) : ಕೋವಿಡ್ - 19 ಸೇರಿದಂತೆ ಎಲ್ಲಾ ಆರೋಗ್ಯ ತುರ್ತು ಸೇವೆಗಳು

* ಸಹಾಯ ಪಡೆಯಿರಿ (1912) : ಕೋವಿಡ್ - 19ಗಾಗಿ ಆಸ್ಪತ್ರೆ ಪ್ರವೇಶ ನಿರಾಕರಣೆಗೆ ಸಂಬಂಧಿಸಿದಂತೆ ಕುಂದುಕೊರತೆಗಳಿಗಾಗಿ

ಕೋವಿಡ್ ಭೀತಿ; ಬೆಂಗಳೂರಲ್ಲಿ ಲಭ್ಯವಿರುವ ಅಂಬ್ಯುಲೆನ್ಸ್‌ಗಳ ಲೆಕ್ಕ ಕೋವಿಡ್ ಭೀತಿ; ಬೆಂಗಳೂರಲ್ಲಿ ಲಭ್ಯವಿರುವ ಅಂಬ್ಯುಲೆನ್ಸ್‌ಗಳ ಲೆಕ್ಕ

* ಸಹಾಯವಾಣಿ (104) : ಎಲ್ಲಾ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಮಾಹಿತಿಗಾಗಿ

ಬೆಂಗಳೂರು ನಗರದಲ್ಲಿ ಕೋವಿಡ್ - 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸೋಮವಾರ ನಗರದಲ್ಲಿ 1,315 ಹೊಸ ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 19,702ಕ್ಕೆ ಏರಿಕೆಯಾಗಿದೆ.

English summary
Here are the helpline numbers in Bengaluru for COVID 19 and other health emergencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X