ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಜೋರು ಮಳೆ: ಸಂಚಾರ ಅಸ್ತವ್ಯಸ್ತ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 16: ಬೆಳಿಗ್ಗೆಯಿಂದ ಮೋಡ ಮುಸುಕಿದ ವಾತಾವರಣವಿದ್ದ ಬೆಂಗಳೂರಲ್ಲಿ ರಾತ್ರಿ ವೇಳೆಗೆ ಧಾರಾಕಾರ ಮಳೆ ಪ್ರಾರಂಭವಾಗಿದೆ.

9 ಗಂಟೆ ಸುಮಾರಿಗೆ ಆರಂಭವಾದ ಮಳೆ ಧೋ ಎಂದು ಸುರಿದು, ಮನೆ ತಲುಪುವ ಗಡಿ-ಬಿಡಿಯಲ್ಲಿದ್ದ ಬೆಂಗಳೂರಿಗರು ಕಿರಿ-ಕಿರಿ ಅನುಭವಿಸುವಂತೆ ಮಾಡಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವಿಸ್ ಕರ್ನಾಟಕಕ್ಕೆ ನೀಡಿದ ಎಚ್ಚರಿಕೆ ಏನು?ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವಿಸ್ ಕರ್ನಾಟಕಕ್ಕೆ ನೀಡಿದ ಎಚ್ಚರಿಕೆ ಏನು?

ಜೊರಾಗಿ ಸುರಿದ ಮಳೆಗೆ ನಗರದ ಬಹುಪಾಲು ರಸ್ತೆಗಳು ಮಾಮೂಲಿನಂತೆ ತುಂಬಿವೆ. ಮಳೆಯಿಂದಾಗಿ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.

Heavy Rain In Bengaluru: People Struggle To Reach Home

ಮೆಜೆಸ್ಟಿಕ್, ಜಯನಗರ, ಮಲ್ಲೇಶ್ವರ, ಎಲೆಕ್ಟ್ರಾನಿಕ್ ಸಿಟಿ, ವಿಧಾನಸೌಧ ಸುತ್ತಮುತ್ತ, ಎಂಜಿ ರಸ್ತೆ, ಮಾರ್ಕೆಟ್, ಚಾಮರಾಜನಗರ ಸೇರಿ ನಗರದ ಹಲವೆಡೆ ಒಂದು ತಾಸಿನ ವರೆಗೆ ಸತತ ಮಳೆ ಸುರಿದಿದೆ.

ಮಳೆ ನಿಲ್ಲಲು ಜನ ಕಾಯ್ದ ಕಾರಣ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣ ಜನರಿಂದ ತುಂಬಿ ಹೋಗಿತ್ತು. ಮಳೆ ಇಳಿಯುವವರೆಗೆ ಕಾದ ಜನ, ಆಟೊ-ಕ್ಯಾಬ್‌ಗಳ ಮೂಲಕ ಲಘು-ಬಗೆಯಲ್ಲಿ ಮನೆ ಸೇರಲು ಧಾವಂತ ತೋರಿದ್ದು ಕಂಡು ಬಂದಿತು.

ಕರ್ನಾಟಕದಲ್ಲಿ ಮತ್ತೆ ಮೂರು ದಿನ ಭಾರಿ ಮಳೆ ಮುನ್ಸೂಚನೆಕರ್ನಾಟಕದಲ್ಲಿ ಮತ್ತೆ ಮೂರು ದಿನ ಭಾರಿ ಮಳೆ ಮುನ್ಸೂಚನೆ

ಹವಾಮಾನ ಇಲಾಖೆಯ ಪ್ರಕಾರ ನಾಳೆಯೂ ನಗರದಲ್ಲಿ ಮಳೆ ಆಗಲಿದೆ. ಬೆಂಗಳೂರು ಮಾತ್ರವಲ್ಲದೆ, ಕರಾವಳಿ ಜಿಲ್ಲೆಗಳು, ಮೈಸೂರು, ಚಿಕ್ಕಬಳ್ಳಾಪುರಗಳಲ್ಲಿಯೂ ಮಳೆಯ ಸಂಭವ ಇದೆ.

English summary
Bengaluru sees heavy rain on Monday Night. Rain flashed one hour continuesly in Bengaluru's main areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X