ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ವಾರಿಯರ್ಸ್‌ಗೆ ಶ್ರೀರಾಮುಲು ಗೌರವ ಸಲ್ಲಿಸಿದ್ದು ಹೇಗೆ?

|
Google Oneindia Kannada News

ಬೆಂಗಳೂರು, ಆ. 10: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊರೊನಾ ವೈರಸ್‌ನಿಂದ ಸಂಪೂರ್ಣವಾಗಿ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜೊತೆಗೆ ಮಾಜಿ ಸಿಎಂ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದು, ಇಂದು ಅಥವಾ ನಾಳೆ ಬಿಡುಗಡೆ ಆಗಲಿದ್ದಾರೆ. ಅವರಿಗೆ ಮತ್ತೊಮ್ಮೆ ಕೋವಿಡ್ ಪರೀಕ್ಷೆಯ ಬಳಿಕ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಲಿದ್ದಾರೆ ಎಂಬ ಮಾಹಿತಿಯಿದೆ.

Recommended Video

ಪ್ರಪಂಚಕ್ಕೆ ಸಿಹಿಸುದ್ದಿ ಕೊಟ್ಟ ರಷ್ಯಾ | Oneindia Kannada

ಇಬ್ಬರೂ ನಾಯಕರು ಗುಣಮುಖರಾಗುತ್ತಿರುವ ಸಂದರ್ಭದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರು ಆಸ್ಪತ್ರೆ ಸೇರಿದ್ದಾರೆ. ಬೆಂಗಳೂರಿನ ಶಿವಾಜಿನಗರದ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ಶ್ರೀರಾಮುಲು ದಾಖಲಾಗಿದ್ದಾರೆ. ಆ ಮೂಲಕ ಕೊರೊನಾ ವಾರಿಯರ್ಸ್‌ಗೆ ಗೌರವ ಕೊಟ್ಟಿದ್ದಾರೆ. ಜೊತೆಗೆ ಸಿಎಂ ಹಾಗೂ ಮಾಜಿ ಸಿಎಂ ಇಬ್ಬರಿಗೂ ಮಾದರಿಯೂ ಆಗಿದ್ದಾರೆ.

ಕೊರೊನಾ ಪಾಸಿಟಿವ್

ಕೊರೊನಾ ಪಾಸಿಟಿವ್

ಜ್ವರ ಕಾಣಿಸಿಕೊಂಡಿದ್ದರಿಂದ ತಪಾಸಣೆ ನಡೆಸಿದಾಗ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ಅವರು ದಾಖಲಾಗಿದ್ದಾರೆ.

ಕೊರೊನಾ ವೈರಸ್ ಸೋಂಕು ದೃಢಪಟ್ಟ ಬಳಿಕ ಸರ್ಕಾರಿ ಆಸ್ಪತ್ರೆಗೆ ಶ್ರೀರಾಮುಲು ಅವರು ದಾಖಲಾಗಿದ್ದಾರೆ. ಆ ಮೂಲಕ ತಾವೇ ಮುಂದಾಗಿ ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಚಿಕಿತ್ಸೆ ಸಿಗುತ್ತದೆ ಎಂಬುದನ್ನು ಜನರಿಗೂ ಮನದಟ್ಟು ಮಾಡಿದ್ದಾರೆ.

ಸಾಮಾನ್ಯ ರೋಗಿ

ಸಾಮಾನ್ಯ ರೋಗಿ

ಆರೋಗ್ಯ ಸಚಿವರಾಗಿದ್ದರೂ ಜನ-ಸಾಮಾನ್ಯರಂತೆಯೆ ಚಿಕಿತ್ಸೆ ಶ್ರೀರಾಮುಲು ಅವರಿಗೂ ನೀಡಲಾಗುತ್ತಿದೆ. ಆಸ್ಪತ್ರೆಗೆ ದಾಖಲಾದ ತಕ್ಷಣ ಸಾಮಾನ್ಯರಂತೆಯೆ ಪ್ರಾಥಮಿಕ ಪರೀಕ್ಷೆಗಳಿಗೆ ಒಳಗಾಗಿದ್ದಾರೆ, ನಂತರ ಚಿಕಿತ್ಸೆ ಶುರುವಾಗಿದೆ.

ಸ್ವಲ್ಪ ಜ್ವರ ಹಾಗೂ ಕೆಮ್ಮಿನಿಂದ ಶ್ರೀರಾಮುಲು ಬಳಲುತ್ತಿದ್ದರು. ಕೆಮ್ಮು ಇದ್ದುದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪರೀಕ್ಷೆ ಬಳಿಕ ಬೋರಿಂಗ್ ಆಸ್ಪತ್ರೆ ವೈದ್ಯರು ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ.

ಆಸ್ಪತ್ರೆಯ ಆಹಾರ

ಆಸ್ಪತ್ರೆಯ ಆಹಾರ

ಶ್ರೀರಾಮುಲು ಅವರು ಆಸ್ಪತ್ರೆಯಲ್ಲಿ ಎಲ್ಲ ರೋಗಿಗಳು ಕೊಡುವ ಸಮತೋಲನ ಆಹಾರವನ್ನೇ ಸೇವಿಸುತ್ತಿದ್ದಾರೆ. ಮನೆಯಿಂದ ಊಟವನ್ನು ಅವರು ತರಿಸಿಕೊಳ್ಳುತ್ತಿಲ್ಲ. ಮನೆಯಿಂದಲೇ ಊಟ ತರುವುದಾಗಿ ಆಪ್ತರು ಹಾಗೂ ಕುಟುಂಬಸ್ಥರು ಒತ್ತಾಯ ಮಾಡಿದ್ದರಂತೆ. ಆದರೆ ಇಲಾಖೆ ಸಚಿವನಾಗಿ ನಾನೇ ಮನೆಯಿಂದ ಊಟ ತರಿಸಿಕೊಂಡರೆ ಉಳಿದವರಿಗೆ ಏನು ಸಂದೇಶ ಹೋಗುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಸರ್ಕಾರಿ ಆಸ್ಪತ್ರೆಗಳ ಆಹಾರ ವ್ಯವಸ್ಥೆ ಪರಿಶೀಲನೆ ಮಾಡಿದಂತೆಯೂ ಆಗುತ್ತದೆ ಎಂದು ತಿಳಿಸಿ ಹೇಳಿದ್ದಾರೆ.


