ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರೋಗ್ಯ ಇಲಾಖೆಯ ನೌಕರರಲ್ಲೇ ಹೆಚ್ಚುತ್ತಿದೆ ಆರೋಗ್ಯ ಸಮಸ್ಯೆ!

|
Google Oneindia Kannada News

ಬೆಂಗಳೂರು, ಏಪ್ರಿಲ್ 23: ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಹಾಗೂ ಉದ್ಯೋಗಿಗಳಿಗೆ ಆರೋಗ್ಯ ಬಗೆಗೆ ತುಂಬಾ ಕಾಳಜಿ ಇರುತ್ತದೆ, ನಾನಾ ರೋಗಗಳ ಬಗೆಗೆ ಅವರಿಗೆ ತಿಳಿವಳಿಕೆ ಇರುತ್ತದೆ ಎಂದು ಯಾರಾದರೂ ನಂಬಿದ್ದರೆ ಅದು ಶುದ್ಧ ತಪ್ಪು.

ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದಲ್ಲಿ ಕೆಲಸ ಮಾಡುತ್ತಿರುವ 502 ಸಿಬ್ಬಂದಿಗಳಲ್ಲಿ ಎರಡನೇ ಹಂತದ ಮಧುಮೇಹ ಇರುವುದು ಪತ್ತೆಯಾಗಿದೆ. ಇನ್ನು ಶೇ.40ರಷ್ಟು ಸಿಬ್ಬಂದಿ ಅತಿಯಾದ ತೂಕ, ಶೇ.11ರಷ್ಟು ಸಿಬ್ಬಂದಿ ಬೊಜ್ಜು, ಶೇ.18ರಷ್ಟು ಸಿಬ್ಬಂದಿ ಮಧುಮೇಹ ಹಾಗೂ ಶೇ.31ರಷ್ಟು ಸಿಬ್ಬಂದಿ ಮನೋ ಒತ್ತಡದಿಂದ ಬಳಲುತ್ತಿದ್ದಾರೆ ಎಂದು ರಾಜೀವ್ ಗಾಂಧೀ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದೆ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ವಿಶ್ವ ಆರೋಗ್ಯ ದಿನ: ನಿಮ್ಮ ಆರೋಗ್ಯ ಕಾಪಾಡಲು ಕೆಲವು ಟಿಪ್ಸ್ ಗಳುವಿಶ್ವ ಆರೋಗ್ಯ ದಿನ: ನಿಮ್ಮ ಆರೋಗ್ಯ ಕಾಪಾಡಲು ಕೆಲವು ಟಿಪ್ಸ್ ಗಳು

ಆರೋಗ್ಯ ಇಲಾಖೆಯ ಸಿಬ್ಬಂದಿಯ ಸಾಮಾನ್ಯ ಆರೋಗ್ಯ ತಪಾಸಣೆ ವೇಳೆ ಈ ಅಂಕಿ-ಅಂಶಗಳು ಬೆಳಕಿಗೆ ಬಂದಿದ್ದು, ಆರೋಗ್ಯಕ್ಕೆ ತೊಂದರೆ ಉಂಟು ಮಾಡುವ ಹೈ ರಿಸ್ಕ್ ಸಮಸ್ಯೆ ಇರುವ ಸಿಬ್ಬಂದಿ ಪತ್ತೆ ಮಾಡಿ, ಹೆಚ್ಚಿನ ಚಿಕಿತ್ಸೆಗೆ ಸಲಹೆ ಮಾಡಲಾಗುತ್ತಿದೆ.

Health dept staff under burden of Diabetes, Hypertension: Study

ಅಖಿಲ ಭಾರತ ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳಿಗೆ ವಾರ್ಷಿಕ ಆರೋಗ್ಯ ತಪಾಸಣೆ ನಡೆಸುವಂತೆ ರಾಜ್ಯ ಸರ್ಕಾರಿ ನೌಕರರಿಗೂ ವಾರ್ಷಿಕ ಆರೋಗ್ಯ ತಪಾಸಣೆ ನಡೆಸುವುದು ಒಳ್ಳೆಯದು, ಈ ಬಗ್ಗೆ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಆರೋಗ್ಯ ಇಲಾಖೆಯ ಪ್ರಭಾರಿ ಆಯುಕ್ತ ಡಾ.ರತನ್ ಕೇಳ್ಕರ್ ಈ ಅಂಕಿ-ಅಂಶಗಳನ್ನು ಗಮನಿಸಿ ಪ್ರತಿಕ್ರಿಯೆ ನೀಡಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ 502 ಸಿಬ್ಬಂದಿಯಿಂದ ಮಾದರಿ ಪಡೆಯಲಾಗಿದ್ದು, 274 ಪುರುಷರಲ್ಲಿ 55 ಜನರಿಗೆ ಮಾನಸಿಕ ಒತ್ತಡ ಇರುವುದು ಮೊದಲೇ ಗೊತ್ತಿತ್ತು. ಹೊಸದಾಗಿ 14 ಮಂದಿಯಲ್ಲಿ ಈ ಸಮಸ್ಯೆ ಪತ್ತೆಯಾಗಿದೆ. 228 ಮಹಿಳೆಯರಲ್ಲಿ 30 ಮಂದಿಗೆ ಮಾನಸಿಕ ಒತ್ತಡವಿದ್ದು, 58 ಮಹಿಳೆಯರಲ್ಲಿ ಹೊಸದಾಗಿ ಪತ್ತೆ ಮಾಡಲಾಗಿದೆ. ಒಟ್ಟಾರೆ ನೌಕರರರಲ್ಲಿ ಶೇ.30ರಷ್ಟು ಜನರಿಗೆ ರಕ್ತದೊತ್ತಡ, ಶೇ.40ರಷ್ಟು ನೌಕರರಿಗೆ ಹೆಚ್ಚು ಗ್ಲೂಕೋಸ್ ಅಂಶ ಇರುವುದು ಪತ್ತೆಯಾಗಿದೆ.

English summary
One would expect those working in the health directorate to be the most knowledgeable about disease and their implications, However, health professionals in the state are themselves unaware of their health status.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X