ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್‌ಪೋರ್ಟ್‌ ಫ್ಲೈಓವರ್ ಮೇಲೆ ವಾಹನಗಳ ನಿಷೇಧ?

|
Google Oneindia Kannada News

ಬೆಂಗಳೂರು, ಜೂನ್ 4: ಏರ್‌ಪೋರ್ಟ್ ಫ್ಲೈಓವರ್ ಮೇಲೆ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿಷೇಧಿಸುವ ಕುರಿತು ಚರ್ಚೆ ನಡೆಯುತ್ತಿದೆ.

ಹೆದ್ದಾರಿ ಪ್ರಾಧಿಕಾರ, ಸಂಘಟನೆಗಳ ಜೊತೆ ಚರ್ಚೆ ನಡೆಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತಿದೆ. ಅಪಘಾತಗಳ ನಿಯಂತ್ರಣಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ.

ಜಯದೇವ ಮೇಲ್ಸೇತುವೆ ತೆರವು ಕಾರ್ಯ ಸದ್ಯಕ್ಕಿಲ್ಲ, ಕಾರಣಗಳು ಇಲ್ಲಿವೆ ಜಯದೇವ ಮೇಲ್ಸೇತುವೆ ತೆರವು ಕಾರ್ಯ ಸದ್ಯಕ್ಕಿಲ್ಲ, ಕಾರಣಗಳು ಇಲ್ಲಿವೆ

ಫ್ಲೈಓವರ್ ಮೇಲೆ ಲಾರಿ ಹಾಗೂ ಲಘು ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿಷೇಧಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಫ್ಲೈಓವರ್ ಮೇಲೆ ದಿನನಿತ್ಯ ಅಪಘಾತಗಳು ಸಂಭವಿಸುತ್ತಲೇ ಇದೆ. ನಿಧಾನಗತಿಯಲ್ಲಿ ಸಾಗುವ ಮತ್ತು ಪಥ ಶಿಸ್ತು ಪಾಲಿಸದೆ ಅಡ್ಡಾದಿಡ್ಡಿಯಾಗಿ ಚಲಿಸುವ ಸರಕು ವಾಹನಗಳು ಅಪಘಾತಗಳಿಗೆ ಕಾರಣವಾಗುತ್ತವೆ ಎನ್ನಲಾಗಿದೆ.

Heavy Vehicle ban on Airport flyover?

ಫ್ಲೈಓವರ್ ಮೇಲೆ ಎಲ್ಲಾ ಮಾದರಿಯ ವಾಹನಗಳಿಗೆ 80 ಕಿ.ಮೀ ವೇಗಮಿತಿ ಇದೆ. ನಿಧಾನಗತಿಯ, ಸರಕು ವಾಹನಗಳು ರಸ್ತೆಯ ಎಡ ಭಾಗದಲ್ಲೇ ಸಂಚರಿಸಬೇಕು ಆದರೆ ಸಾಕಷ್ಟು ವಾಹನಗಳು ಶಿಸ್ತು ಪಾಲಿಸದಿರುವುದು ಗಮನಕ್ಕೆ ಬಂದಿದೆ.

ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ

ಗಂಭೀರ ಸ್ವರೂಪದ ಅಪಘಾತಗಳು ರಾತ್ರಿ ಹೊತ್ತಿನಲ್ಲಿ ಸಂಭವಿಸುತ್ತವೆ. ಕಾರು, ಬಸ್ ಮುಂಗಾತ ಲಘು ವಾಹನಗಳು ವೇಗವಾಗಿ ಸಂಚರಿಸುವ ಕಾರಣ ರಾತ್ರಿ ವೇಳೆ ಸೂಕ್ತ ಪ್ರತಿಫಲನ ಲೈಟ್ ಇಲ್ಲದೆ ಲಾರಿಗಳು ಕಾಣಿಸುವುದಿಲ್ಲ, ಹೀಗಾಗಿ ಅಂತಹ ವಾಹನಗಳಿಗೆ ವೇಗದ ವಾಹನಗಳು ಡಿಕ್ಕಿ ಹೊಡೆಯುತ್ತವೆ.

English summary
Police decided to ban on truck and heavy vehicles on Airport Flyover.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X