ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಚ್ಚಿನಿಂದ ಬೀಳುತ್ತಿದ್ದ ಏಟು ತಡೆದು ಪ್ರಾಣ ಉಳಿಸಿದ ಹೆಲ್ಮೆಟ್

|
Google Oneindia Kannada News

ಬೆಂಗಳೂರು, ಫೆಬ್ರವರಿ 1: ವ್ಯಕ್ತಿಯ ಮೇಲೆ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ 4.50 ರೂ ಹಾಗೂ ಲ್ಯಾಪ್‌ಟಾಪ್‌ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಸಾದಹಳ್ಳಿ ಸಮೀಪದ ಜಡೆ ಗಾರ್ಡನ್ ಮುಂಭಾಗ ಈ ಘಟನೆ ನಡೆದಿದ್ದು, ಆನ್‌ಲೈನ್ ಮೂಲಕ ಹಣ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ದಾಳಿ ವೇಳೆ ದುಷ್ಕರ್ಮಿಯೊಬ್ಬ ಬೀಸಿದ ಲಾಂಗ್‌ ಏಟು ವ್ಯಕ್ತಿಯ ಹೆಲ್ಮೆಟ್‌ಗೆ ತಗುಲಿ ಅದೃಷ್ಟವಶಾತ್‌ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಕುರಿತು ಜಯರಾಮ ಎಂಬುವವರು ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ವಿಮಾನ ನಿಲ್ದಾಣ ಠಾಣೆ ಪೊಲೀಸರು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಯಮ ಬರ್ತಾನೆ, ನಿಮ್ಮ ಬೈಕ್‌ ಹಿಂದೆ ಕೂರ್ತಾನೆ, ಹೆಲ್ಮೆಟ್‌ ಹಾಕ್ತೀರಾ ಇಲ್ವಾ? ಯಮ ಬರ್ತಾನೆ, ನಿಮ್ಮ ಬೈಕ್‌ ಹಿಂದೆ ಕೂರ್ತಾನೆ, ಹೆಲ್ಮೆಟ್‌ ಹಾಕ್ತೀರಾ ಇಲ್ವಾ?

ಶ್ರೀನಿವಾಸಪುರದ ನಿವಾಸಿ ಜಯರಾಮ, ಸಾದಹಳ್ಳಿಯಲ್ಲಿ 'ಸ್ಮಾರ್ಟ್‌ ಬ್ಯಾಂಕ್‌' ಹೆಸರಿನ ಮಳಿಗೆಯಲ್ಲಿ ಆನ್‌ಲೈನ್‌ ಹಣ ವರ್ಗಾವಣೆ ವ್ಯವಹಾರ ನಡೆಸುತ್ತಿದ್ದಾರೆ. ವ್ಯವಹಾರದಲ್ಲಿ ಸಂಗ್ರಹವಾದ 4.50 ಲಕ್ಷ ರೂ.ಗಳನ್ನು ಬ್ಯಾಗ್‌ನಲ್ಲಿ ಇರಿಸಿಕೊಂಡು ರಾತ್ರಿ 8.20ರ ಸುಮಾರಿಗೆ ಮಳಿಗೆಯಲ್ಲಿ ಕೆಲಸ ಮಾಡುವ ನರಸಿಂಹಮೂರ್ತಿ ಜತೆ ಬೈಕ್‌ನಲ್ಲಿ ಊರಿಗೆ ತೆರಳುತ್ತಿದ್ದರು.

Helmet saves mans head from the miscreants

ಮಾರ್ಗ ಮಧ್ಯೆ ಜಡೆ ಗಾರ್ಡ್‌ನ್‌ ಮುಂಭಾಗದ ಸರ್ವಿಸ್‌ ರಸ್ತೆಯಲ್ಲಿ ಹೋಗುತ್ತಿದ್ದಾಗ ಸ್ವಿಫ್ಟ್ ಕಾರೊಂದು ಬೈಕ್‌ ಡಿಕ್ಕಿ ಹೊಡೆದಿದೆ. ಪರಿಣಾಮ ಜಯರಾಮ ಹಾಗೂ ನರಸಿಂಹಮೂರ್ತಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಕಾರಿನಿಂದ ಇಳಿದ ಒಬ್ಟಾತ, ಲಾಂಗ್‌ ತೆಗೆದು ಇಬ್ಬರ ಮೇಲೂ ಬೀಸಲು ಮುಂದಾಗಿದ್ದಾನೆ.

ಇದನ್ನು ನೋಡಿದ ನರಸಿಂಹಮೂರ್ತಿ ಪ್ರಾಣಭಯದಿಂದ ಓಡಿಹೋಗಿದ್ದಾರೆ. ಆದರೆ ಏಟು ಹೆಲ್ಮೆಟ್ ಮೇಲೆ ಬಿದ್ದಿದ್ದರಿಂದ ಯಾವುದೇ ಪ್ರಾಣಾಪಾಯ ಆಗಿಲ್ಲ.

English summary
Miscreants attack on person for financial issues but helmet saved his life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X