ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀರಾಮುಲು ಲೆಕ್ಕ: ಸಿದ್ದರಾಮಯ್ಯ ಆರೋಪಗಳಿಗೆ ಪಿನ್ ಟು ಪಿನ್ ಉತ್ತರ

|
Google Oneindia Kannada News

ಬೆಂಗಳೂರು, ಜುಲೈ 20: ವೈದ್ಯಕೀಯ ಸಾಮಾಗ್ರಿಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರ ಮಾಡಿದೆ, ಆರೋಗ್ಯ ಇಲಾಖೆಯಿಂದ ಅವ್ಯವಹಾರ ನಡೆದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆರೋಪಿಸಿ ಲೆಕ್ಕ ಕೊಡಿ ಅಭಿಯಾನ ಆರಂಭಿಸಿದ್ದಾರೆ.

Recommended Video

Indiaದಲ್ಲಿ Corona ಕಾಟ ಆಗಸ್ಟ್ ತಿಂಗಳಲ್ಲಿ ತಾರಕಕ್ಕೇರಲಿದೆ! | Oneindia Kannada

ವೆಂಟಿಲೇಟರ್, ಪಿಪಿಇ ಕಿಟ್, ಮಾಸ್ಕ್, ಗ್ಲೌಸ್, ಆಕ್ಸಿಜನ್ ಸಿಲಿಂಡರ್, ಸ್ಯಾನಿಟೈಸರ್ ಸೇರಿದಂತೆ ಪ್ರತಿಯೊಂದರಲ್ಲೂ ಸೇರಿ ಸುಮಾರು 2200 ಕೋಟಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಎಲ್ಲ ಆರೋಪಗಳಿಗೆ ಕರ್ನಾಟಕ ಆರೋಗ್ಯ ಸಚಿವ ಶ್ರೀರಾಮುಲು ಇಂದು ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಆರೋಪಗಳಿಗೆ ಪಿನ್ ಟು ಪಿನ್ ಲೆಕ್ಕ ನೀಡಿದ್ದಾರೆ.

ವೈದ್ಯಕೀಯ ಸಾಮಾಗ್ರಿ ಖರೀದಿಯಲ್ಲಿ ಸರ್ಕಾರದಿಂದ 2,200 ಕೋಟಿ ಭ್ರಷ್ಟಾಚಾರವೈದ್ಯಕೀಯ ಸಾಮಾಗ್ರಿ ಖರೀದಿಯಲ್ಲಿ ಸರ್ಕಾರದಿಂದ 2,200 ಕೋಟಿ ಭ್ರಷ್ಟಾಚಾರ

ಡಿಸಿಎಂ ಅಶ್ವತ್ ನಾರಾಯಣ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಶ್ರೀರಾಮುಲು 'ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಆರೋಪ ಎಲ್ಲವೂ ಸುಳ್ಳು, ಅವರ ಹೇಳಿರುವಷ್ಟು ನಾವು ಖರೀದಿ ಮಾಡೇ ಇಲ್ಲ. ಒಂದು ರೂಪಾಯಿ ಅಕ್ರಮ ನಡೆದಿದೆ ಎಂದು ಸಾಬೀತುಪಡಿಸಿದರೆ ಕೂಡಲೇ ರಾಜೀನಾಮೆ ಕೊಡುತ್ತೇನೆ' ಎಂದು ಹೇಳಿದ್ದಾರೆ. ಮುಂದೆ ಓದಿ....

10 ಕೋಟಿ 61 ಲಕ್ಷಕ್ಕೆ ವೆಂಟಿಲೇಟರ್ ಖರೀದಿ

10 ಕೋಟಿ 61 ಲಕ್ಷಕ್ಕೆ ವೆಂಟಿಲೇಟರ್ ಖರೀದಿ

- ತಾಂತ್ರಿಕತೆಯ ಆಧಾರದ ಮೇಲೆ ವೆಂಟಿಲೇಟರ್ ಖರೀದ ಮಾಡಬೇಕಾಗುತ್ತದೆ.

- ಸುಮಾರು 4 ಲಕ್ಷದಿಂದ 50-60 ಲಕ್ಷದ ವೆಂಟಿಲೇಟರ್ ಖರೀದಿ ಮಾಡಲಾಗಿದೆ.

- ಎಲ್ಲ ವೆಂಟಿಲೇಟರ್‌ಗಳನ್ನು 10 ಕೋಟಿ 61 ಲಕ್ಷಕ್ಕೆ ಖರೀದಿ ಮಾಡಲಾಗಿದೆ.

- ಐಸಿಯುನಲ್ಲಿ ಬಳಕೆಯಾಗುವ ವೆಂಟಿಲೇಟರ್ ಗೆ 18 ಲಕ್ಷ ವೆಚ್ಚ ತಗುಲಿದೆ.

