ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಮುಂಜಾವಿಗೆ ಜೀವ ತುಂಬಿದ ಜೋರು ಮಳೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22: ಸೋ.. ಎಂದು ಶೃತಿ ಹಿಡಿದು ಸುರಿಯುತ್ತಿದ್ದ ಮಳೆಯ ನಾದ ಕೇಳಿಸಿಕೊಂಡೇ ಇಂದು ಬೆಂಗಳೂರು ನಗರವಾಸಿಗಳು ತಮ್ಮ ದಿನ ಪ್ರಾರಂಭಿಸಿದರು.

ನಗರದಲ್ಲಿ ಬೆಳ್ಳಂಬೆಳಿಗ್ಗೆ ಜೋರು ಮಳೆ. ಬೆಳಿಗ್ಗೆ ಜೋರಾಗಿ ಪ್ರಾರಂಭವಾದ ಮಳೆ ನಂತರ ಸ್ವಲ್ಪ ಕಡಿಮೆಯಾಗಿ ಕೊನೆಗೆ ಸೋನೆಮಳೆಯಾಗಿ ತಿರುಗಿ ಮುಂಜಾವಿನ ತಂಪಿಗೆ ಇನ್ನಷ್ಟು ತಂಪೆರೆದು ಮಾಯವಾಯಿತು.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅ.24ರ ತನಕ ಮಳೆಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅ.24ರ ತನಕ ಮಳೆ

ನಗರದ ಬಹುತೇಕ ಎಲ್ಲಕಡೆ ಈ ಬೆಳಗಿನ ಮಳೆಯ ದರ್ಶನವಾಗಿದೆ. ನಗರದಲ್ಲಿ ಕೆಲವು ದಿನಗಳಿಂದ ಸತತ ಮಳೆ ಆಗುತ್ತಿದೆ. ಆದರೆ ಬೆಳಗಿನ ಮಳೆ ನಗರ ಜೀವನಕ್ಕೆ ಆಹ್ಲಾದ ತುಂಬಿದೆ.

Heavy Rain In Bengaluru In Early Morning

ಬೆಳಗಿನ ಮಳೆ ಕೆಲವರಿಗೆ ಕಿರಿ-ಕಿರಿಯನ್ನೂ ತಂದಿದೆ. ಬೆಳಿಗ್ಗೆಯೇ ಎದ್ದು ಕಚೇರಿಗೆ ತೆರಳುವವರು, ಹೊಟೆಲ್ ಕೆಲಸದವರು, ಪಾರ್ಕುಗಳ ಪಕ್ಕದ ಬಂಡಿ ವ್ಯಾಪಾರಿಗಳು ಶಾಪ ಹಾಕುತ್ತಾ ಮಳೆ ಯಾವಾಗ ನಿಲ್ಲುವುದೋ ಎಂದು ಆಕಾಶ ದಿಟ್ಟಿಸುತ್ತಿದ್ದು ಕಾಣಿಸಿತು.

ಬೆಳಗಿನ ಮಳೆಯನ್ನು ಅನುಭವಿಸುವವರ ಸಂಖ್ಯೆಯೂ ನಗರದಲ್ಲಿ ಕಡಿಮೆ ಇಲ್ಲ. ಮಳೆಯಲ್ಲಿಯೇ ಜಾಗಿಂಗ್, ಚಾಕಿಂಗ್ ಮಾಡಿ ಮಳೆ-ಚಳಿಗೆ ಮೈಯೊಡ್ಡಿ ಭಿನ್ನ ಅನುಭೂತಿಯನ್ನು ಹಲವರು ಪಡೆದಿದ್ದು ಲಾಲ್‌ಬಾಗ್‌ ಸಮೀಪದ ರಸ್ತೆಗಳಲ್ಲಿ ಕಂಡು ಬಂತು.

English summary
Heavy rain in Bengaluru in early morning on Tuesday. Rain Expected two more days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X