ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಯ ನಾರಾಯಣಸ್ವಾಮಿ ಗೆದ್ದರೆ ಹೆಬ್ಬಾಳವನ್ನ ಹೀಗೆ ಮಾಡ್ತಾರಂತೆ

By Manjunatha
|
Google Oneindia Kannada News

Recommended Video

ಹೆಬ್ಬಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ವೈ ಎ.ನಾರಾಯಣಸ್ವಾಮಿ ಸಂದರ್ಶನ | Oneindia Kannada

ಬೆಂಗಳೂರು, ಮೇ 7: ಸ್ವಚ್ಛ ಸುಂದರ ಸುರಕ್ಷಿತ ಮತ್ತು ಸಾಂಸ್ಕøತಿಕ ಹೆಬ್ಬಾಳ ನನ್ನ ಕನಸು ಎಂದು ಹೆಬ್ಬಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ವೈ.ಎ.ನಾರಾಯಣಸ್ವಾಮಿ ಹೇಳಿದರು.

ಹೆಬ್ಬಾಳಕ್ಕಾಗಿ ಬಿಜೆಪಿ ವತಿಯಿಂದ ಹೊರತರಲಾಗಿರುವ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ, ತಳಮಟ್ಟದ ನೀರಿನ ಶೇಖರಣಾ ಘಟಕದ ಸ್ಥಾಪನೆ, ಮಳೆ ನೀರುಗಾಲುವೆಯ ನಿರ್ಮಾಣ, ಮಳೆ ನೀರುಗಾಲುವೆಯನ್ನು ಆಧುನಿಕ ರೀತಿಯಲ್ಲಿ ಮೇಲ್ಚಾವಣೆ ನಿರ್ಮಾಣ. ವೈಜ್ಞಾನಿಕ ರೀತಿಯಲ್ಲಿ ಮಳೆ ನೀರು ಕೊಯ್ಲು ಸಂಗ್ರಹಣೆಗೆ ಮಹತ್ವ ನೀಡುವ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆ ನಿಡಿದ್ದೇವೆ ಎಂದರು.

ಬಿಜೆಪಿ ಪ್ರಣಾಳಿಕೆ ಭಗವದ್ಗೀತೆ ಇದ್ದ ಹಾಗೆ : ಡಿ ವಿ ಸದಾನಂದಗೌಡ ಬಿಜೆಪಿ ಪ್ರಣಾಳಿಕೆ ಭಗವದ್ಗೀತೆ ಇದ್ದ ಹಾಗೆ : ಡಿ ವಿ ಸದಾನಂದಗೌಡ

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಜನರು ಕುಡಿಯುವ ನೀರು ಸಮರ್ಪಕವಾಗಿ ದೊರೆಯದೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದನ್ನು ಸರಿಪಡಿಸುವುದು ನಮ್ಮ ಮೂಲ ಉದ್ದೇಶವಾಗಿರಲಿದೆ ಎಂದ ಅವರು, ಕ್ಷೇತ್ರದಲ್ಲಿ ಅಗ್ನಿಶಾಮಕ ಠಾಣೆಯ ಸ್ಥಾಪನೆಯ ಉದ್ದೇಶವನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ ಎಂದರು.

2 ವರ್ಷ ಮಾತ್ರ ಶಾಸಕರಾಗಿದ್ದರು ನಾರಾಯಣಸ್ವಾಮಿ

2 ವರ್ಷ ಮಾತ್ರ ಶಾಸಕರಾಗಿದ್ದರು ನಾರಾಯಣಸ್ವಾಮಿ

2 ವರ್ಷಗಳಲ್ಲಿ ಹೆಚ್ಚಿನದನ್ನು ಸಾಧಿಸಲು ಯೋಜನೆಗಳನ್ನು ಹಮ್ಮಿಕೊಂಡಿದ್ದೇನೆ. ಇದರ ಅನುಷ್ಠಾನಕ್ಕೆ ಬೇಕಾದ ಎಲ್ಲಾ ರೀತಿಯ ಸಿದ್ದತೆಗಳು ಮಾಡಿಯಾಗಿದ್ದು, ಮುಂದಿನ ಅವಧಿಯಲ್ಲಿ ಕೆಲಸಗಳನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ಉಪಚುನಾವಣೆಯಲ್ಲಿ ಆಯ್ಕೆ ಆದ ವೈ.ಎ.ನಾರಾಯಣಸ್ವಾಮಿ ಅವರು ಎರಡು ವರ್ಷಗಳ ಕಾಲ ಮಾತ್ರವೇ ಹೆಬ್ಬಾಳದ ಶಾಸಕರಾಗಿದ್ದರು.

