ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಚೇರಿ ಬಿಡುವ ಸಮಯ ನೋಡಿ ಬರುವನು ಮಳೆರಾಯ : ಬೆಂಗಳೂರಲ್ಲಿ 2 ದಿನ ಭಾರಿ ಮಳೆ

|
Google Oneindia Kannada News

ಬೆಂಗಳೂರು, ಆಗಸ್ಟ್ 20: ಅಯ್ಯೋ ಎಲ್ಲಾ ಕಡೆಯೂ ಮಳೆಯಾಗ್ತಿದೆ ಬೆಂಗಳೂರಲ್ಲಿ ಮಾತ್ರ ಇಲ್ಲ ಎನ್ನುತ್ತಿದ್ದವರಿಗೆ ಖುಷಿಯಾಗಿರಬಹುದು. ಬೆಂಗಳೂರಿಗರು ತೊಯ್ದು ತೊಪ್ಪೆಯಾರೂ ಪರವಾಗಿಲ್ಲ ಮಳೆ ಹೀಗೆ ಮುಂದುವರೆಯಲಿ ಎನ್ನುವವರು ಹಲವಾರು ಮಂದಿ.

ಆದರೂ ಯಾರೂ ಏನೇ ಹೇಳಿದರೂ ಇಂದು ಬೆಂಗಳೂರು ತೊಯ್ದು ತೊಪ್ಪೆಯಾಗಿದೆ. ಎಲ್ಲೆಂದರಲ್ಲಿ ನೀರು ನಿಂತುಕೊಂಡು ವಾಹನ ಸಂಚಾರ ಅಸ್ತವ್ಯವಸ್ತವಾಗುವಂತೆ ಮಾಡಿದೆ. ಕಳೆದೆರೆಡು ಗಂಟೆಗಳಿಂದ ಹೊಯ್ಯುತ್ತಿರುವ ಮಳೆಯಿಂದಾಗಿ ಜನರು ಪರಿತಪಿಸುವಂತಾಗಿದೆ.

ಬೆಂಗಳೂರು : 48 ಗಂಟೆಗಳಲ್ಲಿ ಭಾರಿ ಮಳೆ ಎಚ್ಚರಿಕೆಬೆಂಗಳೂರು : 48 ಗಂಟೆಗಳಲ್ಲಿ ಭಾರಿ ಮಳೆ ಎಚ್ಚರಿಕೆ

ಕಳೆದ ಎರಡು ದಿನಗಳಿಂದ ಸಂಜೆ ಸುಮಾರು 6 ಗಂಟೆಯ ಬಳಿಕ ಮಳೆ ಆರಂಭವಾಗುತ್ತಿದೆ ಕನಿಷ್ಠ 2-3 ಗಂಟೆಗಳ ಕಾಲ ಮಳೆ ಚೆನ್ನಾಗಿ ಸುರಿಯುತ್ತಿದೆ.

rain

ಮಂಗಳವಾರ ಸಂಜೆಯಿಂದಲೇ ವರುಣ ಆರ್ಭಟ ಜೋರಾಗಿ ಸಾಗಿದೆ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮಳೆ ಸುರಿದಿದ್ದು ನಾಗರಿಕರು, ವಾಹನ ಸವಾರರು ಮಳೆಯಿಂದ ತೊಂದರೆಗೀಡಾದರು. ಮಂಗಳವಾರ ಕಚೇರಿ ಮುಗಿಸಿ ಮನೆಗೆ ತೆರಳಲು ತಯಾರಾಗಿದ್ದ ಉದ್ಯೋಗಿಗಳಿಗೆ ತೀವ್ರ ತೊಂದರೆ ಉಂಟಾಯಿತು.

ಅಪಾಯ ಮಟ್ಟ ಮೀರಿದ ಗಂಗಾ: ದೆಹಲಿಗೆ ರೆಡ್ ಅಲರ್ಟ್ಅಪಾಯ ಮಟ್ಟ ಮೀರಿದ ಗಂಗಾ: ದೆಹಲಿಗೆ ರೆಡ್ ಅಲರ್ಟ್

ಮೆಜೆಸ್ಟಿಕ್‌, ಕೆ.ಆರ್. ಮಾರುಕಟ್ಟೆ, ಯಶವಂತಪುರ, ಹನುಮಂತನಗರ, ವಿದ್ಯಾರಣ್ಯಪುರದಲ್ಲಿ ವಾಹನ ಸಂಚಾರಕ್ಕೆ ಧಕ್ಕೆಯಾಗಿದೆ. ಎಂಜಿ ರಸ್ತೆ, ಕೆಂಗೇರಿ, ಜಯನಗರ, ಉತ್ತರಹಳ್ಳಿ, ಶ್ರೀನಿವಾಸನಗರ, ಹನುಮಂತನಗರ, ವಿಧಾನಸೌಧ, ಶಾಂತಿ ನಗರ, ಆಡುಗೋಡಿ, ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ, ಮೈಸೂರು ರಸ್ತೆ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ.

ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

English summary
Heavy Rain Fall In Most Of the Places of Bengaluru, All those who work in the evenings, try to get done with work early this week. Also, opt for cabs rather then two-wheelers and don’t forget to carry your umbrellas as the rains are not going to stop for another two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X