ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರಿ ಮಳೆಗೆ ಬೆಚ್ಚಿಬಿದ್ದ ಬೆಂಗಳೂರು; ಹಲವು ಪ್ರದೇಶ ಜಲಾವೃತ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 23 : ಶುಕ್ರವಾರ ಸಂಜೆ ಸುರಿದ ಮಳೆಗೆ ಬೆಂಗಳೂರು ನಗರದ ಜನರು ಬೆಚ್ಚಿ ಬಿದ್ದಿದ್ದಾರೆ. ನಗರದ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಬಿಬಿಎಂಪಿಗೆ ಕೆಲವೇ ಗಂಟೆಗಳಲ್ಲಿ ಹಲವಾರು ದೂರುಗಳು ಬಂದಿವೆ.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಆರಂಭವಾದ ಮಳೆ 5.30ರ ತನಕ ಧಾರಕಾರವಾಗಿ ಸುರಿದಿದೆ. ಗುಡುಗು ಸಿಡಿಲುಗಳ ಜೊತೆ ಸುರಿದ ಮಳೆ ಬೆಂಗಳೂರು ನಗರದಲ್ಲಿ ಮಲೆನಾಡನ್ನು ನೆನಪು ಮಾಡಿಸಿತು.

ದಾವಣಗೆರೆಯಲ್ಲಿ ಧಾರಾಕಾರ ಮಳೆ: ನದಿ ತೀರದ ಜನರಿಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆದಾವಣಗೆರೆಯಲ್ಲಿ ಧಾರಾಕಾರ ಮಳೆ: ನದಿ ತೀರದ ಜನರಿಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ

ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಜಯನಗರ, ಶಿವಾಜಿನಗರ, ಬಸವನಗುಡಿ, ಮೈಸೂರು ರಸ್ತೆ, ಹೊಸಕೆರೆಹಳ್ಳಿ, ಬನಶಂಕರಿ ಮುಂತಾದ ಪ್ರದೇಶಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿತ್ತು.

ಕರ್ನಾಟಕ: 2 ದಿನ ಉತ್ತರ ಒಳನಾಡು ಹಾಗೂ ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕರ್ನಾಟಕ: 2 ದಿನ ಉತ್ತರ ಒಳನಾಡು ಹಾಗೂ ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಮಳೆ

Heavy Rain in Bengaluru Water Logging In Many Areas

ಕೆಂಗೇರಿ ಬಳಿ ಮೈಸೂರು ರಸ್ತೆಯ ಒಂದು ಭಾಗ ನೀರಿನಲ್ಲಿ ಆವೃತವಾಗಿದೆ. ಕೋರಮಂಗಲದ 100 ಅಡಿ ರಸ್ತೆ ಜಲಾವೃತವಾಗಿ ವಾಹನ ಸವಾರರು ಪರದಾಡಿದರು. ಹೊಸಕರೆಹಳ್ಳಿಯ ಕೆರೆಯ ನೀರು ವಿವಿಧ ಪ್ರದೇಶಗಳಿಗೆ ನುಗ್ಗಿದೆ.

infographics: ಬಿಬಿಎಂಪಿ ವಿವಿಧ ವಾರ್ಡುಗಳಲ್ಲಿ ಬಿದ್ದ ಮಳೆ ಪ್ರಮಾಣವೆಷ್ಟು? infographics: ಬಿಬಿಎಂಪಿ ವಿವಿಧ ವಾರ್ಡುಗಳಲ್ಲಿ ಬಿದ್ದ ಮಳೆ ಪ್ರಮಾಣವೆಷ್ಟು?

ಮಧ್ಯಾಹ್ನ 2.30ರಿಂದ 5.30ರ ತನಕ ಬೆಂಗಳೂರು ನಗರದಲ್ಲಿ 13.2 ಮೀ. ಮೀ. ಮಳೆಯಾಗಿದೆ. ಹೆಚ್‌ಎಎಲ್ ಏರ್ ಪೋರ್ಟ್‌ನಲ್ಲಿ 1.3 ಮಿ. ಮೀ. ಮತ್ತು ಬೆಂಗಳೂರು ವಿಮಾನ ನಿಲ್ದಾಣದಲ್ಲಿ 7.7 ಮೀ. ಮೀ. ಮಳೆಯಾಗಿದೆ.

basavanagudi

ಜಯನಗರದ 3ನೇ ಹಂತದಲ್ಲಿ ಹಲವು ರಸ್ತೆಗಳು ಜಲಾವೃತವಾಗಿವೆ. ಗಾಂಧಿ ಬಜಾರ್‌ ಸಮೀಪದಲ್ಲಿನ ಬಸವನಗುಡಿ ಅಂಡರ್ ಪಾಸ್ ಜಲಾವೃತಗೊಂಡು ವಾಹನ ಸವಾರರು ಪರದಾಡಿದರು.

ಶುಕ್ರವಾರ ಸುರಿದ ಮಳೆ ದಸರಾ ಸಂದರ್ಭದಲ್ಲಿ ಜನರ ಖರೀದಿಗೆ ತೊಂದರೆ ಉಂಟು ಮಾಡಿತು. ಮುಂದಿನ 24 ಗಂಟೆಗಳ ಕಾಲ ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

English summary
Heavy rain continued on Friday evening several areas in the Bengaluru city. Water logging in many areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X