ಕೊನೆಗೂ ಬಿಜೆಪಿಗೆ ಮತ ಹಾಕಿ ಎಂದ ಎಸ್‌ಎಂ.ಕೃಷ್ಣ, ಹೆಬ್ಬಾಳದಲ್ಲಿ ಪ್ರಚಾರ ಕೊನೆಗೂ ಬಿಜೆಪಿಗೆ ಮತ ಹಾಕಿ ಎಂದ ಎಸ್‌ಎಂ.ಕೃಷ್ಣ, ಹೆಬ್ಬಾಳದಲ್ಲಿ ಪ್ರಚಾರ

ರೈಲ್ವೆ ಹಳಿಗೆ ತಂತಿಬೇಲಿ

ರೈಲ್ವೆ ಹಳಿಗೆ ತಂತಿಬೇಲಿ

ಹಸಿರು ಹೆಬ್ಬಾಳಕ್ಕಾಗಿ ಕಸ ಮುಕ್ತ ಹೆಬ್ಬಾಳವನ್ನು ನಿರ್ಮಿಸುವುದು, ರೈಲೆ ಹಳಿಗಳ ಸರಹದ್ದಿನಲ್ಲಿ ತಂತಿ ಬೇಲೆ ಅಳವಡಿಸಿ ಕಸ ಹಾಕದಂತೆ ಮಾಡುವುದು. ಪೌರಕಾರ್ಮಿಕರು ಪ್ರತಿದಿನ ನಿರ್ವಹಿಸುವ ಕಾರ್ಯದ ಬಗ್ಗೆ ಪ್ರತಿ ಮನೆಗಳಲ್ಲೂ ಟ್ರ್ಯಾಕಿಂಗ್ ಪುಸ್ತಕಗಳ ವ್ಯವಸ್ಥೆ. ಕಸದ ಸಮಸ್ಯೆಯನ್ನು ಬಗೆಹರಿಸುವ ದೃಷ್ಟಿಯಿಂದ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘಗಳ ಸ್ಥಾಪನೆ. ಅಲ್ಲದೆ ಪ್ರತಿ ಭಾನುವಾರ 500 ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.

ಪ್ರಣಾಳಿಕೆಯಲ್ಲಿ ಅನ್ನದಾತನಿಗೆ ಭಾರಿ ಫಸಲಿನ ಭರವಸೆ ನೀಡಿದ ಬಿಜೆಪಿ ಪ್ರಣಾಳಿಕೆಯಲ್ಲಿ ಅನ್ನದಾತನಿಗೆ ಭಾರಿ ಫಸಲಿನ ಭರವಸೆ ನೀಡಿದ ಬಿಜೆಪಿ

ಕ್ಷೇತ್ರದ ವಿವಿದೆಡೆ 300 ಸಿಸಿಟಿವಿ ಅಳವಡಿಕೆ

ಕ್ಷೇತ್ರದ ವಿವಿದೆಡೆ 300 ಸಿಸಿಟಿವಿ ಅಳವಡಿಕೆ

ಮಾದಕ ದ್ರವ್ಯಗಳ ಮಾರಾಟ, ವ್ಹೀಲಿಂಗ್ ಸೇರಿಂತೆ ಹಲವು ಅಪರಾದ ಚಟುವಟಿಕೆಗಳನ್ನು ತಡೆಗಟ್ಟುವುದು ನಮ್ಮ ಉದ್ದೇಶವಾಗಿದೆ ಎಂದರು. ಉತ್ತಮ ಹೆಬ್ಬಾಳಕ್ಕಾಗಿ ಮಾಲಿನ್ಯ ಮುಕ್ತ ಹೆಬ್ಬಾಳದ ನಿರ್ಮಾಣ, ಹೆಚ್ಚುವರಿ 300 ಸಿ.ಸಿ. ಟಿವಿಗಳ ಅಳವಡಿಕೆ. ಸಾರ್ವಜನಿಕರಿಗಾಗಿ ಪ್ರಮುಖ ರಸ್ತೆಗಳಲ್ಲಿ ಹೆಚ್ಚಿನ ವೈಫೈ ವಲಯಗಳ ಸ್ಥಾಪನೆಗೆ ಒತ್ತು ನೀಡುವುದಾಗಿ ಪ್ರಣಾಳಿಕೆಯಲ್ಲಿ ನಮೂದಾಗಿದೆ.

ಅಭಿವೃದ್ಧಿಗೆ ಒತ್ತು ನೀಡಿದ್ದೇನೆ

ಅಭಿವೃದ್ಧಿಗೆ ಒತ್ತು ನೀಡಿದ್ದೇನೆ

ಬಿ-ಪ್ಯಾಕ್ ಸಂಸ್ಥೆಯ ಸಮೀಕ್ಷೆಯಲ್ಲಿ ಎರಡೇ ವರ್ಷಗಳಲ್ಲಿ ಎರಡನೇ ಸ್ಥಾನವನ್ನು ಹೊಂದುವ ಮೂಲಕ ಅಭಿವೃದ್ದಿಗೆ ಒತ್ತು ನೀಡಿದ್ದೇನೆ. ಇದನ್ನು ಮುಂದುವರೆಸುವ ಮೂಲಕ ಬೆಂಗಳೂರಿನಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುವುದು ನಮ್ಮ ಗುರಿಯಾಗಿದೆ ಎಂದರು.

English summary
Hebbal BJP candidate released manifesto for Hebbal constituency. He said i already started the work i'll finish it if i elected. He said Green Hebbal and crime free Hebbal is his aim.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X