ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಭಾರಿ ಮಳೆ; ಇನ್ನೂ ಒಂದು ವಾರ ಮಳೆ ಮುನ್ಸೂಚನೆ

|
Google Oneindia Kannada News

ಬೆಂಗಳೂರು, ಮೇ 26 : ಮುಂಗಾರು ಪೂರ್ವ ಮಳೆ ಬೆಂಗಳೂರಿನಲ್ಲಿ ಭಾರಿ ಅವಾಂತರ ಸೃಷ್ಟಿ ಮಾಡಿದೆ. ಮಂಗಳವಾರ ಸಂಜೆ ಗುಡುಗು ಸಹಿತ ಮಳೆಯಾಗಿದ್ದು, ಹಲವು ಬಡಾವಣೆಗಳಲ್ಲಿ ರಸ್ತೆ ಮುಳುಗಡೆಯಾಗಿದೆ. ಮರಗಳು ಧರೆಗುರುಳಿವೆ.

Recommended Video

ಎಚ್ಚರ..! ಬೆಂಗಳೂರಿನಲ್ಲಿ ಮೂರು ದಿನ ಸುರಿಯಲಿದೆ ಧಾರಾಕಾರ ಮಳೆ | Bengaluru Forecast Heavy Rain Expected

ಮಂಗಳವಾರ ಸಂಜೆ 5.45ರ ಸುಮಾರಿಗೆ ಬೆಂಗಳೂರು ನಗರದಲ್ಲಿ ಭಾರಿ ಗಾಳಿ, ಗುಡುಗು, ಸಿಡಿಲು ಆರಂಭವಾಯಿತು. ಬಳಿಕ ಮಳೆ ಸುರಿದ್ದಿದ್ದು, ಹಲವು ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡಿದರು.

ಮೇ 30ರವರೆಗೂ ಕರ್ನಾಟಕದಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ ಮೇ 30ರವರೆಗೂ ಕರ್ನಾಟಕದಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ಸುಮಾರು ಒಂದು ಗಂಟೆಗಳ ಕಾಲ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿಯಿತು. ಕೊಂಚ ಬಿಡುವು ನೀಡಿದ ಮಳೆ 8 ಗಂಟೆ ಸುಮಾರಿಗೆ ಮತ್ತೆ ಆರಂಭವಾಯಿತು. ಹಲವು ಬಡಾವಣೆಗಳಲ್ಲಿ ಮರಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಹವಾಮಾನ ಬದಲಾವಣೆಯಿಂದ ಕೊರೊನಾ ದೂರವಾಗದು, ಮತ್ತೇನು ಮಾಡಬೇಕು? ಹವಾಮಾನ ಬದಲಾವಣೆಯಿಂದ ಕೊರೊನಾ ದೂರವಾಗದು, ಮತ್ತೇನು ಮಾಡಬೇಕು?

Heavy Rain Strong Winds Lashed Bengaluru On May 26 Evening

ಜಯನಗರದಲ್ಲಿ ಹಲವು ಮರಗಳು ಧರೆಗೆ ಉರುಳಿವೆ. ಕಾರಿನ ಮೇಲೆ ಮರವೊಂದು ಬಿದ್ದಿದ್ದು ಕಾರು ಜಖಂಗೊಂಡಿದೆ. ಜೆ. ಪಿ. ನಗರದಲ್ಲಿ ಮರ ರಸ್ತೆಯ ಮೇಲೆ ವಾಲಿ ನಿಂತಿದೆ. ಜನರು ಓಡಾಡಲು ಆತಂಕ ಪಡುವಂತಾಗಿದೆ.

ಈ ಬಾರಿಯ ಮುಂಗಾರು ಹೇಗಿರುತ್ತೆ? ಹವಾಮಾನ ಇಲಾಖೆ ಹೇಳುವುದೇನು ಈ ಬಾರಿಯ ಮುಂಗಾರು ಹೇಗಿರುತ್ತೆ? ಹವಾಮಾನ ಇಲಾಖೆ ಹೇಳುವುದೇನು

ಮುಂಗಾರು ಪೂರ್ವ ಮಳೆ ಕರ್ನಾಟಕದಲ್ಲಿ ಚುರುಕಾಗಿದೆ. ಮುಂದಿನ ಒಂದು ವಾರಗಳ ಕಾಲ ಬೆಂಗಳೂರು, ಕರಾವಳಿ ಮತ್ತು ಮಲೆನಾಡಿನ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Heavy Rain Strong Winds Lashed Bengaluru On May 26 Evening

ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗಿದೆ. ಕರಾವಳಿಯಲ್ಲಿ ಮೂರು ದಿನ ಸಾಧಾರಣ ಮಳೆಯಾಗಲಿದ್ದು, ಬಳಿಕ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

'ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯೂ ಇದೆ. ಮೇಲ್ಮೈ ಸುಳಿಗಾಳಿ ವಾಯುಭಾರ ಕುಸಿತದ ಪ್ರಮಾಣವನ್ನು ಕಡಿಮೆ ಮಾಡುವ ಸಾಧ್ಯತೆ ಇದ್ದು, ಈ ಕುರಿತು ಎರಡು ದಿನದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ' ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಜಿ. ಎಸ್. ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ.

English summary
Heavy rain with strong winds lashed Bengaluru city on May 26, 2020 evening. India Meteorological Department (IMD) warned that rain will continue next one week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X