ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಐಎಎಲ್ ಮಾರ್ಗದಲ್ಲಿ ಎರಡೂ ಬದಿ ಟೋಲ್ ಪಾವತಿ

|
Google Oneindia Kannada News

ಬೆಂಗಳೂರು, ಮಾರ್ಚ್ 14: ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಗೆ ಹೋಗುವ ಸಾರ್ವಜನಿಕರು ಇನ್ನುಮುಂದೆ ಸಾದಹಳ್ಳಿ ಟೋಲ್ ನಲ್ಲಿ ಎರಡು ಬಾರಿ ಟೋಲ್ ಕಟ್ಟಬೇಕಾಗುತ್ತದೆ.

ಇದುವರೆಗೆ ಸಾದಹಳ್ಳಿ ಟೋಲ್ ಬಳಿ ಏರ್ ಪೋರ್ಟ್ ಗೆ ಹೋಗುವ ವೇಳೆ ನೇರ ಸಾಗಿ, ಬರುವಾಗ ಅಪ್ ಅಂಡ್ ಡೌನ್ ಮಾರ್ಗದ ಹಣ ಪಾವತಿ ಮಾಡುವ ವ್ಯವಸ್ಥೆ ಇತ್ತು. ಅದು 24 ಗಂಟೆಯ ವ್ಯಾಲಿಡಿಟಿಯನ್ನು ಹೊಂದಿರುತ್ತಿತ್ತು.

ಬೆಂಗಳೂರಲ್ಲಿ ಇಂದಿನಿಂದ ಹೆಲಿ ಟ್ಯಾಕ್ಸಿ ಸೇವೆ ಕಾರ್ಯಾರಂಭ!ಬೆಂಗಳೂರಲ್ಲಿ ಇಂದಿನಿಂದ ಹೆಲಿ ಟ್ಯಾಕ್ಸಿ ಸೇವೆ ಕಾರ್ಯಾರಂಭ!

ಆದರೆ, ಏರ್ ಪೋರ್ಟ್ ಗೆ ಪರ್ಯಾಯ ಮಾರ್ಗ ಆರಂಭಗೊಂಡಿರುವ ಹಿನ್ನೆಯೆಲ್ಲಿ ಟೋಲ್ ಪ್ಲಾಜಾಗೆ ನಷ್ಟ ಉಂಟಾಗುತ್ತಿದೆ. ಹೀಗಾಗಿ ಎರಡೂ ಬದಿಯೂ ಟೋಲ್ ದರ ಪಡೆಯುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಮುಂದಿನ ವಾರದಿಂದ ಈ ವ್ಯವಸ್ಥೆ ಜಾರಿಗೆ ಬರುವ ಕುರಿತು ಪ್ರಾಧಿಕಾರ ಈಗಾಗಲೇ ಬ್ಯಾನರ್ ಅಳವಡಿಸಿದೆ.

Heading to Kempegowda International Airport? Pay toll both ways

ವಿಮಾನ ನಿಲ್ದಾಣಕ್ಕೆ ಕೆಲವು ದಿನಗಳ ಹಿಂದೆ ಪರ್ಯಾಯ ರಸ್ತೆ ಆರಂಭಗೊಂಡಿತ್ತು. ಇದಾದ ಬಳಿಕ ಕೆಲವು ವಾಹನಗಳು ಆ ರಸ್ತೆಯ ಮೂಲಕ ಸಾಗುತ್ತಿದೆ. ಅಲ್ಲದೆ, ಕೆಲವು ವಾಹನ ಚಾಲಕರು ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ, ಪರ್ಯಾಯ ರಸ್ತೆಯ ಮೂಲಕ ನಗರದೊಳಕ್ಕೆ ಬರುತ್ತಿವೆ.

ಹೀಗಾಗಿ ಪ್ರಾಧಿಕಾರಕ್ಕೆ ನಷ್ಟವಾಗುತ್ತಿದೆ. ಈ ಸೋರಿಕೆಯನ್ನು ತಡೆಯಲು ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯವಸ್ಥಾಪಕ ನಿರ್ದೇಶಕ ವೈ.ಯು. ಪ್ರಸಾದ್ ತಿಳಿಸಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಹಳೆ ಮಾದರಿ: ಹಿಂದೆ ಸಾದಹಳ್ಳಿ ಟೋಲ್ ನಲ್ಲಿ ಎರಡೂ ಬದಿ ಟೋಲ್ ಸಂಗ್ರಹ ಮಾಡುವ ವ್ಯವಸ್ಥೆ ಇತ್ತು. ಆದರೆ, ದೊಡ್ಡ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದ ಕಾರಣ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ವಿಮಾನಗಳು ತಪ್ಪುತ್ತಿತ್ತು. ಇದನ್ನು ತಪ್ಪಿಸಲು ಒಂದು ಬದಿಯಲ್ಲಿ ಮಾತ್ರ ಟೋಲ್ ಕಟ್ಟುವ ವ್ಯವಸ್ಥೆ ಜಾರಿಗೆ ತರಲಾಗಿತ್ತು.

English summary
Starting this week end, motorist heading to the Kempegowda International Airport will have to pay toll at Sadahalli plaza currently, motorist pay the cumulative toll fee fr both journeys when driving from the international airport to the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X