ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಂಧ್ರದ ವ್ಯಕ್ತಿಗೆ ಮರು ಜೀವ ನೀಡಿದ ಹಾಸನದ ವ್ಯಕ್ತಿಯ ಹೃದಯ

By Mahesh
|
Google Oneindia Kannada News

ಬೆಂಗಳೂರು / ಹಾಸನ, ಮಾರ್ಚ್ 30: ರಸ್ತೆ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡಿರುವ ಹಾಸನ ಮೂಲದ 26 ವರ್ಷದ ಯುವಕನ ಹೃದಯವನ್ನು ಆಂಧ್ರಪ್ರದೇಶದ 18 ವರ್ಷದ ವ್ಯಕ್ತಿಗೆ ಹೃದಯ ಕಸಿ ಮಾಡುವಲ್ಲಿ ನಾರಾಯಣ ಹೆಲ್ತ್ ಸಿಟಿ ವೈದ್ಯರು ಯಶಸ್ವಿಯಾಗಿದ್ದಾರೆ.

ದಾನಿಯು 26 ವರ್ಷದ ಯುವಕನಾಗಿದ್ದು, ಬುಧವಾರದಂದು ರಸ್ತೆ ಅಪಘಾತದಲ್ಲಿ ಗಾಯಗೊಂಡು ಹತ್ತಿರದ ಆಸ್ಪತ್ರೆಯಲ್ಲಿ ದಾಖಲಾದರು. ಹೆಚ್ಚಿನ ಚಿಕಿತ್ಸೆಗಾಗಿ ಉತ್ತರಹಳ್ಳಿಯಲ್ಲಿರುವ ಬಿ.ಜಿ.ಎಸ್. ಗ್ಲೋಬಲ್ ಆಸ್ಪತ್ರೆಗೆ ಅವರನ್ನು ಶಿಫಾರಸು ಮಾಡಲಾಯಿತು.

ಆದರೆ, ಬಿ.ಜಿ. ಎಸ್. ಗ್ಲೋಬಲ್ ಆಸ್ಪತ್ರೆಯ ವೈದ್ಯರು ನಿನ್ನೆ ಮೆದುಳು ನಿಷ್ಕ್ರಿಯಗೊಂಡಿರುವುದು ಪ್ರಕಟಿಸಿದರು. ಮೆದುಳು ನಿಷ್ಕ್ರಿಯಗೊಂಡಿರುವುದು ಪ್ರಕಟಿಸಿದನಂತರ ಮೃತ ಯುವಕನ ಮನೆಯವರು ಅಂಗಾಂಗದಾನಕ್ಕೆ ಮುಂದಾದರು.

ಹೃದಯ ದಾನ ಮಾಡಿ ಮರುಜೀವ ಕೊಟ್ಟ 23ರ ಯುವಕಹೃದಯ ದಾನ ಮಾಡಿ ಮರುಜೀವ ಕೊಟ್ಟ 23ರ ಯುವಕ

ಮೃತ ಯುವಕನ ಮನೆಯವರು ಅಂಗಾಂಗದಾನಕ್ಕೆ ಒಪ್ಪಿಗೆ ಸೂಚಿಸಿದ ನಂತರ ಇಂದು ಬೆಳಗಿನ ಜಾವ ಹಸಿರು ಪಥ (ಗ್ರೀನ್ ಕಾರಿಡಾರ್) ಸಹಾಯದಿಂದ ದಾನಿಯ ಹೃದಯವನ್ನು ಬೊಮ್ಮಸಂದ್ರ ಕೈಗಾರಿಕ ಪ್ರದೇಶದಲ್ಲಿರುವ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ರವಾನಿಸಲಾಯಿತು.

ಹಸಿರು ಪಥ (ಗ್ರೀನ್ ಕಾರಿಡಾರ್) ಸಹಾಯ

ಹಸಿರು ಪಥ (ಗ್ರೀನ್ ಕಾರಿಡಾರ್) ಸಹಾಯ

ಜೋಸೆಫ್ ಪಸಂಘಾ, ಸಿ.ಒ.ಒ, ನಾರಾಯಣ ಹೆಲ್ತ್ ಸಿಟಿ, ಮಾತನಾಡಿ, "ನಾವು ಖಾಸಿಂ ರಾಜ, ಎ.ಸಿ.ಪಿ, ಪೂರ್ವ ವಿಭಾಗದ ಸಂಚಾರಿ ಪೋಲಿಸ್ ಹಾಗು ಹಿತೇಂದ್ರ, ಬೆಂಗಳೂರು ಸಂಚಾರಿ ಪೋಲಿಸ್ ಇಲಾಖೆಯಿಂದ ಪ್ರತಿಬಾರಿ ಅಂಗಾಂಗವನ್ನು ರವಾನಿಸಲು ನೀಡಲ್ಪಟ್ಟ ಬೆಂಬಲವನ್ನು ಪ್ರಶಂಸಿಸಿದರು ಹಾಗು ಅಂಗಾಂಗ ದಾನ ಮಾಡಲು ಮುಂದೆ ಬಂದ ದಾನಿಯ ಕುಟುಂಬಕ್ಕೂ ಸಹ ಕೃತಜ್ಞತೆ ಸಲ್ಲಿಸಿದರು.

