ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ನಾಯಕರ ತಿರುಕನ ಕನಸು: ಸಚಿವ ವೆಂಕಟರಮಣಪ್ಪ ಗೇಲಿ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 27: ಹಣೆಬರಹ ಗಟ್ಟಿ ಇದ್ದರೆ ಯಾರಾದರೂ ಸಿಎಂ ಆಗಬಹುದು. ಆದರೆ ಎಚ್.ಡಿ.ಕುಮಾರಸ್ವಾಮಿ ಐದು ವರ್ಷ ಸಿಎಂ ಆಗಿರುತ್ತಾರೆ. ಬಿಜೆಪಿ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಸಚಿವ ವೆಂಕಟರಮಣಪ್ಪ ಗೇಲಿ‌ ಮಾಡಿದ್ದಾರೆ.

ಮೈತ್ರಿ ಸರಕಾರ ಸುಭ್ರವಾಗಿದೆ ಐದು ವರ್ಷ ಅಧಿಕಾರದಲ್ಲಿರಲಿದೆ. ಸರ್ಕಾರದಲ್ಲಿ ಗೊಂದಲ ಇಲ್ಲ. ಬಿಜೆಪಿಯವರದ್ದು ತಿರುಕನ ಕನಸು. ಅವರು ಸರ್ಕಾರ ಬಿದ್ದು ಹೋಗಲಿ ಅಂತ ಕಾಯುತ್ತಿದ್ದಾರೆ ಆದರೆ ಸರ್ಕಾರ ಐದೂ ವರ್ಷ ಇರಲಿದೆ. ಕುಮಾರಸ್ವಾಮಿಯವರೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂದರು.

ರಾಮನಗರ : 11 ಜನರಿಗೆ 4 ವರ್ಷದ ಜೀತದಿಂದ ಮುಕ್ತಿ ನೀಡಿದ ಜಿಲ್ಲಾಡಳಿತ ರಾಮನಗರ : 11 ಜನರಿಗೆ 4 ವರ್ಷದ ಜೀತದಿಂದ ಮುಕ್ತಿ ನೀಡಿದ ಜಿಲ್ಲಾಡಳಿತ

ಸಿದ್ದರಾಮಯ್ಯ ಅವರು ಈ ಬಾರಿ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿಲ್ಲ. ಮುಂದಿನ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದು. ಸಿದ್ದರಾಮಯ್ಯ ಹೇಳಿಕೆಯನ್ನು ತಿರುಚಲಾಗಿದೆ.ಹಣೆಬರಹ ಚೆನಾಗಿದ್ದರೆ ಯಾರಾದ್ರೂ ಮುಖ್ಯಮಂತ್ರಿ ಆಗಬಹುದು ಎಂದು ಹೇಳಿದರು.

HDK will be CM for five years: Venkataramanappa

ಬಗಲಗುಂಟೆಯಲ್ಲಿ ಕಾರ್ಮಿಕರಿಗಾಗಿ ಅಪಾರ್ಟ್ ಮೆಂಟ್ ಮಾದರಿಯಲ್ಲಿ ಮನೆಗಳ ನಿರ್ಮಾಣ ಮಾಡಲಾಗುತ್ತದೆ, 5000 ಮನೆಗಳ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಕೂಲಿ ಕಾರ್ಮಿಕರ ಅನುಕೂಲಕ್ಕಾಗಿ ಈ ಮನೆಗಳ ನಿರ್ಮಿಸಲಾಗುತ್ತಿದೆ. ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಮೂಲಕ ಮನೆ ಕಟ್ಟಿಸಲು ಸರ್ಕಾರ ನಿರ್ಧಾರ ಮಾಡಲಾಗಿದೆ.

ಈಗಾಗಲೇ ಕಾರ್ಮಿಕರಿಗೆ ಟೈಲರಿಂಗ್, ಮೊಬೈಲ್ ದುರಸ್ತಿ, ಬಣ್ಣಬಳಿಯುವ ತರಬೇತಿ ನೀಡಿ, ಜೀವನೋಪಾಯಕ್ಕೆ ನೆರವು, ತರಬೇತಿ ಮುಗಿದ ಬಳಿಕ ಅವರಿಗೆ ಕಿಟ್ ಕೊಡಲಾಗುವುದು. ಸದ್ಯ ನೋಂದಾಣಿ ನವೀಕರಣ ಮಾಡಿರುವ ಸುಮಾರು 3-4ಲಕ್ಷ ಕಾರ್ಮಿಕರಿದ್ದಾರೆ.

ಸಮನ್ವಯ ಸಮಿತಿ ಅಸ್ತು ಅಂದ್ರೆ ಸಿದ್ದರಾಮಯ್ಯ ಸಿಎಂ:ಶಿವಶಂಕರ ರೆಡ್ಡಿ ಸಮನ್ವಯ ಸಮಿತಿ ಅಸ್ತು ಅಂದ್ರೆ ಸಿದ್ದರಾಮಯ್ಯ ಸಿಎಂ:ಶಿವಶಂಕರ ರೆಡ್ಡಿ

ಮೊದಲು ಕಾರ್ಮಿಕರು ಒಂದು ವರ್ಷಕ್ಕೊಮ್ಮೆ ನೋಂದಾಣಿ ಮಾಡಬೇಕಾಗಿತ್ತು ಈಗ ಅದನ್ನು ಮೂರು ವರ್ಷಕ್ಕೊಮ್ಮೆ ನೋಂದಣಿ ನವೀಕರಣ ಮಾಡಲು ನಿರ್ಧಾರ ಕಾರ್ಮಿಕರು ವರ್ಷಂಪ್ರತಿ ನೋಂದಣಿ ನವೀಕರಣಕ್ಕೆ ಅಧಿಕಾರಿಗಳ ಬಳಿ ಹೋಗುವುದನ್ನ ತಪ್ಪಿಸಲು ಚಿಂತನೆ ಮಾಡಲಾಗಿದೆ ಎಂದರು.

English summary
Labor minister Venkataramanappa has defended the collation government that will sustain for five and chief minister H.D.Kumaraswamy too in the office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X