ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಭಾರಿ ಮಳೆ: ಮನೆಗಳಿಗೆ ನುಗ್ಗಿದ ನೀರು, ತುಂಬಿ ಹರಿದ ಕಾಲುವೆಗಳು

|
Google Oneindia Kannada News

ಬೆಂಗಳೂರು, ಮೇ 18: ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ ಜನ ತತ್ತರಿಸಿ ಹೋಗಿದ್ದಾರೆ. ಬೆಂಗಳೂರಿನಲ್ಲಿ ಮಳೆ ಬರುವ ನಿರೀಕ್ಷೆಗಳು ಇತ್ತಾದರು ಅತಿ ಹೆಚ್ಚು ಮಳೆಯಾಗುತ್ತೆ ಎಂದುಕೊಂಡಿರಲಿಲ್ಲ. ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು , ಮರಗಳು ಬಿದ್ದಿರುವ ವರದಿಯಾಗಿದೆ. ಮಳೆ ಮತ್ತು ಬಿಬಿಎಂಪಿಗೆ ಜನ ಹಿಡಿಶಾಪ ಹಾಕುವಂತಾಗಿದೆ

ವರ್ಷಧಾರೆಗೆ ಏನೇನು ತೊಂದರೆಯಾಗಿದೆ:

ಹೊಸಕೆರೆಹಳ್ಳಿ, HSR ಲೇಔಟ್, HBR ಲೇಔಟ್, ಮಂಗಮ್ಮನ ಪಾಳ್ಯ, ಹೊಂಗಸಂದ್ರ, ಮಲ್ಲೇಶ್ವರಂ ದತ್ತಾತ್ರೆಯಾ ನಗರ, ವಿಜಯನ ನಗರ, ಮಾರೇನಹಳ್ಳಿ, ಹಲಸೂರು, ಡಾಲಸ್೯ ಕಾಲೋನಿ ಯಲ್ಲಿ ಅತಿ ಹೆಚ್ಚು ಮಳೆ ಅವಾಂತರದ ವಿಚಾರ ಬಿಬಿಎಂಪಿ ಕಂಟ್ರೊಲ್ ರೂಂ ಗೆ ತಲುಪಿದೆ.

ದತ್ತಾತ್ರೆಯ ನಗರದಲ್ಲಿ ಮನೆಯ ಗೋಡೆ ಕುಸಿತ

ರಾತ್ರಿ ಸುರಿದ ಧಾರಕಾರ ಮಳೆಗೆ ಹಲವು ಮನೆಗಳ ಗೋಡೆ ಕುಸಿತವಾಗಿದೆ. ದತ್ತಾತ್ರೆಯ ನಗರ ರಾಜಕಾಲುವೆ ಅಕ್ಕ ಪಕ್ಕ ಇರೋ ಮನೆಗಳ ಗೋಡೆ ಕುಸಿತವಾಗಿದ್ದು ಮಳೆಯ ಪ್ರವಾಹ ಜನಜೀವನವನ್ನು ಅಸ್ತವ್ಯಸ್ತ ಮಾಡಿದೆ.

Heavy rains in Bengaluru: effected erias details

ಮಲ್ಲೇಶ್ವರಂನಲ್ಲಿ ಎರಡು ಬೃಹತ್ ಮರಗಳು ಧರೆಗುರುಳಿವೆ

ಮಳೆಗೆ ಬೃಹತ್ ಗಾತ್ರದ ಮರಗಳು ಧರೆಗುರುಳಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಅದೇ ರೀತಿ ಮಲ್ಲೇಶ್ವರಂನ 18 ಕ್ರಾಸ್ ನಲ್ಲಿ ಎರಡು ಬೃಹತ್ ಗಾತ್ರದ ಮರಗಳು ನೆಲಕ್ಕುರುಳಿ ಜನರ ಸಂಚಾರಕ್ಕೆ ತೊಂದರೆಯಾಗಿದೆ. ಶಾಲೆಯ ಮುಂಭಾಗದಲ್ಲೆ ಮರ ಒಣಗಿದ್ದರೂ ಬಿಬಿಎಂಪಿ ಮರವನ್ನು ತೆರವು ಮಾಡಿರಲಿಲ್ಲ ಎನ್ನಲಾಗುತ್ತಿದೆ.

ಕೆರೆಯಂತಾದ ಆರ್ ಆರ್ ನಗರದ ಬಡಾವಣೆ

ಮಳೆಗೆ ಕೆರೆಯಂತಾದ ಆರ್ ಆರ್ ನಗರದ ಬಡಾವಣೆ ಐಡಿಯಲ್ ಹೋಮ್ಸ್ ಲೇಔಟ್ ಇನ್ನು ರಾಜಕಾಲುವೆ ಪಕ್ಕದಲ್ಲೇ ಇರುವ ಐಡಿಯಲ್‌ ಹೋಮ್ಸ್‌ ಬಡಾವಣೆಯಿಂದಾಗಿ ರಸ್ತೆಯ ಮೇಲೆ ಕೊಳಚೆ ನೀರು ಬಂದು ನಿಂತಿದೆ, ಕೆಲವು ಮನೆಗಳಿಗೂ ನೀರು ನುಗ್ಗಿದ್ದು ಮನೆಯಲ್ಲಿ ಜಾಗರಣೆ ಮಾಡಿ ನೀರನ್ನು ಹೊರ ಹಾಕಿದ್ದಾರೆ.

