ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಲ್ಮೆಟ್ ಕಡ್ಡಾಯ ನಿಯಮಕ್ಕೆ ಬೆಂಗಳೂರು ಮೊದಲ ಚುಂಬನ

|
Google Oneindia Kannada News

ಬೆಂಗಳೂರು, ಜನವರಿ, 20: ಮಹಾನಗರ ವ್ಯಾಪ್ತಿಯಲ್ಲಿ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ. ಕಾನೂನು ಅಧಿಕೃತವಾಗಿ ಜಾರಿಗೆ ಬಂದಿದೆ. ಹೆಲ್ಮೆಟ್ ಇಲ್ಲದೇ ಸವಾರಿ ಮಾಡಿದರೆ ಬೆಂಗಳೂರು ಪೊಲೀಸರು ಮುಲಾಜಿಲ್ಲದೇ ದಂಡ ವಿಧಿಸುತ್ತಿದ್ದಾರೆ. ಈ ಬಗ್ಗೆ ಸಂಚಾರ ಆಯುಕ್ತ ಎಂ ಎ ಸಲೀಂ ಸಹ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಇದು ನಮಗೆಲ್ಲಾ ಮೇಲು ನೋಟಕ್ಕೆ ಗೊತ್ತಿರುವ ಸಂಗತಿ.

ಆದರೆ ನಿಜವಾಗಿ ಮೊದಲನೇ ದಿನವೇ ಯೋಜನೆ ಜಾರಿಯಲ್ಲಿದೆಯೇ? ಜನರು ಸಲೀಂ ಅವರು ಹೇಳಿದಂತೆ ಮುಕ್ತವಾಗಿ ಸ್ವೀಕರಿಸಿದ್ದಾರೆಯೇ? ಮುಂಬದಿ ಸವಾರ ಮತ್ತು ಹಿಂಬದಿ ಸವಾರ ಇಬ್ಬರೂ ಹೆಲ್ಮೆಟ್ ಹಾಕಿಕೊಂಡೆ ಸವಾರಿ ಮಾಡುತ್ತಿದ್ದಾರೆಯೇ? ಇದೆಲ್ಲದಕ್ಕೆ ಉತ್ತರ ಇಲ್ಲಿದೆ.[ನೀವು ಧರಿಸುವ ಹೆಲ್ಮೆಟ್ ಹೇಗಿರಬೇಕು?]

ಎಂ ಎ ಸಲೀಂ ಬೆಂಗಳೂರಿನ ಜನರು ಯೋಜನೆಯನ್ನು ಮುಕ್ತವಾಗಿ ಸ್ವೀಕರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಸಲೀಂ ಮಾತಿಗೆ ಜನ ಬೆಲೆ ನೀಡಿದಂತೆ ಕಾಣುತ್ತಿಲ್ಲ. ಶೇ. 95 ಕ್ಕೂ ಅಧಿಕ ಹಿಂಬದಿ ಸವಾರರು ಹೆಲ್ಮೆಟ್ ಇಲ್ಲದೆಯೇ ಓಡಾಡಿಕೊಂಡಿದ್ದದ್ದು ಕಣ್ಣಿಗೆ ಬಿತ್ತು. ಕೆಲವರು ಅದೇ ಹಳೇ ಚಾಳಿಯಂತೆ ಸರ್ಕಾರಕ್ಕೆ ಬೈದರು. ರಸ್ತೆ ಸರಿ ಇಲ್ಲ ಎಂದರು. ಕಾನೂನು ಮಾಡ್ತಾರೆ ಬಿಡಿ ಎಂಬ ತಿರಸ್ಕಾರದ ಮಾತುಗಳಿಗೂ ಕಡಿಮೆ ಇರಲಿಲ್ಲ.

ದಂಡ ಕಟ್ಟುತ್ತೇವೆ

ದಂಡ ಕಟ್ಟುತ್ತೇವೆ

ಹೆಲ್ಮೆಟ್ ಮುಂಬದಿ ಸವಾರರಿಗೆ ಒಕೆ. ಹಿಂಬದಿಗೆ ಕುಳಿತವಿರೂ ಹೆಲ್ಮೆಟ್ ಅಂದ್ರೆ ದಂಡ ಕಟ್ಟುತ್ತೇವೆ ಬಿಡಿ. ಇಲ್ಲಾ ಮನೆಗೆ ಇನ್ನೊಂದು ಗಾಡಿ ಖರೀದಿ ಮಾಡ್ತೆವೆ. ಇನ್ನೇನು ಮಾಡಲಿಕ್ಕಾಗುತ್ತೆ? - ಶಂಕರ ನಾರಾಯಣ, ಎನ್ ಆರ್ ಕಾಲೋನಿ

