ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಜನರಿಗೆ ಆರೋಗ್ಯ ಇಲಾಖೆಯ ಮನವಿ

|
Google Oneindia Kannada News

ಬೆಂಗಳೂರು, ಜುಲೈ 06 : ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಕೋವಿಡ್ - 19 ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾನುವಾರ ನಗರದಲ್ಲಿ 1235 ಹೊಸ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದ ಜನರು ಆತಂಕಗೊಂಡಿದ್ದಾರೆ.

Recommended Video

Chinese Army Vacates Galwan | Oneindia Kannada

ಆರೋಗ್ಯ ಇಲಾಖೆ ಬೆಂಗಳೂರು ನಗರದ ಜನರಿಗೆ ಮನವಿಯೊಂದನ್ನು ಮಾಡಿದೆ. ಜನರು ಯಾವುದೇ ಸಂದರ್ಭದಲ್ಲಿ ಆತಂಕ ಪಡುವುದು ಬೇಡ. ತುರ್ತು ಸಂದರ್ಭದಲ್ಲಿ ಜನರು ಕರೆ ಮಾಡಲು ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ.

ಬೆಂಗಳೂರು; ರಾತ್ರಿ 8ರ ಬಳಿಕ ಬಿಎಂಟಿಸಿ ಬಸ್ ಸಂಚಾರ ಸ್ಥಗಿತ ಬೆಂಗಳೂರು; ರಾತ್ರಿ 8ರ ಬಳಿಕ ಬಿಎಂಟಿಸಿ ಬಸ್ ಸಂಚಾರ ಸ್ಥಗಿತ

ಕೋವಿಡ್ - 19 ಸೇರಿದಂತೆ ಎಲ್ಲಾ ಆರೋಗ್ಯ ತುರ್ತು ಸಂದರ್ಭದಲ್ಲಿ 108 ಸಂಖ್ಯೆಗೆ ಕರೆ ಮಾಡಿ ಅಂಬ್ಯುಲೆನ್ಸ್ ಆಗಮಿಸಲಿದೆ ಎಂದು ಮನವಿ ಮಾಡಲಾಗಿದೆ.

ಸಮುದಾಯ ಹಂತ ತಲುಪಿದ ಕೊರೊನಾ: ಆರೋಗ್ಯ ಸಚಿವ ಎಚ್ಚರಿಕೆ ಸಮುದಾಯ ಹಂತ ತಲುಪಿದ ಕೊರೊನಾ: ಆರೋಗ್ಯ ಸಚಿವ ಎಚ್ಚರಿಕೆ

Health Department Appeal To Bengaluru People

ಒಂದು ವೇಳೆ ನೀವು ಕೋವಿಡ್ ಪಾಸಿಟಿವ್ ಅಥವ ತೀವ್ರ ಉಸಿರಾಟದ ತೊಂದರೆ ಹಾಗೂ ಕೋವಿಡ್ - 19 ಇತರ ಗುಣಲಕ್ಷಣಗಳನ್ನು ಹೊಂದಿದ್ದು, ಸರ್ಕಾರಿ ಅಥವ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಲು 108 ಅಂಬ್ಯುಲೆನ್ಸ್‌ಗೆ ಕರೆ ಮಾಡಬಹುದಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಹೋಮ್ ಐಸೋಲೇಶನ್ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರಹೋಮ್ ಐಸೋಲೇಶನ್ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

ಕೋವಿಡ್ - 19 ಪಾಸಿಟಿವ್ ರೋಗಿಗಳು ತಮ್ಮ ಹೆಸರು, ಎಸ್‌. ಆರ್. ಎಫ್ ಸಂಖ್ಯೆ ಮತ್ತು ನೋಂದಾಯಿತ ದೂರವಾಣಿ ಸಂಖ್ಯೆ 108/1912 ಸಂಪರ್ಕ ಕೇಂದ್ರದಲ್ಲಿ ನಮೂದಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಜನರು ಯಾವುದೇ ವೈದ್ಯಕೀಯ ಸಹಾಯ ಬೇಕಾದರೆ 1912 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಕೋವಿಡ್ - 19 ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ನಿರಾಕರಿಸಿದಲ್ಲಿ ಇದೇ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಸಹಾಯ ಕೇವಲ ಒಂದು ಕರೆಯ ಅಂತರದಲ್ಲಿದೆ ಜನರು ಆತಂಕಗೊಳ್ಳುವುದು ಬೇಡ ಎಂದು ಆರೋಗ್ಯ ಇಲಾಖೆ ಹೇಳಿದೆ.

ಬೆಂಗಳೂರು ನಗರದಲ್ಲಿ ಒಂದು ವಾರದಲ್ಲಿ ಪ್ರತಿದಿನ 500ಕ್ಕೂ ಹೆಚ್ಚು ಕೊರೊನಾ ವೈರಸ್ ಸೋಂಕಿತರ ಹೊಸ ಪ್ರಕರಣ ದಾಖಲಾಗುತ್ತಿದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 9580.

English summary
COVID 19 cases rising in Bengaluru city. Here are the appeal to Bengaluru people form health department of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X