ಆರೋಗ್ಯ ಇಲಾಖೆ ಆಯುಕ್ತರ ಕಚೇರಿ ವಿಳಾಸ ಬದಲು
ಬೆಂಗಳೂರು, ನವೆಂಬರ್ 24 : ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರ ಕಚೇರಿ ವಿಳಾಸ ಬದಲಾವಣೆಯಾಗಿದೆ. ಬೆಂಗಳೂರು ನಗರದ ಮಾಗಡಿ ರಸ್ತೆಯಲ್ಲಿ ಹೊಸ ಕಚೇರಿಗೆ ಇದ್ದು, ಕಚೇರಿ ಸ್ಥಳಾಂತರದ ಬಗ್ಗೆ ಮಾಹಿತಿ ನೀಡಲಾಗಿದೆ.
ಈ ಹಿಂದೆ ಬೆಂಗಳೂರಿನ ಆನಂದ್ ರಾವ್ ವೃತ್ತದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರ ಕಚೇರಿ ಇತ್ತು. ಕಚೇರಿಯನ್ನು ಸ್ಥಳಾಂತರ ಮಾಡಲಾಗಿದ್ದು, ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಪತ್ರಗಳನ್ನು ಹೊಸ ಕಚೇರಿಗೆ ತಲುಪಿಸಬೇಕಿದೆ.
ಶಾಲೆ ಪುನರಾರಂಭದ ಬಗ್ಗೆ ಆರೋಗ್ಯ ಸಚಿವರು ನೀಡಿದ ಸಲಹೆ ಏನು?
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆಯುಕ್ತಾಲಯ ಮತ್ತು ನಿರ್ದೇಶನಾಲಯದ ಎಲ್ಲಾ ಅಧೀನ ಕಚೇರಿಗಳನ್ನು ಸ್ಥಳಾಂತರ ಮಾಡಲಾಗಿದೆ. ಇನ್ನು ಮುಂದೆ ಕಚೇರಿಗಳು ಆರೋಗ್ಯ ಸೌಧ, 1ನೇ ಅಡ್ಡ ರಸ್ತೆ, ಕುಷ್ಠರೋಗ ಆಸ್ಪತ್ರೆ ಆವರಣ, ಮಾಗಡಿ ರಸ್ತೆ, ಬೆಂಗಳೂರು 560023 ವಿಳಾಸದಲ್ಲಿ ಇರಲಿವೆ.
ಕೋವಿಡ್ ಏರಿಕೆ: ಮೂರು ರಾಜ್ಯಗಳಿಗೆ ಕೇಂದ್ರದ ಉನ್ನತ ತಂಡ
ಹೊಸ ಕಚೇರಿಯ ವಿಳಾಸಕ್ಕೆ ಎಲ್ಲಾ ಕಾಗದ-ಪತ್ರ ವ್ಯವಹಾರಗಳು ಹಾಗೂ ಆಯುಕ್ತರ ಗಮನಕ್ಕೆ ತರಬಯಸುವ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಪತ್ರಗಳನ್ನು ತಲುಪಿಸಲು, ಕಚೇರಿ ಬದಲಾದ ಬಗ್ಗೆ ಕಚೇರಿ ದಾಖಲೆಗಳಲ್ಲಿ ನಮೂದು ಮಾಡಿಕೊಳ್ಳಲು ಕೋರಲಾಗಿದೆ.
ಕಾಲೇಜು ಆರಂಭ; ಬೆಂಗಳೂರಲ್ಲಿ 168 ಕೋವಿಡ್ ಪ್ರಕರಣ ಪತ್ತೆ
ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಆಯುಕ್ತರಾಗಿದ್ದಾರೆ. ಹೊಸ ವಿಳಾಸದಲ್ಲಿ ಇನ್ನು ಮುಂದೆ ಅವರು ಲಭ್ಯವಿರಲಿದ್ದಾರೆ.
ವಿಳಾಸ : ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, 5ನೇ ಮಹಡಿ, ಆರೋಗ್ಯ ಸೌಧ, 1ನೇ ಅಡ್ಡ ರಸ್ತೆ, ಕುಷ್ಠರೋಗ ಆಸ್ಪತ್ರೆ ಆವರಣ, ಮಾಗಡಿ ರಸ್ತೆ, ಬೆಂಗಳೂರು 560023.
ದೂರವಾಣಿ ಸಂಖ್ಯೆಗಳು 080-23354085, 080-23354039.