ಬಿಎಂಟಿಸಿ ಏರುತ್ತೇವೆ

ಬಿಎಂಟಿಸಿ ಏರುತ್ತೇವೆ

ಇಷ್ಟು ದಿನ ಕಚೇರಿಗೆ ಸ್ನೇಹಿತರ ಬೈಕ್ ನಲ್ಲಿ ಡ್ರಾಪ್ ತಗೋತಿದ್ದೆ. ಬೆಳಗ್ಗೆ ಹೋಗುವಾಗ ಬಸ್ ಗೆ ತೆರಳಿ ವಾಪಸ್ ಬರುವಾಗ ಬೈಕ್ ಗೆ ಬರುತ್ತಿದ್ದೆ. ಇನ್ನು ಮುಂದೆ ಎರಡು ಸಾರಿ ಬಿಎಂಟಿಸಿ ಏರುತ್ತೇನೆ. ಹೆಲ್ಮೆಟ್ ಇಟ್ಟುಕೊಂಡು ಒಡಾಡಲು ಸಾಧ್ಯವಿಲ್ಲ. ಗುರುರಾಜ್, ಕತ್ರಿಗುಪ್ಪೆ

ತನಿಖಾ ತಂಡಗಳಿವೆ

ತನಿಖಾ ತಂಡಗಳಿವೆ

ಸಾರಿಗೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ತಂಡಗಳನ್ನು ಮಾಡಿಕೊಂಡಿವೆ. ಪ್ರಮುಖ ತಾಣಗಳಲ್ಲಿ ನಿಂತು ಪರಿಶೀಲನೆ ನಡೆಸುತ್ತಿದ್ದೇವೆ. ಇನ್ನೊಂದು ವಾರದಲ್ಲಿ ಯೋಜನೆ ಸಮರ್ಪಕ ಅನುಷ್ಠಾನವಾಗಲಿದೆ. ಎಂ ಎ ಸಲೀಂ, ಪೊಲೀಸ್ ಆಯುಕ್ತರು

ಪೊಲೀಸರಿಗೆ ದುಡ್ಡು

ಪೊಲೀಸರಿಗೆ ದುಡ್ಡು

ಇಷ್ಟು ದಿನ ಅದಿಲ್ಲ ಇದಿಲ್ಲ ಎಂದು ಪೀಡಿಸುತ್ತಿದ್ದ ಪೊಲೀಸರಿಗೆ ಇದೊಂದು ಹೊಸ ನೆಪ ಸಿಕ್ಕಂತಾಯಿತು. ಪೊಲೀಸರಿಗೆ ಸರ್ಕಾರವೇ ಹೊಸ ದಾರಿ ಹೇಳಿಕೊಟ್ಟಂತಾಗಿದೆ.(ಹೆಸರು ಹೇಳಲ್ಲ ಅಂದ್ರು)

ಮುಂಬದಿ ಸವಾರರೇ ಹೆಲ್ಮೆಟ್ ಹಾಕಲ್ಲ

ಮುಂಬದಿ ಸವಾರರೇ ಹೆಲ್ಮೆಟ್ ಹಾಕಲ್ಲ

ಹಿಂಬದಿ ಸವಾರರು ಇರಲಿ, ಮೊದಲು ಮುಂಬದಿ ಸವಾರರು ಹೆಲ್ಮೆಟ್ ಹಾಕುವುದನ್ನು ರೂಢಿ ಮಾಡಿಕೊಳ್ಳಲಿ. ಕಾನೂನು ಏನೇ ಇರಲಿ ಅದು ಜನರ ಒಳಿತಿಗೆ ಇರುತ್ತದೆ. ಅದನ್ನು ಪಾಲನೆ ಮಾಡಬೇಕು- ನಾಗಶೇಖರ್, ಜಯನಗರ

ಕಾನೂನು ಪಾಲನೆ ಮಾಡಿದವರು

ಕಾನೂನು ಪಾಲನೆ ಮಾಡಿದವರು

ಸರ್ಕಾರದ ಕಾನೂನು ನಮ್ಮ ಒಳಿತಿಗೆ ಇದೆ. ನಾವು ಇನ್ನು ಮುಂದೆ ಇಬ್ಬರು ಹೆಲ್ಮೆಟ್ ಧರಿಸಿಯೇ ಕಚೇರಿಗೆ ತೆರಳುತ್ತೇವೆ ಎಂಬ ಸಂದೇಶ ನೀಡಿ ಹೆಲ್ಮೆಟ್ ಧರಿಸಿದ ಫೋಟೋವನ್ನು ಸಾಮಾಜಿಕ ತಾಣಕ್ಕೆ ಹಾಕಿದ ಬಗೆ.

English summary
Bengaluru traffic police and state's transport department have joined hands together to form a joint team to impose fine on two-wheeler riders as well as pillion riders, who violate the rules by not wearing helmets. MA Saleem, Additional Commissioner of Police (Traffic), told OneIndia that this time we are imposing fine on violators and they will have to pay the penalty of Rs 100 for breaking the rule for the first time, if the rule is violated for the second time, then penality will be Rs 300 fine and for the third time violation, the driving license of the rider will be impounded. But what is the real picture of Bengaluru?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X