ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಗಸದಲ್ಲಿ ಕಾರ್ಮೋಡ: ಬೆಂಗ್ಳೂರಲ್ಲಿ ಬಂತು ಗಾಳಿ, ಗುಡುಗು ಸಹಿತ ಭಾರಿ ಮಳೆ

|
Google Oneindia Kannada News

ಬೆಂಗಳೂರು, ಮಾರ್ಚ್ 23: ಬೆಂಗಳೂರಲ್ಲಿ ಗಾಳಿ, ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ.

Recommended Video

IND vs SA Toss Delayed Due To Rain In Dharamsala | Virat kohli | Quinton De Cock | Oneindia Kannada

ಸಂಜೆ 4 ಗಂಟೆಗಾಗಲೇ ರಾತ್ರಿಯ ಅನುಭವವಾಗುತ್ತಿದೆ. ಕತ್ತಲೆ ಆವರಿಸಿದೆ. ಒಂದೆಡೆ ಕೊರೊನಾ ಭೀತಿಯಲ್ಲಿ ಮನೆಯಲ್ಲೇ ಕುಳಿತ ಕೆಲವರಿಗೆ ಖುಷಿ ತಂದರೂ ಇನ್ನೂ ಕೆಲವರಿಗೆ ಕೊರೊನಾ ವೈರಸ್ ಹೆಚ್ಚು ಮಾಡಿಬಿಡುತ್ತೇನೋ ಎಂಬ ಆತಂಕವೂ ಮುಂದುವರೆದಿದೆ.

ಮೈಸೂರಿನ ಹಲವೆಡೆ ಭಾರೀ ಮಳೆ; ಎಚ್.ಡಿ.ಕೋಟೆಯಲ್ಲಿ ನೆಲಕ್ಕುರುಳಿದ ಮರಮೈಸೂರಿನ ಹಲವೆಡೆ ಭಾರೀ ಮಳೆ; ಎಚ್.ಡಿ.ಕೋಟೆಯಲ್ಲಿ ನೆಲಕ್ಕುರುಳಿದ ಮರ

ಮುಂದಿನ 24 ಗಂಟೆಗಳಲ್ಲಿ ರಾಜ್ಯಾದ್ಯಂತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ಕೆಂಗೇರಿ, ಪದ್ಮನಾಭನಗರ, ಹೊಸಕೆರೆ ಹಳ್ಳಿ, ಜಯನಗರ, ಉತ್ತರಹಳ್ಳಿ, ಮೈಸೂರು ರಸ್ತೆ ಸೇರಿದಂತೆ ಹಲವೆಡೆ ಮಳೆಯಾಗಿದೆ.

Heavy Rains Accompanied By Wind And Thunderstorm In Bengaluru

ಮಳೆಯ ಜೊತೆಗೆ ಜೋರಾಗಿ ಗಾಳಿಯೂ ಬೀಸುತ್ತಿದೆ. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 38.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶಿವಮೊಗ್ಗದಲ್ಲಿ ಅತಿ ಕಡಿಮೆ ಅಂದರೆ 16.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಕೊಡಗಿನಲ್ಲಿ ಭಾನುವಾರವೂ ಮಳೆಯಾಗಿದೆ.

ದಕ್ಷಿಣ ಕನ್ನೆ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಹಾವೇರಿ, ಕಲಬುರಗಿ, ವಿಜಯಪುರ, ಬೆಂಗಳೂರು, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಕೋಲಾರ, ಶಿವಮೊಗ್ಗದಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

English summary
Heavy amounts of Rainfall occured In most part of the Bengaluru On Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X