Heavy rains in Bengaluru: effected erias details

ಮಹದೇವಪುರದ ಗುರುರಾಜ ಲೇಔಟ್ ಮನೆಗಳಿಗೆ ಕೊಳಚೆ

ಮಹದೇವಪುರದಲ್ಲೂ ವರುಣನ ಅಬ್ಬರಕ್ಕೆ ನಲುಗಿದ ಜನ ಹೋಗಿದ್ದಾರೆ. ಮಹದೇವಪುರದ ಗುರುರಾಜ ಲೇಔಟ್ ಮನೆಗಳಿಗೆ ಕೊಳಚೆ ನೀರು ನುಗ್ಗಿ ಮನೆಯ ವಸ್ತುಗಳೆಲ್ಲಾ ಹಾಳಾಗಿದೆ.

ಹೊರಮಾವು ವಡ್ಡರಪಾಳ್ಯ ವಾಹನಗಳು ಮುಳುಗಡೆ

ಹೊರಮಾವು ವಡ್ಡರಪಾಳ್ಯದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದೆ, ನೆಲಮಹಡಿಯಲ್ಲಿ ಸಂಪೂರ್ಣವಾಗಿ ನೀರು ನಿಂತಿರೋ ಪರಿಣಾಮದಿಂದ ವಾಹನಗಳು ಜಲಾವೃತ್ತವಾಗಿದೆ.

Heavy rains in Bengaluru: effected erias details

ಬೆಂಗಳೂರಿನ ‌ಹಲವು ಪ್ರದೇಶದಲ್ಲಿ ಭಾರೀ ಮಳೆ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ

ವಿದ್ಯಾಪೀಠ 113 mm ಮಳೆ

ಸಂಪಂಗಿರಾಮನಗರ 100.3 mm ಮಳೆ

ನಾಗಪುರ 100 mm ಮಳೆ

ಅಗ್ರಹಾರ ದಾಸರಹಳ್ಳಿ 97.5 mm ಮಳೆ

ಹಂಪಿ ನಗರ 93.5 mm ಮಳೆ

ರಾಜಮಹಲ್ ಗುಟ್ಟಹಳ್ಳಿ 95 mm ಮಳೆ

ದಯಾನಂದ ನಗರ 82 mm ಮಳೆ

Heavy rains in Bengaluru: effected erias details

ಬೆಂಗಳೂರಿನಲ್ಲಿ ಸುರಿದ ವರ್ಷದಾರೆ ರಾತ್ರಿ 9:45 ರ ವೇಳೆಗೆ ಒಟ್ಟಾರೆ ಬೆಂಗಳೂರಲ್ಲಿ 95 mm ಮಳೆಯಾಗಿದೆ ಎನ್ನಲಾಗಿದೆ. ಇನ್ನು ಹಲವು ಪ್ರದೇಶಗಳಲ್ಲಿ 100 mm ಗಿಂತ ಹೆಚ್ಚು ಮಳೆಯಾಗಿದೆ. ಕೇವಲ ಎರಡುಗಂಟೆಯಲ್ಲೇ 100 mm ಹೆಚ್ಚು ಮಳೆಯಾಗಿದೆ.

ಯೆಲ್ಲೋ ಅಲರ್ಟ್‌:

ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, , ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಮೇ 21ವರೆಗೂ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಗಿದೆ. ಇದರಿಂದಾಗಿ ಇನ್ನು ನಾಲ್ಕು ದಿಗಳು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆಯಾಗುವ ನಿರೀಕ್ಷೆಗಳಿದೆ. ರಾತ್ರಿ ಸುರಿದ ಮಳೆಗೆ ತತ್ತರಿಸಿರೋ ಜನ ಮತ್ತೆ ಹೆಚ್ಚು ಮಳೆಯಾದರೇ ಮತ್ತಷ್ಟು ತತ್ತರಿಸಿದ್ದಾರೆ. ಬಿಬಿಎಂಪಿ ಇನ್ನಾದರು ಎಚ್ಚೆತ್ತುಕೊಂಡು ಕೆಲಸವನ್ನು ಮಾಡಬೇಕಿದೆ.

Recommended Video

ಬೆಂಗಳೂರಲ್ಲಿ‌ ಮಹಾಮಳೆ:ಮನೆಗಳಿಗೆ ನುಗ್ಗಿದ‌ ನೀರು,ಜನಜೀವನ ಅಸ್ತವ್ಯಸ್ತ | Oneindia Kannada

English summary
Heavy rains in Bengaluru have caused trouble for the people. Here's a description of what's happening in Bangalore,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X