ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊನೆಗೂ ಯೋಧನ ಕಿಡ್ನಿ ಕಸಿಗೆ ಸಮ್ಮತಿ ನೀಡಿದ ಆರೋಗ್ಯ ಇಲಾಖೆ

By Nayana
|
Google Oneindia Kannada News

ಬೆಂಗಳೂರು, ಜು.20: ಪುಣೆಯ ವಾಯುಸೇನೆ ಕರ್ನಲ್‌ ಒಬ್ಬರ ಕಿಡ್ನಿ ಕಸಿಗೆ ರಾಜ್ಯಮಟ್ಟದ ಮಾನವ ಅಂಗಾಂಗ ಕಸಿ ಜೋಡಣಾ ಅಧಿಕಾರಯುಕ್ತ ಸಮಿತಿ ಅನುಮತಿ ನೀಡಿದೆ.

ಹೈಕೋರ್ಟ್‌ ಆದೇಶದ ಹೊರತಾಗಿಯೂ ಪುಣೆಯ ವಾಯುಸೇನೆಯ ಕರ್ನಲ್‌ ಪಂಕಜ್‌ ಭಾರ್ಗವ್‌ ಅವರಿಗೆ ಕಿಡ್ನಿ ಕಸಿ ಮಾಡಿಸಿಕೊಳ್ಳಲು ಮಾನವ ಅಗಾಂಗ ಕಸಿ ಅನುಮೋದನಾ ಸಮಿತಿ ಸಮ್ಮತಿ ನೀಡದೇ ಇರುವುದಕ್ಕೆ ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯೋಧನಿಗೆ ಕಿಡ್ನಿ ಕಸಿ ಅನುಮತಿಗೆ ನಕಾರ, ಎಂಥಾ ಅನ್ಯಾಯ ಸ್ವಾಮಿ ಯೋಧನಿಗೆ ಕಿಡ್ನಿ ಕಸಿ ಅನುಮತಿಗೆ ನಕಾರ, ಎಂಥಾ ಅನ್ಯಾಯ ಸ್ವಾಮಿ

ಕರ್ನಲ್‌ ಪಂಕಜ್ ಭಾರ್ಗವ್‌ ಅವರಿಗೆ ಕಿಡ್ನಿ ನೀಡಲು ಜೈಪುರದ ಮೂಲದ ವರ್ಷ ಶರ್ಮಾ ಮುಂದೆಬಂದಿದ್ದರೂ ಅದಕ್ಕೆ ಸಮಿತಿಯು ಅನುಮತಿ ನೀಡಿರಲಿಲ್ಲ. ಇದರಿಂದ ಅವರು ಕೋರ್ಟ್‌ಗೆ ಮೊರೆ ಹೋಗಿದ್ದರು.

Health department nod for kedney transplantation of soldier

ಅರ್ಜಿದಾರರು ಮಾನವ ಅಂಗಾಂಗಳ ಕಸಿ ಅನುಮೋದನಾ ಸಮಿತಿ ಮುಖ್ಯಸ್ಥರಿಗೆ ಅಗತ್ಯ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿ ಕಿಡ್ನಿ ಕಿಡ್ನಿ ಕಸಿಗೆ ಅನುಮತಿ ಕೋರಬೇಕು. ಅದಾದ ಬಳಿಕ 24 ಗಂಟೆಯೊಳಗೆ ಸಮಿತಿಯು ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮೇ 10ರಂದು ಹೈಕೋರ್ಟ್‌ ತಿಳಿಸಿತ್ತು.

ಆದರೆ ಎರಡು ತಿಂಗಳು ಕಳೆದರೂ ಕಿಡ್ನಿ ಕಸಿಗೆ ಅನುಮತಿ ನೀಡದಕ್ಕೆ ಅರ್ಜಿದಾರ ಪರ ವಕೀಲ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.ಹೈಕೋರ್ಟ್ ಆದೇಶದಂತೆ ಅಂಗಾಂಗ ಕಸಿ ಅನುಮೋದನಾ ಸಮಿತಿಗೆ ಅಗತ್ಯ ದಾಖಲೆ ಒದಗಿಸಿದರೂ ಸಮಿತಿಯು ಈವರೆಗೆ ಸಭೆ ನಡೆಸಿ ಅರ್ಜಿದಾರರಿಗೆ ಕಿಡ್ನಿ ಕಸಿಗೆ ಅನುಮತಿ ನೀಡುವ ಕುರಿತು ಪ್ರಕಟಿಸಿಲ್ಲ ಎಂದು ದೂರಿದ್ದರು.
ಸಮಿತಿ ಆದೇಶ ಪ್ರತಿಯನ್ನು ಸರ್ಕಾರಿ ವಕೀಲ ವಿ. ಶ್ರೀನಿಧಿ ಅವರು ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಅವರಿದ್ದ ಏಕಸದಸ್ಯ ಪೀಠಕ್ಕೆ ಗುರುವಾರ ಸಲ್ಲಿಸಿದರು.

English summary
Health Department gave permission to kidney transplantation for soldier. Earlier Karnataka high court slams health department for not giving permisiion and delaying the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X