ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಗಮ-ಮಂಡಳಿ ನೇಮಕಕ್ಕೆ ತಡೆ, ಸಿಎಂ ಕುಮಾರಸ್ವಾಮಿ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಜನವರಿ 9: ಕೆಲವು ರಾಜಕೀಯ ತೊಂದರೆಯಿಂದಾಗಿ ನಿಗಮ-ಮಂಡಿ ಸ್ಥಾನವನ್ನು ತಡೆಹಿಡಿಯಲಾಗಿದೆ, ಯಾರಿಗೂ ಅಗೌರವ ತೋರಬೇಕೆಂದು ನಾನು ಈ ರೀತಿ ಮಾಡಿಲ್ಲ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮ-ಮಂಡಳಿ ನೇಮಕದ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ವಿವಿಧ ರೀತಿಯಲ್ಲಿ ಮಾತನಾಡುತ್ತಿದ್ದಾರೆ, ಊಹಾಪೋಹಗಳೇ ಹೆಚ್ಚಾಗಿದೆ. ಕೆಲವು ರಾಜಕೀಯ ತೊಂದರೆಯಿಂದಾಗಿ ನೇಮಕಾತಿ ನಿಧಾನವಾಗುತ್ತಿದೆ ಇದಕ್ಕೆ ಬೇರೆ ಬಣ್ಣ ಬಳಿಯುವುದು ಬೇಡ ಎಂದು ಹೇಳಿದರು.

ನಿಗಮ ಮಂಡಳಿ ನೇಮಕ: ಕಾಂಗ್ರೆಸ್‌ಗೆ ಭಾರಿ ಶಾಕ್ ನೀಡಿದ ಕುಮಾರಸ್ವಾಮಿ ನಿಗಮ ಮಂಡಳಿ ನೇಮಕ: ಕಾಂಗ್ರೆಸ್‌ಗೆ ಭಾರಿ ಶಾಕ್ ನೀಡಿದ ಕುಮಾರಸ್ವಾಮಿ

ಮೈತ್ರಿ ಪಕ್ಷವಾದ ಕಾಂಗ್ರೆಸ್ ತನ್ನ ಸಚಿವ ಸ್ಥಾನವನ್ನು ಭರ್ತಿ ಮಾಡಿ, ನಿಗಮ ಮಂಡಳಿ ಸಂಸದೀಯ ಕಾರ್ಯದರ್ಶಿ ಸ್ಥಾನಕ್ಕೆ ಕೂಡ ನೇಮಕಾತಿ ಮಾಡಿದೆ, ಆದರೆ ಜೆಡಿಎಸ್ ಮಾತ್ರ ತನ್ನ ಸ್ಥಾನವನ್ನು ಹಾಗೆಯೇ ಉಳಿಸಿಕೊಂಡಿದೆ.

HDK statement over Boards and corporations appointment dealy

ಈ ಕಾರಣದಿಂದಾಗಿ ಜೆಡಿಎಸ್ ಪಾಲಿನ ನಿಗಮ ಮಂಡಳಿಗೆ ನೇಮಕಾತಿ ವಿಷಯದಲ್ಲಿ ಹಿರಿಯ ನಾಯಕರು ಕುಂಟು ನೆಪ ಹೇಳಿ ನೇಮಕಾತಿಯನ್ನು ಮುಂದೂಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿತ್ತು.

14 ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರಕಾರ14 ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರಕಾರ

ಈ ವಿಷಯ ಕುರಿತು ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ ಯಾರಿಗೂ ಅಗೌರವ ತೋರುವುದು ನನ್ನ ಉದ್ದೇಶವಲ್ಲ, ಕೆಲ ಆಂತರಿಕ ಸಮಸ್ಯೆಗಳಿವೆ ಹೀಗಾಗಿ ನಿಗಮ-ಮಂಡಳಿ ನೇಮಕವನ್ನು ಮುಂದೂಡಿದ್ದೇನೆ ಎಂದರು.

English summary
Chief minister HD Kumaraswamy says that there is some political reason behind the delay of Board and corporation appointment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X