ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಅಲ್ಪ ಮಳೆಗೆ ಕರೆಯಂತಾದ ಬನ್ನೇರುಘಟ್ಟ ರಸ್ತೆ

|
Google Oneindia Kannada News

ಬೆಂಗಳೂರು ಆ.1: ಸಿಲಿಕಾನ್ ಸಿಟಿ ಎಂದು ಹೆಸರು ಪಡೆದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೆಲ ನಿಮಿಷಗಳು ಮಳೆ ಬಂದರೆ ಸಾಕು ರಸ್ತೆಗಳ ತುಂಬ ನೀರು ತುಂಬಿಕೊಳ್ಳುತ್ತದೆ. ಒಳಚರಂಡಿ ನೀರೆಲ್ಲ ಹೊರ ಬಂದು ಸಂಚಾರಕ್ಕೆ ಅಡ್ಡಿಯಾಗುತ್ತದೆ. ಈ ರೀತಿಯ ವಾತಾವರಣ ಭಾನುವಾರ ನಗರದ ಬನ್ನೇರುಘಟ್ಟ ರಸ್ತೆಯಲ್ಲಿ ಕಂಡು ಬಂದಿದೆ.

ಹೌದು, ಭಾನುವಾರ ಬೆಳಗ್ಗೆಯಿಂದ ವಿವಿಧ ಪ್ರದೇಶಗಳಲ್ಲಿ ಸಣ್ಣಗೆ ಮಳೆ ಆರಂಭವಾದರೆ, ಮಧ್ಯಾಹ್ನದ ನಂತರ ಹಲವು ಕಡೆಗಳಲ್ಲಿ ಕೆಲ ಹೊತ್ತು ಜೋರು ಮಳೆ ದಾಖಲಾಯಿತು. ಅಷ್ಟಕ್ಕೆ ಬನ್ನೇರುಘಟ್ಟ ರಸ್ತೆ ಸಂಪೂರ್ಣ ಜಲಾವೃತವಾಯಿತು. ರಸ್ತೆ ಭಾಗಶಃ ರಸ್ತೆ ಕೆಯಂತಾಗಿ ವಾಹನಗಳು, ಜನರ ನಿಂತಲ್ಲೇ ನಿಲ್ಲುವಂತಾಯಿತು.

ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷರುಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷರು

ಜನರು ಸಹ ಈ ಕುರಿತು ಆಕ್ರೋಶ ಹೊರಹಾಕಿದ್ದಾರೆ. "ಇದು ರಾಜ್ಯ ಸರ್ಕಾರ ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಕಂಡು ಕೊಳ್ಳುವ ಪರಿಹಾರವಾಗಿದೆ. ಬಿಜೆಪಿ ಇದೊಂದು 40ಪರ್ಸೆಂಟ್ ಸರ್ಕಾರವಾಗಿದ್ದು, ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಸರ್ಕಾರವಲ್ಲ" ಎಂದು ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ಟ್ವಿಟ್ ಮಾಡಿದ್ದಾರೆ.

ಟ್ವಟ್‌ನಲ್ಲಿ ಕವಿತಾ ರೆಡ್ಡಿ ಬನ್ನೇರುಘಟ್ಟ ರಸ್ತೆಯು ಅಲ್ಪ ಮಳೆಗೆ ಬಹುಕಾಲ ಜಲಾವೃತಗೊಂಡಿರುವ ವಿಡಿಯೋ ಪೋಸ್ಟ್ ಮಾಡಿ ಮುಖ್ಯಮಂತ್ರಿ, ಸಂಸದ ತೇಜಸ್ವಿ ಸೂರ್ಯ ಮತ್ತು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಟ್ಯಾಗ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಮಳೆ ನೀರು ಹರಿದು ಹೋಗಲು ಸುವ್ಯವಸ್ಥೆ ಇಲ್ಲ

