ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಸ್ಐ ಹೆಲ್ಮೆಟ್ ತಪಾಸಣೆ ಆದೇಶ ತಾತ್ಕಾಲಿಕವಾಗಿ ಹಿಂದಕ್ಕೆ

|
Google Oneindia Kannada News

ಬೆಂಗಳೂರು, ಜನವರಿ 27 : ಐಎಸ್ ಐ ಮಾರ್ಕ್ ಹೊಂದಿರದ ಹೆಲ್ಮೆಟ್ ಧರಿಸಿದರೆ ಫೆ.೧ರಿಂದ ೧೦೦ ರೂ ದಂಡ ನೀಡುವುದಾಗಿ ಬೆಂಗಳೂರು ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದರು. ಆದರೆ ಈ ಆದೇಶವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ.

ಗುಣಮಟ್ಟವಲ್ಲದ ಹೆಲ್ಮೆಟ್ ಧರಿಸಿದರೆ ಫೆ1 ರಿಂದ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದರು. ಐಎಸ್ ಐ ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸಿದರೂ ಸದ್ಯಕ್ಕೆ ದಂಡ ವಿಧಿಸುವುದಿಲ್ಲ.

ISI ಗುರುತಿನ ಹೆಲ್ಮೆಟ್ ಧರಿಸದಿದ್ದಲ್ಲಿ ವಿಮೆ ಹಣ ಸಿಗದುISI ಗುರುತಿನ ಹೆಲ್ಮೆಟ್ ಧರಿಸದಿದ್ದಲ್ಲಿ ವಿಮೆ ಹಣ ಸಿಗದು

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಐಎಸ್ ಐ ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸುವ ವಾಹನ ಸವಾರರ ವಿರುದ್ಧ ಫೆ. 1 ರಿಂದ 100 ರೂ. ದಂಡ ವಿಧಿಸುವ ಉದ್ದೇಶಿತ ಕಾರ್ಯಾಚರಣೆಯನ್ನು ನಡೆಸದಿರಲು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ.

Helmet row: Traffic police withdraws order

ಗುಣಮಟ್ಟ ಪರಿಶೀಲನೆ ಮಾಡುವುದು ಕಷ್ಟ ಎಂಬ ಕಾರಣಕ್ಕೆ ಹೆಲ್ಮೆಟ್ ತಪಾಸಣೆಯನ್ನು ಕೈಬಿಡಲಾಗಿದೆ. ಹೀಗಾಗಿ ಫೆ.1 ರ ಬಳಿಕ ದ್ವಿಚಕ್ರ ವಾಹನ ಸವಾರರು ಕಳಪೆ ಹೆಲ್ಮೆಟ್ ಗೆ ದಂಡ ಕಟ್ಟಬೇಕಾಗಿಲ್ಲ. ಆದರೆ ಸುರಕ್ಷತೆ ದೃಷ್ಟಿಯಿಂದ ಗುಣಮಟ್ಟದ ಹೆಲ್ಮೆಟ್ ಧರಿಸುವುದು ಉತ್ತಮ ಎಂದು ಟ್ರಾಫಿಕ್ ಪೊಲೀಸರು ಸಲಹೆ ನೀಡಿದ್ದಾರೆ.

ಗುಣಮಟ್ಟದ ಮಾನದಂಡ ಅಳೆಯುವುದು ಕಷ್ಟ: ಹೆಲ್ಮೆಟ್ ಗಳು ಬಿಐಎಸ್ ನಿಗದಿ ಪಡಿಸಿರುವ ಗುಣಮಟ್ಟವನ್ನು ಹೊಂದಿವೆಯೇ, ಇಲ್ಲವೇ ಎಂಬುದನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಎಂದು ಬಿಐಎಸ್ ಸ್ಪಷ್ಟವಾಗಿ ತಿಳಿಸಿದೆ. ಹೀಗಾಗಿ, ಆ ಕುರಿತು ನಿರ್ದಿಷ್ಟ ಮಾರ್ಗಸೂಚಿ ಇಲ್ಲದ ಕಾರಣ ದಂಡ ವಿಧಿಸಲು ಆಗುವುದಿಲ್ಲ.

ಕಡ್ಡಾಯವಾಗಿ ISI ಗುರುತಿನ ಹೆಲ್ಮೆಟ್ ಧರಿಸುವಂತೆ ನಿಯಮಕಡ್ಡಾಯವಾಗಿ ISI ಗುರುತಿನ ಹೆಲ್ಮೆಟ್ ಧರಿಸುವಂತೆ ನಿಯಮ

ಹೀಗಾಗಿ ಕಾರ್ಯಾಚರಣೆ ಯೋಜನೆ ಕೈಬಿಟ್ಟಿದ್ದೇವೆ ಎಂದಿನಂತೆ ಜಾಗೃತಿ ಮುಂದುವರೆಯಲಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ತಿಳಿಸಿದ್ದಾರೆ. ವಿದೇಶಿ ಹೆಲ್ಮೆಟ್ ಗಳ ಕುರಿತಾಗಿಯೂ ಗೊಂದಲವಿದೆ. ಸಾರಿಗೆ ಇಲಾಖೆಗೆ ಬರೆದ ಪತ್ರಕ್ಕೆ ಇದುವರೆಗೂ ಪ್ರತಿಕ್ರಿಯೆ ಬಂದಿಲ್ಲ. ಒಟ್ಟಾರೆಯಾಗಿ ಹೆಲ್ಮೆಟ್ ಗಳ ಗುಣಮಟ್ಟದ ಕುರಿತು ಯಾವುದೇ ಸ್ಪಷ್ಟತೆ ಇಲ್ಲದಿರುವುದರಿಂದ ನಾವು ಕಾರ್ಯಾಚರಣೆ ನಡೆಸುವುದನ್ನು ಕೈಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.

English summary
Traffic police have been withdrawn order of special drive on helmet without ISI (Indian Standards Institute) mentioning the department has no authenticity on the matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X