• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಏರ್ ಪೋರ್ಟ್ To ಸಿಟಿ: ಬೆಂಗಳೂರಿಗರೇ ಬಸ್, ಟ್ಯಾಕ್ಸಿ ಬಿಟ್ ಹಾಕಿ ಹೆಲಿಕಾಪ್ಟರ್‌ನಲ್ಲಿ ಸಂಚರಿಸಿ!

|
Google Oneindia Kannada News

ಬೆಂಗಳೂರು, ಮೇ 13: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ಪ್ರಯಾಣಿಸಲು ಬರೋಬ್ಬರಿ ಒಂದೂವರೆಯಿಂದ ಎರಡು ಗಂಟೆ ಆಗುತ್ತದೆ. ಆದರೆ ಮುಂದಿನ ಜುಲೈ ತಿಂಗಳಿನಿಂದ ಈ ಅವಧಿ ತಗ್ಗುತ್ತದೆ.

"ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ನಿಂದ ಒಂದು ಕಿ.ಮೀಗಿಂತ ಕಡಿಮೆ ಅಂತರದ ದೂರದಲ್ಲಿರುವ ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಹಳೆ ಎಚ್‌ಎಎಲ್ ಏರ್‌ಪೋರ್ಟ್‌ಗೆ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಹೆಲಿಪೋರ್ಟ್‌ನ ಸೇವೆ ಒದಗಿಸುವುದಕ್ಕೆ ಬ್ಲೇಡ್ ಇಂಡಿಯಾ ಯೋಜನೆ ಹಾಕಿಕೊಂಡಿದೆ. ಒಂದು ಸೈಡ್ ಹೆಲಿಕಾಪ್ಟರ್ ಪ್ರಯಾಣಕ್ಕೆ 4000 ರೂಪಾಯಿ ದರವನ್ನು ನಿಗದಿ ಮಾಡಲಾಗಿದೆ," ಎಂದು ಕಂಪನಿಯ ವಾಣಿಜ್ಯ ನಿರ್ದೇಶಕ ಪಾಯಲ್ ಸತೀಶ್ ಹೇಳಿದ್ದಾರೆ.

ಕೆಂಪೇಗೌಡ ಏರ್‌ಪೋರ್ಟ್‌ಗೆ ಶೀಘ್ರವೇ ಓಡಲಿದೆ ಮೆಮು ರೈಲು ಕೆಂಪೇಗೌಡ ಏರ್‌ಪೋರ್ಟ್‌ಗೆ ಶೀಘ್ರವೇ ಓಡಲಿದೆ ಮೆಮು ರೈಲು

ಸುಮಾರು 3.5 ವರ್ಷಗಳ ಹಿಂದೆ ಥಂಬಿ ಏವಿಯೇಷನ್ ಈ ಸೇವೆಯನ್ನು ನಿಲ್ಲಿಸಿದಾಗ ಬೆಂಗಳೂರು ವಿಮಾನ ನಿಲ್ದಾಣದೊಂದಿಗೆ ಚಾಪರ್ ಸಂಪರ್ಕವನ್ನು ಕಳೆದುಕೊಂಡಿತ್ತು. ಆ ಹೆಲಿಕಾಪ್ಟರ್ ಸೇವೆ ಒದಗಿಸುವುದಕ್ಕೆ ಹಲವಾರು ರೀತಿಯ ಸಮಸ್ಯೆಗಳು ಎದುರಾಗಿದ್ದವು. ವಿಮಾನಗಳ ಚಲನೆಯಿಂದಾಗಿ ಚಾಪರ್ ಸಂಚಾರ ಮತ್ತು ನಿರ್ವಹಣೆಗೆ ಅಗತ್ಯ ಪ್ರೋತ್ಸಾಹ ಕೊರತೆ ಹಾಗೂ ಸಂಚಾರಕ್ಕಾಗಿ ದೀರ್ಘಕಾಲದ ವರೆಗೂ ಕಾಯಬೇಕಾದ ಪರಿಸ್ಥಿತಿಯಿತ್ತು ಎಂದು ಹೇಳಲಾಗುತ್ತದೆ.