ಇದೀಗ ಆಸ್ಪತ್ರೆಯಲ್ಲಿ ಕೊಡುವ ಸಮತೋಲನ ಆಹಾರ ಸೇವಿಸುತ್ತಿದ್ದು, ವೈದ್ಯರ ಸಲಹೆಯಂತೆ ಆಹಾರ ತೆಗೆದು ಕೊಳ್ಳಲಿದ್ದಾರೆ.

ಗೆಳೆಯನ ಹಾರೈಕೆ

ಗೆಳೆಯನ ಹಾರೈಕೆ

ನನ್ನ ಜೀವದ ಗೆಳೆಯ, ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಕೊರೋನಾ ದಿಂದ ಬೇಗ ಗುಣಮುಖರಾಗಲಿ ಎಂದು ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಹಾರೈಸಿದ್ದಾರೆ. ಆತ್ಮೀಯ ಗೆಳೆಯ ಶ್ರೀರಾಮುಲು ಅವರಿಗೆ, ಕೊರೋನಾ ಸೋಂಕು ತಗುಲಿರುವುದು ತಿಳಿದು ಮನಸ್ಸಿಗೆ ತುಂಬಾ ಬೇಜಾರಾಗಿದೆ. ಅವರು ರಾಜಕೀಯಕ್ಕೆ ಬರುವ ಮೊದಲು, ಚಿಕ್ಕವರಿದ್ದಾಗಿನಿಂಲೂ ಬಡ ಜನರ ಆರೋಗ್ಯದ ಕುರಿತು ತುಂಬಾ ಕಾಳಜಿ ವಹಿಸುತ್ತಿದ್ದರು. ಯಾವಾಗಲೂ ಜನಪರ, ಜನರಿಗೋಸ್ಕರ ಬದುಕಿರುವ ಹಾಗೂ ಬಡಜನರಲ್ಲಿ ದೇವರನ್ನು ಕಾಣುವ ನೀನು, ಆದಷ್ಟು ಬೇಗ ಗುಣಮುಖನಾಗಿ ಬಾ.

ರಾಜ್ಯದಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಾಗಿನಿಂದ ಹಿಡಿದು ಇಲ್ಲಿಯವರೆಗೆ, ರಾಜ್ಯಾದ್ಯಂತ ಪ್ರವಾಸ ಮಾಡಿ, ಅಧಿಕಾರಿಗಳ ಜೊತೆ ಸಭೆ ನಡೆಸಿ, ರಾಜ್ಯದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ, ನಿನಗೆ ಕೊರೋನಾ ವೈರಸ್ ತಗುಲಿರುವುದು ನೀನು ಸಲ್ಲಿಸುತ್ತಿರುವ ಜನ ಸೇವೆಯ ಒಂದು ಭಾಗ ಮಾತ್ರ. ಆದಷ್ಟು ಬೇಗ ಗುಣಮುಖನಾಗಿ ಮರಳು, ನಿರಂತರ ಜನ ಸೇವೆಯನ್ನು ಮಾಡುವ ಶಕ್ತಿಯನ್ನು ಆ ಭಗವಂತನು ಕರುಣಿಸಲಿ ಎಂದು ಗಾಲಿ ಜನಾರ್ದನ ರೆಡ್ಡಿ ಅವರು ಪ್ರಾರ್ಥಿಸಿದ್ದಾರೆ.

ಸೋಂಕಿತರ ಭೇಟಿ

ಸೋಂಕಿತರ ಭೇಟಿ

ಶ್ರೀರಾಮುಲು ಅವರು ಕೋವಿಡ್ ಸೋಂಕಿತರಲ್ಲಿ ಆತ್ಮವಿಶ್ವಾಸ ತುಂಬಲು ಪಿಪಿಇ ಕಿಟ್ ಧರಿಸಿ ಬಳ್ಳಾರಿಯಲ್ಲಿ ಆರಂಭದಲ್ಲಿಯೇ ಸೋಂಕಿತರನ್ನು ಭೇಟಿ ಮಾಡಿದ್ದರು. ಆ ಮೂಲಕ ಕೊರೊನಾ ವೈರಸ್ ಸೋಂಕಿತರಲ್ಲಿ ಧೈರ್ಯ ತುಂಬಿದ್ದರು.

ಸೋಂಕು ದೃಢಪಟ್ಟ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ಆದರೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಸೋಂಕಿನ ಲಕ್ಷಣಗಳನ್ನು ಹೊಂದಿದ್ದರೂ ಭಯ ಪಡದೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆ ಮೂಲಕ ನಿಜವಾದ ಕೊರೊನಾ ವಾರಿಯರ್ಸ್‌ನಂತೆ ಆರಂಭದಿಂದಲೂ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ವೈದ್ಯರಿಗೆ ಗೌರವ ಸೂಚಿಸಿದ್ದಾರೆ.

English summary
Health Minister Sriramulu has been admitted to Shivajinagar Government Hospital in Bengaluru. Corona paid tribute to the Warriors. Minister of Health Sriramulu has been admitted to the Government Hospital and seluted to the real Corona Warriors. She is also a model for both CM and former CM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X