ಹೃದಯ ಪಡೆದವರ ವಿವರಗಳು

ಹೃದಯ ಪಡೆದವರ ವಿವರಗಳು

ಆಂಧ್ರಪ್ರದೇಶದ ನೆಲ್ಲೂರಿನ 18 ವರ್ಷದ ವ್ಯಕ್ತಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆಮಾಡಲಾಗಿದೆ. ಇವರು ಕಂಜೆನೈಟಲ್ ಹಾರ್ಟ್ ಡಿಸೀಸ್ (ಜನ್ಮಜಾತ ಹೃದಯ ರೋಗ) ಸಮಸ್ಯೆಯಿಂದ ಬಳಲುತ್ತಿದ್ದರು. ಹಾಗು ಇವರಿಗೆ ಮರುಕಳಿಸುವ ಹೃದಯ ವೈಫಲ್ಯ (ಹಾರ್ಟ್ ಫೇಲ್ಯೂರ್), ಹೊಂದಿದ್ದು, ಇದಕ್ಕಾಗಿ ಇವರು ಡಾ. ಭಗೀರಥ್ ರಘುರಾಮ್ , ಹಿರಿಯ ಕನ್ಸಲ್ಟಂಟ್, ಇಂಟರ್ವೆನ್ಷಲ್ ಹಾಗು ಹೃದಯ ಕಸಿ ನಿರ್ದೆಶಕರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಹೃದಯಕ್ಕಾಗಿ ಜೀವಸಾಥರ್Àಕತೆಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದರು. ಇಂದು ಇವರಿಗೆ ಸರಿಹೊಂದುವ ಹೃದಯ ದೊರಕಿದೆ.

ಹೃದಯ ಪಡೆದ ಪ್ರಕ್ರಿಯೆ

ಹೃದಯ ಪಡೆದ ಪ್ರಕ್ರಿಯೆ

ರವಿಯವರ ಹೃದಯವನ್ನು ಹೊತ್ತು ಹೊರಟ ಆಂಬುಲೆನ್ಸ್ ಬಿ.ಜಿ.ಎಸ್. ಗ್ಲೋಬಲ್ ನಿಂದ 38 ಕಿ.ಮೀ ದೂರದಲ್ಲಿರುವ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ನೈಸ್ ರಸ್ತೆ ಮುಖಾಂತರ 28 ನಿಮಿಷ 40 ಸೆಕೆಂಡುಗಳಲ್ಲಿ ಬಂದು ತಲುಪಿತು.

ಎಸ್. ರಾಮಯ್ಯದಲ್ಲಿರುವ ನಾರಾಯಣ ಹಾರ್ಟ್ ಸೆಂಟರ್‍ನ ಡಾ. ರವಿ ಶಂಕರ್ ಶೆಟ್ಟಿಯವರು, ಹಿರಿಯ ಕಾರ್ಡಿಯೋವ್ಯಾಸ್ಕುಲರ್ ಹಾಗು ಹೃದಯ ಕಸಿ ಶಸ್ತ್ರಚಿಕಿತ್ಸಕರವರು , ಹೃದಯ ಪಡೆಯುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಹೃದಯ ಕಸಿ ಪ್ರಕ್ರಿಯೆಯ ವೈದ್ಯರ ತಂಡ

ಹೃದಯ ಕಸಿ ಪ್ರಕ್ರಿಯೆಯ ವೈದ್ಯರ ತಂಡ

ಹೃದಯ ಕಸಿ ಪ್ರಕ್ರಿಯೆಯಲ್ಲಿ, ನಾರಾಯಣ ಹೆಲ್ತ್ ಸಿಟಿಯ ಹಿರಿಯ ಕಾರ್ಡಿಯೋತೋರಾಸಿಕ್, ವಾಸ್ಕುಲರ್ ಮತ್ತು ಕಸಿ ಶಸ್ತ್ರಚಿಕಿತ್ಸಕರಾದ ಡಾ. ಜೂಲಿಯೆಸ್ ಪುನ್ನೆನ್, ಡಾ. ವರುಣ್ ಶೆಟ್ಟಿ, ಕನ್ಸಲ್ಟಂಟ್, ಕಾರ್ಡಿಯೋತೋರಾಸಿಕ್, ವಾಸ್ಕುಲರ್ ಮತ್ತು ಕಸಿ ಶಸ್ತ್ರಚಿಕಿತ್ಸಕರು, ಡಾ. ರಘು, ಕನ್ಸಲ್ಟಂಟ್, ಕಾರ್ಡಿಯೋತೋರಾಸಿಕ್, ವಾಸ್ಕುಲರ್ ಮತ್ತು ಕಸಿ ಶಸ್ತ್ರಚಿಕಿತ್ಸಕರು ಹಾಗು, ಅರಿವಳಿಕೆ ತಜ್ಞರು ಮತ್ತು ಐ.ಸಿ.ಯು. ತಂಡದವರಿಂದ ಈ ಹೃದಯ ಕಸಿಯನ್ನು ಪೂರ್ಣಗೊಳಿಸಿದರು. ಇದು ನಾರಾಯಣ ಇನ್ಸ್ಟಿಟ್ಯುಟ್ ಆಫ್ ಕಾರ್ಡಿಯಾಕ್ ಸೈನ್ಸ್ ನಲ್ಲಿ 28ನೇ ಹೃದಯ ಕಸಿಯಾಗಿದೆ.

English summary
An 18 year old boy gets a new lease of life as he undergoes a heart transplant at Narayana Institute of Cardiac Sciences, Narayana Health City. The donor, who is a 26 year old youth from Hassan, was admitted at a local hospital and later shifted to BGS Hospital in Kengeri following a road accident on 28th March. However, he was declared brain dead yesterday (March 29th) after which the family consented to donate their son’s organs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X