ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿ ನಾಳೆ ವಿಶ್ವಾಸಮತ ಯಾಚನೆ ಮಾಡ್ತಾರೆ: ಡಿಕೆ ಶಿವಕುಮಾರ್

|
Google Oneindia Kannada News

ಬೆಂಗಳೂರು, ಜುಲೈ 21 : "ನಾಳೆ (ಸೋಮವಾರ) ಎಚ್. ಡಿ. ಕುಮಾರಸ್ವಾಮಿ ಅವರು ಸದನದಲ್ಲಿ ವಿಶ್ವಾಸ ಮತ ಯಾಚನೆ ಮಾಡುತ್ತಾರೆ. ಮುಂಬೈನಲ್ಲಿ ಇರುವ ಅತೃಪ್ತ ಶಾಸಕರು ವಾಪಸ್ ಬರುವ ವಿಶ್ವಾಸ ಇದೆ" ಎಂದು ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್ ಅವರು ಭಾನುವಾರ ಬೆಂಗಳೂರಿನಲ್ಲಿ ಹೇಳಿದರು.

ವಿಶ್ವಾಸಮತದ ಚರ್ಚೆ; ಮೈತ್ರಿ ಸರ್ಕಾರದ ಕಣ್ಣು ಸುಪ್ರೀಂ ತೀರ್ಪಿನ ಮೇಲೆ!ವಿಶ್ವಾಸಮತದ ಚರ್ಚೆ; ಮೈತ್ರಿ ಸರ್ಕಾರದ ಕಣ್ಣು ಸುಪ್ರೀಂ ತೀರ್ಪಿನ ಮೇಲೆ!

"ಶಾಸಕರನ್ನು ತಂದು ಕೂಡಿ ಹಾಕುವುದಕ್ಕೆ ಅವರು ಮಕ್ಕಳಲ್ಲ. ಹಾಗೆ ಮಾಡುವಂತಿದ್ದರೆ ಡಾ. ಸುಧಾಕರ್ ಹಾಗೂ ಎಂಟಿಬಿ ನಾಗರಾಜ್ ಅವರನ್ನು ಕೂಡಿ ಹಾಕಿಕೊಳ್ಳಬಹುದಿತ್ತು" ಎಂದು ಕೂಡ ಅವರು ಹೇಳಿದ್ದು, ಬಿಜೆಪಿಯವರು ಏನೇನು ತಂತ್ರಗಾರಿಕೆ ಬೇಕೋ ಮಾಡಿಕೊಳ್ಳಲಿ. ಅದು ಆ ಪಕ್ಷಕ್ಕೆ ಸಂಬಂಧಿಸಿದ ವಿಚಾರ ಎಂದು ಹೇಳಿದರು.

HDKs trust of vote tomorrow, said by DK Shivakumar

ಈ ಮಧ್ಯೆ ಅತೃಪ್ತರ ಶಾಸಕರ ಪೈಕಿ ಒಬ್ಬರಾದ ಹೊಸಕೋಟೆಯ ಎಂಟಿಬಿ ನಾಗರಾಜ್ ಮಾತನಾಡಿ, ನಾವು ಹದಿಮೂರು ಶಾಸಕರು ಒಗ್ಗಟ್ಟಾಗಿದ್ದೇವೆ. ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯುವ ಮಾತೇ ಇಲ್ಲ. ಸಿದ್ದರಾಮಯ್ಯ, ಶಿವಕುಮಾರ್ ಮತ್ತ್ಯಾರನ್ನಾದರೂ ಮುಖ್ಯಮಂತ್ರಿಯಾಗಿ ಮಾಡ್ತೀವಿ ಎಂದರೂ ನಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಅವರು ಹೇಳಿದ್ದಾರೆ.

English summary
HD Kumaraswamy's trust of vote tomorrow in session for sure, said by Congress leader DK Shivakumar in Bengaluru on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X