ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್‌ ಕಾರ್ಯಕರ್ತರು ವಿಧಾನಸೌಧದಲ್ಲಿ ಕಾಣಿಸಿಕೊಳ್ಳುವಂತಿಲ್ಲ!

By Nayana
|
Google Oneindia Kannada News

Recommended Video

ವಿಧಾನಸೌಧಕ್ಕೆ ಕಾಲಿಡಬಾರದು ಎಂದು ಜೆಡಿಎಸ್ ಕಾರ್ಯಕರ್ತರಿಗೆ ತಾಕೀತು ಮಾಡಿರುವ ಎಚ್ ಡಿ ಕೆ

ಬೆಂಗಳೂರು, ಆಗಸ್ಟ್ 9: ವಿಧಾನಸೌಧದಲ್ಲಿ ಶಾಸಕರು ಸಚಿವರಿಗಿಂತ ಜೆಡಿಎಸ್‌ ಕಾರ್ಯಕರ್ತರೇ ಹೆಚ್ಚು ಕಾಣಿಸುತ್ತಿರುವುದಕ್ಕೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅಸಮಧಾನ ವ್ಯಕ್ತಪಡಿಸಿದ್ದು, ಇನ್ನುಮುಂದೆ ವಿಧಾನಸೌಧಕ್ಕೆ ಬಾರದಂತೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಜೆಡಿಎಸ್‌ ಸಭೆಯಲ್ಲಿ ಅಸಮಾಧಾನ ಹೊರಹಾಕಿರುವ ಕುಮಾರಸ್ವಾಮಿ, ವಿಧಾನಸೌಧದಲ್ಲಿ ಜೆಡಿಎಸ್‌ ಶಾಸಕರಿಗಿಂತಲೂ ಕಾರ್ಯಕರ್ತರು, ಮುಂಖಂಡರೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಹಾಗಾಗಿ ಏನೇ ಸಮಸ್ಯೆಗಳಿದ್ದರೂ ಜೆಪಿ ಭವನದಲ್ಲಿಯೇ ಬಗೆಹರಿಸಿಕೊಳ್ಳಬೇಕು ಯಾವುದೇ ಕಾರಣಕ್ಕೂ ವಿಧಾನಸೌಧಕ್ಕೆ ಬರೆಬೇಡಿ ಎಂದು ಸೂಚನೆ ನೀಡಿದ್ದಾರೆ.

ವಿಶ್ವನಾಥ್ ಆಯ್ಕೆ ಮೂಲಕ ದೇವೇಗೌಡರ ಮತ್ತೊಂದು ರಾಜಕೀಯ ಚತುರ ನಡೆವಿಶ್ವನಾಥ್ ಆಯ್ಕೆ ಮೂಲಕ ದೇವೇಗೌಡರ ಮತ್ತೊಂದು ರಾಜಕೀಯ ಚತುರ ನಡೆ

ಸಚಿವರನ್ನು ಭೇಟಿ ಮಾಡಬೇಕಿದ್ದರೆ ಜೆಪಿ ಭವನದಲ್ಲಿ ಭೇಟಿಯಾಗಿ, ವರ್ಗಾವಣೆ, ಬಡ್ತಿ ಕೆಲಸ ಮಾಡಿಸಿಕೊಳ್ಳಲು ವಿಧಾನಸೌಧಕ್ಕೆ ಬರುತ್ತಾರೆ, ಏನೇ ಇದ್ದರೂ ಇನ್ನುಮುಂದೆ ವಿಧಾನಸೌಧದಲ್ಲಿ ಕಾಣಿಸಿಕೊಳ್ಳಬಾರದು ಎಂದು ತಾಕೀತು ಮಾಡಿದ್ದಾರೆ.

HDK warns JDS leader not to enter vidhana soudha

ಎಲ್ಲಾ ಕೆಲಸಗಳನ್ನು ಮಾಡಿಸಿಕೊಳ್ಳಲು ವಿಧಾನಸೌಧಕ್ಕೆ ಬರುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಜೆಪಿ ಭವನದಲ್ಲಿ ಸಚಿವರಿಂದ ಜನತಾ ದರ್ಶನ ಕಾರ್ಯಕ್ರಮ ನಡೆಯುವ ಹಿನ್ನೆಲೆ ಜೆಡಿಎಸ್‌ ಕಾರ್ಯಕರ್ತರು, ಮುಖಂಡರು ಜೆಪಿ ಭವನಕ್ಕೇ ಬರಬೇಕು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

English summary
Chief minister HD Kumaraswamy shows his displeasure over entering JDS cadre into Vidhan Soudha. So he warns JDS leaders that don't come to Vidhan Soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X