ಪಿಪಿಇ ಕಿಟ್‌ಗಳಿಗೆ 48.65 ಕೋಟಿ ಆಗಬೇಕಿತ್ತು

ಪಿಪಿಇ ಕಿಟ್‌ಗಳಿಗೆ 48.65 ಕೋಟಿ ಆಗಬೇಕಿತ್ತು

- ಪಿಪಿಇ ಕಿಟ್‌ಗಳಲ್ಲಿ ಕೆಲವೊಂದು ಕಾಂಪೋನೆಂಟ್ ಇರುತ್ತದೆ.

- ಒಂದು ಲಕ್ಷ ಕಿಟ್ ತಯಾರು ಮಾಡಲು ಆರ್ಡರ್ ಮಾಡಿದ್ದೆವು

- ಈವರೆಗೂ 40 ಸಾವಿರ ಕಿಟ್ ಮಾತ್ರ ನಮಗೆ ತಲುಪಿದೆ

- ಕೇವಲ 4 ಕಾಂಪೋನೆಂಟ್ ಇರುವ ಕಿಟ್ ಕೊಟ್ಟರೆ ಆಗಲ್ಲ ಎಂದಿದ್ದರು ವೈದ್ಯರು.

- ಬಳಿಕ 6 ಕಾಂಪೋನೆಂಟ್ ಇರುವ ಕಿಟ್ ನೀಡಲು ಹೇಳಿದರು. 6 ಕಾಂಪೋನೆಂಟ್ ನಿಂದ 10 ಕಾಂಪೋನೆಂಟ್ ಬೇಕು ಎಂದರು.

- ಚೀನಾ, ಸಿಂಗಾಪೂರ್‌ನ ಮೂರು ಕಂಪನಿಯಿಂದ 10 ಲಕ್ಷ ಕಿಟ್ ಖರೀದಿ ಮಾಡಿದ್ದೇವೆ.

- ಪಿಪಿಇ ಕಿಟ್‌ಗೆ 79 ಕೋಟಿ (79,35,16,816) ಖರ್ಚು ಆಗಿದೆ.

ಮಾಸ್ಕ್ ಮತ್ತು ಗ್ಲೌಸ್ ಲೆಕ್ಕ

ಮಾಸ್ಕ್ ಮತ್ತು ಗ್ಲೌಸ್ ಲೆಕ್ಕ

- ಎನ್ 95 ಮಾಸ್ಕ್ 156 ರೂಪಾಯಿಗೆ ಖರೀದಿ ಮಾಡಿದ್ದೇವೆ

- ಬೇರೆ ಕಡೆಗಳಿಂದ ಎನ್ 95 ಮಾಸ್ಕ್ ಗೆ 11 ಕೋಟಿ (11,51,58,226) ಖರ್ಚು ಆಗಿದೆ.

- ನಾವು ಮೂರು ಲಕ್ಷ ಸರ್ಜಿಕಲ್ ಗ್ಲೋಸ್ ಗೆ ಆರ್ಡರ್ ಮಾಡಿದ್ದೆವು

- ಆದರೆ 50 ಸಾವಿರ ಗ್ಲೌಸ್ ಮಾತ್ರ ಕೊಟ್ಟಿದ್ದಾರೆ

- ಸರ್ಜಿಕಲ್ ಗ್ಲೌಸ್ ಈವರೆಗೂ 30 ಸಾವಿರ ಮಾತ್ರ ಪಡೆದಿದ್ದೇವೆ.

- 28 ಲಕ್ಷದ 50 ಸಾವಿರ ಮಾತ್ರ ಸರ್ಜಿಕಲ್ ಗ್ಲೌಸ್ ಖರೀದಿ ಮಾಡಿದ್ದೇವೆ ಎಂದು ಶ್ರೀರಾಮುಲು ಹೇಳಿದ್ದಾರೆ.

ಸ್ಯಾನಿಟೈಸರ್ ವಿವರ

ಸ್ಯಾನಿಟೈಸರ್ ವಿವರ

- ಕೇಂದ್ರ ಸರ್ಕಾರದ ಆದೇಶದಂತೆ ಸ್ಯಾನಿಟೈಸರ್ ಖರೀದಿ ಮಾಡಲಾಗಿದೆ .

- 500 ಎಂಎಲ್ ಬಾಟಲ್ 25 ಸಾವಿರ ಲೀಟರ್ ಗೆ ಆರ್ಡರ್ ಮಾಡಿದ್ದೇವು

- 62 ಲಕ್ಷ 50 ಸಾವಿರ ಸ್ಯಾನಿಟೈಸರ್ ಖರೀದಿ ಮಾಡಲಾಗಿದೆ.

- ಬೇರೆ ಬೇರೆ ಕಡೆಯಿಂದ ಈವರೆಗೂ ಸ್ಯಾನಿಟೈಸರ್‌ಗೆ 2.6 ಕೋಟಿ (2,65,80,000) ಖರ್ಚು ಆಗಿದೆ ಎಂದು ಶ್ರೀರಾಮುಲು ವಿವರಿಸಿದ್ದಾರೆ.

English summary
Karnataka health minister Sriramulu clarified about opposition Leader Siddaramaiah's allegations on Corruption in purchasing Covid-19 Items.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X