ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಪ್ರತಿ ಆಸ್ಪತ್ರೆಯಲ್ಲಿ ಕೋವಿಡ್ ಸಹಾಯ ಕೇಂದ್ರ

|
Google Oneindia Kannada News

ಬೆಂಗಳೂರು, ಆಗಸ್ಟ್ 04 : ಬೆಂಗಳೂರಿನ ಪ್ರತಿ ಆಸ್ಪತ್ರೆಯಲ್ಲಿ ಸಹಾಯ ಕೇಂದ್ರವನ್ನು ತೆರೆಯಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಹೇಳಿದ್ದಾರೆ. ಈ ಕೇಂದ್ರದ ಮೂಲಕ ಕೋವಿಡ್ ರೋಗಿಗಳ ಜೊತೆ ಸಂಬಂಧಿಕರು ಸಂವಹನ ನಡೆಸಬಹುದು.

Recommended Video

ಒಂದು ದಿನ ಮುಂಚಿತವಾಗಿಯೇ ಅಯೋಧ್ಯೆಗೆ ಭೇಟಿ ಕೊಟ್ಟ ಯೋಗಿ | Oneindia Kannada

ಮಂಗಳವಾರ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಆಯುಕ್ತರು ಮಾಹಿತಿ ನೀಡಿದ್ದಾರೆ. "ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರ ಜೊತೆ ಬಂಧುಗಳು ನೇರವಾಗಿ ಮಾತನಾಡುವುದಕ್ಕೆ ಸದ್ಯ ಅವಕಾಶವಿಲ್ಲ" ಎಂದರು.

ಬೆಂಗಳೂರು; ಪ್ಯಾರಾ ಮೆಡಿಕಲ್ ಹುದ್ದೆಗೆ ನೇರ ಸಂದರ್ಶನ ಬೆಂಗಳೂರು; ಪ್ಯಾರಾ ಮೆಡಿಕಲ್ ಹುದ್ದೆಗೆ ನೇರ ಸಂದರ್ಶನ

"ಪ್ರತಿ ಆಸ್ಪತ್ರೆಯಲ್ಲಿ ಸಹಾಯ ಕೇಂದ್ರವನ್ನು ಆರಂಭಿಸಲಾಗುತ್ತದೆ. ಸಹಾಯ ಕೇಂದ್ರಕ್ಕೆ ಬರುವ ರೋಗಿಗಳ ಜೊತೆ ದೂರವಾಣಿ ಮೂಲಕ ಬಂಧುಗಳು ಮಾತನಾಡಲು ಅವಕಾಶ ಸಿಗಲಿದೆ. ಈ ಕೇಂದ್ರದಲ್ಲಿ ಮೂವರು ಸಿಬ್ಬಂದಿಗಳು ಇರಲಿದ್ದು, 24 ಗಂಟೆ ಕಾರ್ಯ ನಿರ್ವಹಣೆ ಮಾಡಲಿದೆ" ಎಂದು ಆಯುಕ್ತರು ಹೇಳಿದರು.

ಕೊರೊನಾವೈರಸ್ ಬಗ್ಗೆ ಡೋಂಟ್ ಕೇರ್ ಎನ್ನುತ್ತಿದೆಯಾ ಬಿಬಿಎಂಪಿ? ಕೊರೊನಾವೈರಸ್ ಬಗ್ಗೆ ಡೋಂಟ್ ಕೇರ್ ಎನ್ನುತ್ತಿದೆಯಾ ಬಿಬಿಎಂಪಿ?

Help Desk In Each Hospital Of Bengaluru Says BBMP Commissioner

ಈ ಸಹಾಯ ಕೇಂದ್ರಗಳು ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲು, ಗುಣಮುಖರಾಗುವ ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗಲು, ರೋಗಿಗಳು ಸಾವನ್ನಪ್ಪಿದರೆ ಮೃತದೇಹ ಹಸ್ತಾಂತರ ಮಾಡಲು ಈ ಕೇಂದ್ರ ಸಹಾಯ ಮಾಡಲಿದೆ.

ಚಿತ್ರಗಳು; ಕಚೇರಿಯನ್ನು ಕೋವಿಡ್ ಆಸ್ಪತ್ರೆ ಮಾಡಿದ ಉದ್ಯಮಿ ಚಿತ್ರಗಳು; ಕಚೇರಿಯನ್ನು ಕೋವಿಡ್ ಆಸ್ಪತ್ರೆ ಮಾಡಿದ ಉದ್ಯಮಿ

ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಈ ಕೇಂದ್ರಗಳಲ್ಲಿ ಸರ್ಕಾರ ಚಿಕಿತ್ಸೆಗೆ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡಿದರೆ ದೂರನ್ನು ಸಹ ನೀಡಬಹುದಾಗಿದೆ.

English summary
BBMP Commissioner Manjunath Prasad said that help desk will be set in all hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X