ಮಳೆಗೆ ಬನ್ನೇರುಘಟ್ಟ ರಸ್ತೆಯಲ್ಲೇ ಕೆಲ ಗಂಟೆಗಳ ಕಾಲ ಮಳೆ ನೀರು ನಿಂತುಕೊಂಡಿದೆ. ಆ ಮಾರ್ಗದಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಒಂದು ಬದಿಯಲ್ಲಿ ಮಾತ್ರ ಜನರು ಸಂಚರಿಸಿದ್ದಾರೆ. ಬಿಬಿಎಂಪಿ ಇಲ್ಲಿನ ಒಂಚರಂಡಿ ಸ್ವಚ್ಛಗೊಳಿಸದಿರುವುದು ಬಿದ್ದ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡದ ಪರಿಣಾಮ ಮಳೆ ಬಂದಾಗ ಸಮಸ್ಯೆ ಉಂಟಾಗಿದೆ. ಕೆಲವು ಮನೆಗಳಿಗೂ ನೀರು ನುಗ್ಗಿದೆ. ಪ್ರತಿ ಭಾರೀ ಮಳೆ ಬಂದಾಗಲೂ ಸಾರಕ್ಕಿ, ಬನ್ನೇರುಘಟ್ಟ ರಸ್ತೆ, ಕುಮಾರಸ್ವಾಮಿ ಲೇಔಟ್, ಯಲಹಂಕ, ಯಲಚೇನಹಳ್ಳಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಚರಂಡಿ ನೀರು ಮಳೆ ಜತೆಗೆ ಮನೆಗಳಿಗೆ ನುಗ್ಗಿವೆ. ಜನ ಈ ನೀರಿನ ವಾಸನೆಗೆ ಬೇಸತ್ತಿದ್ದು, ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿದರು.

ಬಿಬಿಎಂಪಿ ವಿರುದ್ಧ ಜನರ ಆಕ್ರೋಶ

ಬಿಬಿಎಂಪಿ ವಿರುದ್ಧ ಜನರ ಆಕ್ರೋಶ

ನಗರದಲ್ಲಿಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಸಾಕಷ್ಟು ಮನೆಗಳಿಗೆ ಕೊಚ್ಚೆ ನೀರು ನುಗ್ಗಿದೆ. ಹಲವು ಮನೆಗಳಲ್ಲಿ ಜನರು ಹೊರಬರಲಾರೆದೆ, ಒಳಚರಂಡಿ ಬಂದ ನೀರು ಹೊರ ಹಾಕಲಾಗದೆ ಕಂಗಾಲಾಗಿದ್ದಾರೆ. ಮಳೆ ಇದೇ ರೀತಿ ಅನೇಕ ಕಡೆಗಳಲ್ಲಿ ಅದ್ವಾನ ಸೃಷ್ಟಿಸಿದೆ. ರಾಜಕಾಲುವೆಗಳು ಸ್ವಲ್ಪ ಮಳೆ ಬಂದರೆ ತುಂಬಿಕೊಳ್ಳುವುದರಿಂದ ಈ ರೀತಿಯ ವತಾವರಣ ಪ್ರತಿ ಭಾರೀ ನಿರ್ಮಾಣವಾಗಿ ಸಮಸ್ಯೆ ಉಂಟಾಗುತ್ತಿದೆ. ಬಿಬಿಎಂಪಿಯ ಅವೈಜ್ಞಾನಿಕ ಚರಂಡಿ ನಿರ್ಮಾಣ, ಅಧಿಕಾರಿಗಳ ನಿರ್ಲಕ್ಷ್ಯಗಳಿಂದ ಜನ ಸಮಸ್ಯೆ ಎದುರಿಸುವಂತಾಗಿದೆ ಎಂದು ಜನ ದೂರಿದರು.

ಹತ್ತಾರು ಮನೆಗಳಿಗೆ ನುಗ್ಗಿದ ಮಳೆ ನೀರು

ಹತ್ತಾರು ಮನೆಗಳಿಗೆ ನುಗ್ಗಿದ ಮಳೆ ನೀರು

ಇನ್ನು ಯಲಚೇನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು ಎನ್ನಲಾಗಿದೆ. ಮನೆಯ ವಸ್ತುಗಳ ನೀರು ಪಾಲಾಗಿದ್ದು, ಮನೆಯಲ್ಲಿ ನಿಲ್ಲಲು ಸ್ಥಳವಿಲ್ಲದಂತಾಗಿ ಮನೆ ಮಾಲೀಕರು ಬೆಳಗ್ಗೆವರೆಗೂ ಜಾಗರಣೆ ಮಾಡಿದ್ದಾರೆ. ಅದೇ ರೀತಿ ಕುಮಾರಸ್ವಾಮಿ ಬಡಾಣೆಯ ಕೆ. ಎಸ್‌. ಲೇಔಟ್‌ ಪ್ರದೇಶದಲ್ಲಿ ಸಹ ಜನ ಪರದಾಡಿದ್ದಾರೆ. ಚರಂಡಿಗಳಿಂದ ಮಳೆ ನೀರು ಉಕ್ಕಿಹರಿದ ಪರಿಣಾಮ ರಸ್ತೆ ಯಾವುದು? ಕರೆಯಾವುದು? ಎಂಬದು ಗೊತ್ತಾಗದ ಪರಿಸ್ಥಿತಿ ಉಂಟಾಗಿದೆ. ಪ್ರತಿ ಭಾರೀ ಜೋರು ಮಳೆಯಾದಾಗಲು ತಗ್ಗು ಪ್ರದೇಶಗಳ ಜನರು ಹೇಳತೀರದ ಸಮಸ್ಯೆ ಅನುಭವಿಸುವುದು ಕಂಡು ಬಂದಿದೆ.

