ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲಿ ಭಾರೀ ಮಳೆ

By Ashwath
|
Google Oneindia Kannada News

ಬೆಂಗಳೂರು.ಮೇ. 7: ಮುಂದಿನ 24 ಗಂಟೆಗಳಲ್ಲಿ ರಾಜ್ಯದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

ತೀರ ಪ್ರದೇಶದಲ್ಲಿ 45-55 ಕಿ.ಮೀ ವೇಗದಲ್ಲಿ ಪ್ರಬಲವಾದ ಗಾಳಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಬೀಸಲಿದೆ. ಕರಾವಳಿ, ದಕ್ಷಿಣ ಒಳನಾಡಿನ ಘಟ್ಟ ಪ್ರದೇಶ, ಈ ಹಲವು ಕಡೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದ್ದು ಜನತೆ ಎಚ್ಚರದಲ್ಲಿರುವಂತೆ ಇಲಾಖೆ ಹೇಳಿದೆ.

ಕಳೆದ ವಾರದಿಂದಲೇ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣಕನ್ನಡದಲ್ಲಿ ಸಂಜೆ ಹೊತ್ತು ಭಾರೀ ಮಳೆಯಾಗುತ್ತಿದ್ದು ಮೂರು ದಿನಗಳ ಕಾಲ ಇದೇ ರೀತಿ ಹವಾಮಾನ ಮುಂದುವರೆಯಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತವಾರಣ ಇರಲಿದ್ದು, ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ.[ವಾಲ್ಮೀಕಿ ಯಾರು? ಪುಸ್ತಕದ ವಿರುದ್ಧ ಭುಗಿಲೆದ್ದ ಆಕ್ರೋಶ]

Heavy rain would occur
ಇಂದು ಸಹ ಹಲವೆಡೆ ಮಳೆಯಾಗಿದೆ. ಮಳೆಯ ಪ್ರಮಾಣ(ಸೆಂ.ಮೀ) ಇಲ್ಲಿ ನೀಡಲಾಗಿದೆ: ಕಾರ್ಕ‌ಳ (ಉಡುಪಿ)6; ಪುತ್ತೂರು (ದಕ್ಷಿಣ ಕನ್ನಡ) 5; ಉಪ್ಪಿನಂಗಡಿ (ದಕ್ಷಿಣ ಕನ್ನಡ), ಕಡೂರು (ಚಿಕ್ಕಮಗಳೂರು), ಸಿರಾ (ತುಮಕೂರು ) 4; ವಿಟ್ಲ (ದಕ್ಷಿಣ ಕನ್ನಡ), ಮಹದೇಶ್ವರ ಬೆಟ್ಟ (ಚಾಮರಾಜನಗರ), ಪಾವಗಡ (ತುಮಕೂರು), ಕನಕಪುರ (ರಾಮನಗರ) 3; ಧರ್ಮಸ್ಥಳ (ದಕ್ಷಿಣ ಕನ್ನಡ), ಕದ್ರ (ಉತ್ತರ ಕನ್ನಡ), ಭಾಗಮಂಡಲ (ಕೊಡಗು), ಕೊಪ್ಪ (ಚಿಕ್ಕಮಗಳೂರು), ಚಿಕ್ಕಮಗಳೂರು, ಚಾಮರಾಜನಗರದಲ್ಲಿ 2 ಸೆಂ.ಮೀ ಮಳೆಯಾಗಿದೆ.
English summary
Heavy rain would occur at isolated places over Coastal Karnataka & South Interior Karnataka during next 48 hours. Fisheries warning: Strong winds from Northerly to Northeasterly direction speed occasionally reaching 45-55 kmph likely along off Karnataka Coast during next 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X