ಬೆಂಗಳೂರು ಟು ಕೊಡಗಿಗೆ 16,000 ರೂ:

"ನಾವು ಪ್ರಸ್ತುತ ಬೆಂಗಳೂರಿನ ಜಕ್ಕೂರು ಏರೋಡ್ರೋಮ್‌ನಿಂದ ಕೊಡಗು ಅಥವಾ ಕಬಿನಿಗೆ ವಾರಕ್ಕೆ ಆರು ಬಾರಿ ಮರಳಿ ಬರುತ್ತೇವೆ. ಬೆಂಗಳೂರು ಮತ್ತು ಕೊಡಗು ನಡುವಿನ ಒಂದು ಬಾರಿ ಪ್ರಯಾಣಿಸುವುಕ್ಕೆ (ಒನ್ ಸೈಡ್) 16,000 ರೂಪಾಯಿ ನಿಗದಿಪಡಿಸಲಾಗುತ್ತಿದೆ. ನಮ್ಮ ಪ್ರಸ್ತಾವಿತ BLADE ವಿಮಾನ ನಿಲ್ದಾಣದ ಶಟಲ್ ಸೋಮವಾರದಿಂದ ಶುಕ್ರವಾರದವರೆಗೆ ವಾರಕ್ಕೆ ಐದು ದಿನಗಳು ಇರುತ್ತದೆ. ಇದು ಪ್ರಾರಂಭವಾದ ನಂತರ, ನಾವು ನಮ್ಮ ಹೆಲಿಕಾಪ್ಟರ್ ನೆಟ್‌ವರ್ಕ್‌ಗೆ ಮೈಸೂರನ್ನು ಸೇರಿಸುತ್ತೇವೆ. ಮೈಸೂರಿಗೆ ಪ್ರಯಾಣಿಸರು 12,00 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗುವುದು.

 Helicopter service between Kempegowda International Airport and Bengaluru from July

ನಾಲ್ಕು ಚಾಪರ್‌ಗಳನ್ನು ಬಳಸುತ್ತಿರುವ ಬ್ಲೇಡ್ ಇಂಡಿಯಾ:

ಬ್ಲೇಡ್ ಇಂಡಿಯಾ ಸಂಸ್ಥೆಯು ಪ್ರಸ್ತುತ ನಾಲ್ಕು ಚಾಪರ್‌ಗಳನ್ನು ಬಳಸುತ್ತಿದೆ. ಇದು ಮುಂಬೈ ಮತ್ತು ಪುಣೆ, ಅಂಬಿ ವ್ಯಾಲಿ, ಶಿಲ್ಲಿಮ್ ಮತ್ತು ಶಿರಡಿ ನಡುವೆ ಸಂಚಾರವನ್ನು ಹೊಂದಿದೆ. ಕಂಪನಿಯ US ಪಾಲುದಾರ, ಬ್ಲೇಡ್ US, ಡೌನ್‌ಟೌನ್ ಮ್ಯಾನ್‌ಹ್ಯಾಟನ್ ಮತ್ತು JFK ಏರ್‌ಪೋರ್ಟ್ ನಡುವೆ BLADE ಏರ್‌ಪೋರ್ಟ್ ಹೆಲಿಕಾಪ್ಟರ್ ಸೇವೆಯನ್ನು ವರ್ಷಗಳಿಂದ ನಿರ್ವಹಿಸುತ್ತಿದೆ. "ನಮ್ಮ ಬೆಂಗಳೂರು ಸೇವೆಯೊಂದಿಗೆ ನಾವು ಅದೇ ವಿಷಯವನ್ನು ಭಾರತಕ್ಕೆ ಪಡೆಯುತ್ತಿದ್ದೇವೆ" ಎಂದು ಸತೀಶ್ ಹೇಳಿದರು. "ನಾವು ವಿಮಾನದ ಸೀಟ್‌ನಂತೆ ಹೆಲಿಕಾಪ್ಟರ್‌ನಲ್ಲಿ ಆಸನವನ್ನು ಖರೀದಿಸುವ ಸ್ಥಳದಲ್ಲಿ ಫ್ಲೈ-ಬೈ-ದಿ ಸೀಟ್ ಸೇವೆಯನ್ನು ನೀಡುತ್ತೇವೆ. ನಾವು ಚಾರ್ಟರ್‌ಗಳನ್ನು ಸಹ ನೀಡುತ್ತೇವೆ" ಎಂದು ಪಾಯಲ್ ಸತೀಶ್ ಹೇಳಿದರು.

ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್:

ಬ್ಲೇಡ್ ಇಂಡಿಯಾ ಕಂಪನಿಯು ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್ (eVTOL) ವಿಮಾನಗಳನ್ನು ಭಾರತಕ್ಕೆ ತರಲು ಸಹ ಕೆಲಸ ಮಾಡುತ್ತಿದೆ. ಬ್ಲೇಡ್ ಇಂಡಿಯಾ ಎಂಡಿ ಮತ್ತು ಸಹ-ಸಂಸ್ಥಾಪಕ ಮತ್ತು ಅರ್ಬನ್ ಏರ್ ಮೊಬಿಲಿಟಿ ಟಾಸ್ಕ್ ಫೋರ್ಸ್‌ನ ಮುಖ್ಯಸ್ಥರಾಗಿರುವ ಅಮಿತ್ ದತ್ತಾ ಅವರು CII ಗಾಗಿ ವಿವರವಾದ ಅಧ್ಯಯನವನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. 2024 ರ ಆರಂಭದಲ್ಲಿ US ಮತ್ತು ಭಾರತದಲ್ಲಿ ಏಕಕಾಲದಲ್ಲಿ ಎಲೆಕ್ಟ್ರಿಕ್ ವರ್ಟಿಕಲ್ ಕ್ರಾಫ್ಟ್ ಅನ್ನು ಏಕಕಾಲದಲ್ಲಿ ಪ್ರಾರಂಭಿಸಲು BLADE ಅನ್ನು ಭಾರತ ಆಹ್ವಾನಿಸಿತು

"ಬ್ಲೇಡ್ ತಂಡವು ಜುಲೈನಲ್ಲಿ ಮತ್ತೆ ಇಲ್ಲಿಗೆ ಬರಲಿದೆ ಮತ್ತು ಅದೇ ರೀತಿ ಮಾಡಲು ನಾನು ಯುಎಸ್‌ನಲ್ಲಿರುವ ಇತರ ಎಲೆಕ್ಟ್ರಿಕ್ ವರ್ಟಿಕಲ್ ಕ್ರಾಫ್ಟ್ (ಇವಿಎ) ತಯಾರಕರೊಂದಿಗೆ ಮಾತನಾಡುತ್ತೇನೆ. ಅವರು ಇಲ್ಲಿನ ಹವಾಮಾನ ಪರಿಸ್ಥಿತಿಗಳು ಮತ್ತು ನಿಯಂತ್ರಕ ಚೌಕಟ್ಟನ್ನು ಪರಿಶೀಲಿಸುತ್ತಾರೆ" ಎಂದು ದತ್ತಾ ಹೇಳಿದರು.

   ಹಿರಿಯರಿಗೆ ರೆಸ್ಟ್,IPL ನಲ್ಲಿ ಶೈನ್ ಆದವ್ರಿಗೆ ಒಲಿಯಿತು ಅದೃಷ್ಟ | Oneindia Kannada
   English summary
   Helicopter service between Kempegowda International Airport and Bengaluru city from July, A one-way ticket for the helicopter ride will cost about Rs 4000.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X