ಅನೇಕ ಕಡೆಗಳಲ್ಲಿ ಧಾರಕಾರ ಮಳೆ

ಅನೇಕ ಕಡೆಗಳಲ್ಲಿ ಧಾರಕಾರ ಮಳೆ

ಸಾರಕ್ಕಿ, ಯಲಹಂಕ, ಹೆಬ್ಬಾಳ, ಯಶವಂತಪುರ, ಜಕ್ಕೂರು, ಸಂಪಂಗಿರಾಮನಗರ, ಮೆಜೆಸ್ಟಿಕ್, ವಿಜಯನಗರ, ಕೆಂಗೇರಿ, ರಾಜಾಜಿನಗರ, ಶೇಷಾದ್ರಿಪುರಂ, ಮಲ್ಲೇಶ್ವರಂ, ಆರ್‌ಆರ್‌ ನಗರ ಸೇರಿದಂತೆ ನಗರದ ಎಲ್ಲ ಬಹುತೇಕ ಪ್ರದೇಶಗಳಲ್ಲಿ ಮಳೆ ಬಿದ್ದಿದೆ. ಈ ವೇಳೆ ಕೆ.ಆರ್‌.ವೃತ್ತ, ಮೆಜೆಸ್ಟಿಕ್ ಸುತ್ತಮುತ್ತಲಿನ ರಸ್ತೆ, ಸಾರಕ್ಕಿ, ಬನ್ನೇರುಘಟ್ಟ, ನಾಯಂಡಹಳ್ಳಿ ಜಂಕ್ಷನ್ ಸೇರಿದಂತೆ ಬಹುಪಾಲು ರಸ್ತೆಗಳು ಹಾಗೂ ರಸ್ತೆ ಅಂಡರ್ ಪಾಸ್‌ಗಳು ಜಲಾವೃತಗೊಂಡಿದ್ದವು. ವಾಹನ ಸವಾರರು ಮಳೆ, ಸಂಚಾರ ದಟ್ಟಣೆ ಸಮಸ್ಯೆ ಜತೆಗೆ ಪ್ರವಾಹ ಪರಿಸ್ಥಿತಿಗೆ ತತ್ತರಿಸಿದರು.

ಸೋಮವಾರವೂ ಭಾರಿ ಮಳೆ ನಿರೀಕ್ಷೆ?

ಸೋಮವಾರವೂ ಭಾರಿ ಮಳೆ ನಿರೀಕ್ಷೆ?

ರಾಜಾಜಿನಗರ, ಯಶವಂತಪುರ ಸೇರಿದಂತೆ ಕೆಲವು ಕಡೆಗಳಲ್ಲಿ ಜೋರು ಮಳೆ ಗಾಳಿಯ ರಭಸಕ್ಕೆ ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ. ಅದೃಷ್ಟವಶಾತ್ ಎಲ್ಲಿಯೂ ಹಾನಿ ಸಂಭವಿಸಿಲ್ಲ. ದೂರಿನ ಮೇರೆಗೆ ಸ್ಥಳಕ್ಕೆ ಬಂದ ಬಿಬಿಎಂಪಿ ಸಿಬ್ಬಂದಿ ಕೊಂಬೆ ತೆರವು ಮಾಡಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರವು ಇದೇ ರೀತಿ ವಾತಾವರಣ ಉಂಟಾಗುವ ಲಕ್ಷಣಗಳಿವೆ. ಕೆಲವು ಪ್ರದೇಶದಲ್ಲಿ ಸಂಜೆ ನಂತರ ಸಾಧಾರಣದಿಂದ ಗುಡುಗು ಸಹಿತ ಧಾರಾಕಾರ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.

Recommended Video

T20 ಸರಣಿಯಿಂದ KL ರಾಹುಲ್ ಗೆ ಗೇಟ್ ಪಾಸ್!! ಸಂಜು ಸ್ಯಾಮ್ಸನ್ ಗೆ ಹೊಡೀತು ಲಕ್.. | *Cricket | OneIndia Kannada

English summary
Bengaluru city received heavy rain on saturday and lite rainfall in city on sunday. Huge problem was faced several places in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X